ಅರೇಹಳ್ಳಿ ಸಮೀಪವಿರುವ ಬಿಆರ್‌ಎಲ್‌ ಎಸ್ಟೇಟ್ ಬಳಿ ಮಲಸಾವರ ಗ್ರಾಮದಿಂದ ಅರೇಹಳ್ಳಿ ಪಟ್ಟಣಕ್ಕೆ ಬರುತ್ತಿದ ಆಟೋ ಮೇಲೆ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿ ಆಟೋವನ್ನು ರಸ್ತೆಯ ಬದಿಯ ಚರಂಡಿಗೆ ಎತ್ತಿ ಬಿಸಾಡಿದೆ. ಇದರಿಂದ ಆಟೋ ಚಾಲಕ ಮಹಮ್ಮದ ಆಲಿ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಪ್ರಯಾಣಿಕ ಮಹಿಳೆ ಪಲ್ಲವಿ ಎಂಬುವವರಿಗೆ ತಲೆ, ಕೈ ಕಾಲು ಹಾಗೂ ದೇಹದ ಇತರೆ ಭಾಗಗಳಿಗೆ ಗಾಯಗಳಾಗಿವೆ. ಆಟೋ ಜಖಂಗೊಂಡು ಚರಂಡಿಯಲ್ಲಿ ಮಗಚಿ ಬಿದ್ದಿದೆ, ಸ್ಥಳೀಯರು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಅರೇಹಳ್ಳಿ ಭಾಗದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದ ಸಾಕಷ್ಟು ಬೆಳೆ ಹಾನಿ, ಪ್ರಾಣಹಾನಿಗಳಾಗಿದ್ದರೂ ಇದುವರೆಗೆ ಶಾಶ್ವತ ಪರಿಹಾರ ಸಿಗದೆ ಇರುವ ಬೆನ್ನಲ್ಲೇ ಇಂದು ಕಾಡುಕೋಣಗಳು ಚಲಿಸುತ್ತಿದ್ದ ಆಟೋ ಮೇಲೆ ದಾಳಿ ಮಾಡಿದ್ದು ಸ್ಥಳೀಯರು ಹಾಗೂ ಕೃಷಿಕರು ಇನ್ನಷ್ಟು ಆತಂಕಕ್ಕೀಡಾಗಿದ್ದಾರೆ.ಘಟನೆ ವಿವರ:

ಇಂದು ಬೆಳಿಗ್ಗೆ ಸುಮಾರು 8.30ರ ವೇಳೆಯಲ್ಲಿ ಅರೇಹಳ್ಳಿ ಸಮೀಪವಿರುವ ಬಿಆರ್‌ಎಲ್‌ ಎಸ್ಟೇಟ್ ಬಳಿ ಮಲಸಾವರ ಗ್ರಾಮದಿಂದ ಅರೇಹಳ್ಳಿ ಪಟ್ಟಣಕ್ಕೆ ಬರುತ್ತಿದ ಆಟೋ ಮೇಲೆ ಕಾಡುಕೋಣವೊಂದು ಏಕಾಏಕಿ ದಾಳಿ ನಡೆಸಿ ಆಟೋವನ್ನು ರಸ್ತೆಯ ಬದಿಯ ಚರಂಡಿಗೆ ಎತ್ತಿ ಬಿಸಾಡಿದೆ. ಇದರಿಂದ ಆಟೋ ಚಾಲಕ ಮಹಮ್ಮದ ಆಲಿ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಪ್ರಯಾಣಿಕ ಮಹಿಳೆ ಪಲ್ಲವಿ ಎಂಬುವವರಿಗೆ ತಲೆ, ಕೈ ಕಾಲು ಹಾಗೂ ದೇಹದ ಇತರೆ ಭಾಗಗಳಿಗೆ ಗಾಯಗಳಾಗಿವೆ. ಆಟೋ ಜಖಂಗೊಂಡು ಚರಂಡಿಯಲ್ಲಿ ಮಗಚಿ ಬಿದ್ದಿದೆ, ಸ್ಥಳೀಯರು ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆಟೋ ಚಾಲಕ ಚಾರ್ಲಿ ಚಂದನ್ ಮಾತನಾಡಿ, ನಮ್ಮ ಭಾಗದಲ್ಲಿ ನಿತ್ಯ ಕಾಡಾನೆಗಳ ಹಾವಳಿಯಿಂದ ರಸ್ತೆಯಲ್ಲಿ ಜನಸಾಮಾನ್ಯರು ತಿರುಗಾಡಲು ಭಯಪಡುವಂತಾಗಿದೆ. ಇವುಗಳ ನಡುವೆ ಇತ್ತೀಚೆಗೆ ಕಾಡುಕೋಣಗಳ ತಿರುಗಾಟವು ಹೆಚ್ಚಾಗಿದೆ. ಆಟೋ ಚಾಲನೆಯಿಂದಲೇ ನಮ್ಮ ಜೀವನ ಸಾಗುತ್ತಿದ್ದು ಇಂತಹ ಸನ್ನಿವೇಶಗಳನ್ನು ನೋಡಿದರೆ ಜೀವನ ಸಾಗಿಸಲು ಆತಂಕವಾಗಿದೆ. ಜಖಂಗೊಂಡ ಆಟೋಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಜನಪ್ರತಿನಿಧಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.