ಸಾರಾಂಶ
ನೂತನ ಡಿಜಿಟಲ್ ಲೈಬ್ರರಿಯಲ್ಲಿ 3000ಕ್ಕೂ ಹೆಚ್ಚಿನ ಕಲಿಕಾ ಪುಸ್ತಕ, 100ಕ್ಕೂ ಅಧಿಕ ಮ್ಯಾಗಜೀನ್, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಮ್ಯಾಗಜೀನ್ ಒಳಗೊಂಡಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಡಿಜಿಟಲ್ ಗ್ರಂಥಾಲಯವನ್ನು ಮೇ 21 ರಂದು ಕಾಲೇಜಿನ ಪ್ರಾಚಾರ್ಯರಾದ ಆಶಾ ಉದ್ಘಾಟಿಸಿದರು.ನಂತರ ಅವರು ಇ - ಲೈಬ್ರೆರಿಯು ಇಂದಿನ ಸ್ಪರ್ಧಾತ್ಮಕ ಕಾಲಘಟ್ಟಕ್ಕೆ ಅತ್ಯಗತ್ಯ ಆಗಿದ್ದು, ಈ ನೂತನ ಡಿಜಿಟಲ್ ಲೈಬ್ರೆರಿಯು 3000 ಕ್ಕೂ ಹೆಚ್ಚಿನ ಕಲಿಕಾ ಪುಸ್ತಕಗಳು, 100 ಕ್ಕೂ ಅಧಿಕ ಮ್ಯಾಗಜೀನ್ ಗಳು ಹಾಗೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಅನುಕೂಲವಾಗುವ ಪುಸ್ತಕಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಡ್ವೈಸ್ ನ ಸಂಸ್ಥಾಪಕ ಧೀರಜ್ ಮಂಗಳೂರು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಭಾ ಕಾಮತ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕಿ ಪಲ್ಲವಿ ನಿರೂಪಿಸಿದರು.