ಸಾರಾಂಶ
ಜಾತ್ರಾ ಮಹೋತ್ಸವದ ಲೆಕ್ಕಪತ್ರಗಳ ಸಭೆ । ಮುಂದಿನ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಸಲು ತೀರ್ಮಾನ
ಕನ್ನಡಪ್ರಭ ವಾರ್ತೆ ಕುಷ್ಟಗಿಪಟ್ಟಣದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವದ ಲೆಕ್ಕಪತ್ರಗಳ ಸಭೆ ನಡೆಯಿತು.
ಸಭೆಯ ನೇತೃತ್ವ ವಹಿಸಿದ ಸಮಿತಿಯ ಅಧ್ಯಕ್ಷ ರವಿಕುಮಾರ ಹಿರೇಮಠ ಮಾತನಾಡಿ, ಸುಮಾರು 65 ವರ್ಷಗಳ ನಂತರ ನಡೆದ ದ್ಯಾಮವ್ವ ದೇವಿಯ ಜಾತ್ರೆಯನ್ನು ಸುಮಾರು 11 ದಿನಗಳ ಕಾಲ ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ಭಕ್ತವೃಂದಕ್ಕೆ ಧನ್ಯವಾದ ತಿಳಿಸುವುದಾಗಿ ಹೇಳಿದರು.ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಂದ ಹಾಗೂ ದೇವಸ್ಥಾನದ ಹುಂಡಿಯಲ್ಲಿ ಒಟ್ಟು ₹1,25,88,020 ಜಮೆಯಾಗಿದ್ದು, ಈ ಪೈಕಿ ಜಾತ್ರೆಯ ಖರ್ಚು ₹68,56,929 ಆಗಿದ್ದು, ಇನ್ನು ₹ 56,31.091 ಉಳಿದಿದೆ ಎಂದು ಮಾಹಿತಿ ನೀಡಿದರು.
ಖರ್ಚಿನ ವಿವರ:ಸ್ವಚ್ಛತಾ ಕಾರ್ಯಕ್ಕೆ ₹1,28,600, ಸೀಮಾ ಪ್ರದೇಶದ ಸ್ವಚ್ಛತೆಗೆ ₹1,59,150, ಪ್ರಿಂಟಿಂಗ್ ಮತ್ತು ಫೋಟೋಗ್ರಾಫರ್‌ಗಳಿಗೆ ₹1,43,100, ಪೆಂಡಾಲ್ ಸಪ್ಲೈಯರ್ ಖರ್ಚು ₹5,68,790, ಶ್ರೀ ದೇವಿಯ ಗುಡಿಯ ಖರ್ಚು ₹26,67,339, ಸೌಂಡ್ ಸಿಸ್ಟಮ್ ಮತ್ತು ಲೈಟಿಂಗ್ ಖರ್ಚು ₹2, 70,130, ದಕ್ಷಣೆ ಬಾಬತ್ತು ಲೇಬಗೇರಿ ಸ್ವಾಮಿಗಳಿಗೆ ಮತ್ತು ಪೂಜಾರಿಗಳಿಗೆ ನೀಡಿದ್ದು ₹1,39,052, ಸಾರಿಗೆ ಮತ್ತು ಕುಡಿಯುವ ನೀರಿಗೆ ₹39,845, ಕಿರಾಣಿ ಮತ್ತು ಹಾಲು, ಮೊಸರು, ಪ್ರಸಾದ ಸೇವೆಗೆ, ಅಡಿಗೆ ಭಟ್ಟರಿಗೆ ಗೌರವಧನ ಸಲ್ಲಿಸಿದ್ದು ₹18,52,918, ಊರಿನ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಹಚ್ಚಿದ ಕೂಲಿ ₹3,24, 745, ಮನರಂಜನೆ ಮತ್ತು ನಾಟಕ ಹಾಗೂ ರಸಮಂಜರಿ ಕಾರ್ಯಕ್ರಮದ ಖರ್ಚು ₹ 1,90,750, ಮೆರವಣಿಗೆ ಖರ್ಚು ₹4,72,510 ಸೇರಿದಂತೆ ಜಾತ್ರೆಗೆ ಒಟ್ಟು ಖರ್ಚು ₹68,56,929 ಖರ್ಚಾಗಿದೆ.ಸಮಸ್ತ ನಾಗರಿಕರ ಒಪ್ಪಿಗೆ ಮೇರೆಗೆ ಉಳಿದ ಹಣವನ್ನು ಶ್ರೀ ದ್ಯಾಮಾಂಬಿಕಾ ದೇವಿಯ ದೇವಸ್ಥಾನದ ಸಮಿತಿಯ ಬ್ಯಾಂಕ್ ಖಾತೆಯಲ್ಲಿ ₹50 ಲಕ್ಷವನ್ನು ಐದು ವರ್ಷಗಳ ಕಾಲ ಠೇವಣಿ ಇಡಲಾಗುತ್ತದೆ. ಇನ್ನುಳಿದ ₹6.31.091ನ್ನು ಎಸ್.ಬಿ. ಖಾತೆಯಲ್ಲಿ ಉಳಿಸಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಇಡಲಾಗುವುದು ತಿಳಿಸಿದರು.
ಐದು ವರ್ಷಕ್ಕೊಮ್ಮೆ ಆಚರಣೆ:ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯನ್ನು ಅತ್ಯಂತ ಅದ್ಧೂರಿಯಾಗಿ ಪ್ರತಿ 5 ವರ್ಷಕ್ಕೊಮ್ಮೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಸಪ್ತ ಭಜನೆಯ ಶಿವನ ಮೇಟಿ ಕಂಬವನ್ನು ಹರಾಜು ಮಾಡಲಾಯಿತು. ಈ ಸಂದರ್ಭದಲ್ಲಿ ಗಂಗಾಧರಯ್ಯ ಹಿರೇಮಠ, ಶಶಿಧರ ಕವಲಿ, ದೇವಪ್ಪ ಕಟ್ಟಿಹೊಲ, ಮಾನಪ್ಪ ಕಮ್ಮಾರ, ನಾಗರಾಜ ಮೇಲಿನಮನಿ, ಮಹಾಂತಯ್ಯ ಅರಳೇಲಿಮಠ, ಕಲ್ಲೇಶ ತಾಳದ, ಉಮೇಶ ಮಂಗಳೂರ, ರಮೇಶ ಹಿರೇಮನಿ, ಭರಮಪ್ಪ ಚೌಡ್ಕಿ ಸೇರಿದಂತೆ ಅನೇಕ ಗುರು ಹಿರಿಯರು ಇದ್ದರು.