ನಾವು ಯುದ್ಧ ಮಾಡಲ್ಲ: ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು

| Published : Sep 15 2025, 01:01 AM IST

ನಾವು ಯುದ್ಧ ಮಾಡಲ್ಲ: ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಚೀನಾ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಯುದ್ಧದ ಯೋಜನೆಯನ್ನೂ ಮಾಡುವುದಿಲ್ಲ. ಶಾಂತಿ ಮಾತುಕತೆಗಳನ್ನು ಪ್ರೋತ್ಸಾಹಿಸುವ ಮತ್ತು ಸಂವಾದದ ಮೂಲಕ ರಾಜಕೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡುತ್ತದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ.

-ಚೀನಾ, ಯುರೋಪ್ ಪ್ರತಿಸ್ಪರ್ಧಿಗಳಲ್ಲ, ಸ್ನೇಹಿತರು: ವಾಂಗ್‌ ಯಿ

-ಶೇ.100 ತೆರಿಗೆ ಹೇರುವಂತೆ ನ್ಯಾಟೋಗೆ ಕರೆ ನೀಡಿದ್ದ ಟ್ರಂಪ್‌

ಲುಬ್ಲಿಯಾನಾ: ಚೀನಾ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಯುದ್ಧದ ಯೋಜನೆಯನ್ನೂ ಮಾಡುವುದಿಲ್ಲ. ಶಾಂತಿ ಮಾತುಕತೆಗಳನ್ನು ಪ್ರೋತ್ಸಾಹಿಸುವ ಮತ್ತು ಸಂವಾದದ ಮೂಲಕ ರಾಜಕೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಕೆಲಸ ಮಾಡುತ್ತದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ. ಈ ಮೂಲಕ ಚೀನಾ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವಂತೆ ನ್ಯಾಟೋ ರಾಷ್ಟ್ರಗಳಿಗೆ ಕರೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಟಾಂಗ್‌ ನೀಡಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮೇಲೆ ಶೇ.50-100ರಷ್ಟು ತೆರಿಗೆ ವಿಧಿಸುವಂತೆ ಮತ್ತು ರಷ್ಯಾ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಟ್ರಂಪ್ ನ್ಯಾಟೋ ರಾಷ್ಟ್ರಗಳಿಗೆ ಮನವಿ ಮಾಡಿದ್ದರು.

ಸ್ಲೊವೇನಿಯಾ ರಾಜಧಾನಿ ಲುಬ್ಲಿಯಾನಾ ಪ್ರವಾಸದಲ್ಲಿರುವ ವಾಂಗ್‌ ಯಿ ಪತ್ರಿಕಾಗೋಷ್ಠಿ ನಡೆಸಿ ಟ್ರಂಪ್‌ರ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ.

‘ಚೀನಾ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ ಮತ್ತು ಶಾಂತಿ ಮಾತುಕತೆ ಮೂಲಕ ತೀವ್ರ ರಾಜಕೀಯ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತದೆ. ಚೀನಾ ಮತ್ತು ಯುರೋಪ್ ಪ್ರತಿಸ್ಪರ್ಧಿಗಳಲ್ಲ, ಬದಲಾಗಿ ಸ್ನೇಹಿತರಾಗಿರಬೇಕು. ಒಬ್ಬರನ್ನೊಬ್ಬರು ಎದುರಿಸುವ ಬದಲು ಸಹಕರಿಸಬೇಕು’ ಎಂದಿದ್ದಾರೆ.