ಲಕ್ಷ್ಮಿ(ಕೆವಿಸಿ) ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತ ಹಾಗೂ ಆತ್ಯಾಧುನಿಕ ತಂತ್ರಜ್ಞಾನದಡಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 50 ಹಾಸಿಗೆಯ ಸಾಮರ್ಥ್ಯದ ಸೌಲಭ್ಯ ಹೊಂದಿದೆ. ರೋಗಿಗಳಿಗೆ ಅನುಕೂಲವಾಗುವ ಕೊಠಡಿಗಳು, ನುರಿತ ವೈದ್ಯರ ಸೇವೆ ಸಿಗಲಿದೆ.

ಪಾಂಡವಪುರ:

ಪಟ್ಟಣದ ಮೈಸೂರು ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಲಕ್ಷ್ಮೀ(ಕೆವಿಸಿ) ಆಸ್ಪತ್ರೆಯನ್ನು ಫೆ.1ರಂದು ಉದ್ಘಾಟನೆ ಮಾಡಲಾಗುವುದು ಎಂದು ಆಸ್ಪತ್ರೆ ಹಣಕಾಸು ಸಲಹೆಗಾರ ಎಂ.ಚೇತನ್ ಹೇಳಿದರು.

ಪಟ್ಟಣದ ಲಕ್ಷ್ಮೀ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಗೆ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಸೇರಿದಂತೆ ತಾಲೂಕಿನ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಲಕ್ಷ್ಮಿ(ಕೆವಿಸಿ) ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತ ಹಾಗೂ ಆತ್ಯಾಧುನಿಕ ತಂತ್ರಜ್ಞಾನದಡಿ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 50 ಹಾಸಿಗೆಯ ಸಾಮರ್ಥ್ಯದ ಸೌಲಭ್ಯ ಹೊಂದಿದೆ. ರೋಗಿಗಳಿಗೆ ಅನುಕೂಲವಾಗುವ ಕೊಠಡಿಗಳು, ನುರಿತ ವೈದ್ಯರ ಸೇವೆ ಸಿಗಲಿದೆ. ಎಲ್ಲಾ ತರಹದ ಶಸ್ತ್ರ ಚಿಕಿತ್ಸೆ ವ್ಯವಸ್ಥೆ, ಆಂಬ್ಯೂಲೆನ್ಸ್ ಸೇವೆಯ ಸೌಲಭ್ಯ ಹೊಂದಿದೆ. ಜತೆಗೆ ಸರ್ಕಾರ ಯೋಜನೆಗಳಾದ ಯಶಸ್ವಿನಿ, ಬಿಪಿಎಲ್ ಕಾರ್ಡ್ ಸೇರಿದಂತೆ ಆರೋಗ್ಯ ವಿಮೆ ಸೌಲಭ್ಯ ಒಳಪಟ್ಟಿದೆ ಎಂದರು.

ಗ್ರಾಮೀಣ ಪ್ರದೇಶದ ಜನರೇ ಹೆಚ್ಚಾಗಿರುವ ಈ ಪ್ರದೇಶದ ಸುತ್ತಮುತ್ತಲ ಜನರಿಗೆ ಉತ್ತಮ ಸೇವೆ ನೀಡಲು ನಮ್ಮ ಆಸ್ಪತ್ರೆ ಸಿದ್ಧಗೊಂಡಿದೆ. ಕೆವಿಸಿ ಆಸ್ಪತ್ರೆಯನ್ನು ವೈದ್ಯರೇ ಸೇರಿ ಕಟ್ಟಿರುವುದರಿಂದ ರೋಗಿಗಳಿಗೆ ಉತ್ತಮ ಸೇವೆ ನೀಡಲಿದ್ದೇವೆ. ಆರಂಭದಲ್ಲಿ ಮೆಡಿಷನ್‌ಗೆ ಶೇ.15 ಹಾಗೂ ಚಿಕಿತ್ಸೆಗೆ ಶೇ.20ರಷ್ಟು ರಿಯಾಯ್ತಿ ಸೌಲಭ್ಯವನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಆಸ್ಪತ್ರೆ ನಿರ್ವಹಣೆ ನಿರ್ದೇಶಕಿ ಸಿ.ಕಮಲಾಕ್ಷಿ, ಮೂಳೆ ಶಸ್ತ್ರ ವೈದ್ಯ ಡಾ.ನಂದೀಶ್, ಡಾ.ದೀಪಕ್ ಬಿ.ಗೌಡ, ಡಾ.ರಾಜೇಶ್, ಶ್ರೀಎಂ.ಲೆನಿನ್, ಆಸ್ಪತ್ರೆ ಯೂನಿಟ್ ಮುಖ್ಯಸ್ಥ ಪಿ.ವಿ.ಭಾಸ್ಕರ್ ಸೇರಿದಂತೆ ಹಲವರು ಇದ್ದರು.

ಶ್ರೀ ಮರೀದೇವರು ಶಿವಯೋಗಿಗಳ 132ನೇ ವರ್ಷದ ಜಯಂತಿ: ಎಸ್.ಆನಂದ್

ಕನ್ನಡಪ್ರಭ ವಾರ್ತೆ ಪಾಂಡವಪುರ

ಬೇಬಿ ದುರ್ದೇಂಡೇಶ್ವರ ಮಠದ ಲಿಂಗೈಕ್ಯ ಶ್ರೀಮರೀದೇವರು ಶಿವಯೋಗಿ ಮಹಾಸ್ವಾಮಿಗಳ 132ನೇ ವರ್ಷದ ಜಯಂತಿ ಹಾಗೂ ಧಾರ್ಮಿಕ ಕಾರ್ಯಕ್ರಮ ಫೆ.1ರಂದು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ಏರ್ಪಡಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ್ ತಾಳಶಾಸನ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಉಪಸಭಾಪತಿ ರುದ್ರಪ್ಪಲಂಬಾಣಿ, ಸೆಸ್ಕ್ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ, ಪರಿಸರ ಮಾಲಿನ್ಯ ಅಧ್ಯಕ್ಷ ನರೇಂದ್ರಸ್ವಾಮಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ಅರಣ್ಯ ಅಧ್ಯಕ್ಷ ಶಿವಣ್ಣ, ವಿಶ್ವ ಒಕ್ಕಲಿಗರ ಮಠದ ಶ್ರೀನಿಶ್ಚಲಾನಂದನಾಥಸ್ವಾಮೀಜಿ, ಶ್ರೀಹನುಮಂತಸ್ವಾಮಿ, ನರಳೇಗವಿಸ್ವಾಮಿ, ಎಂ.ಎಲ್.ಹುಂಡಿಸ್ವಾಮೀಜೀ, ಗವಿಮಠದ ಸ್ವಾಮೀಜಿ, ಹುಕ್ಕೇರಿ ಮಠದ ಸ್ವಾಮೀಜಿ, ತೆಂಡೇಕೆರೆಮಠದ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

ಬೇಬಿ ದುರ್ದೇಂಡೇಶ್ವರಮಠ ಹಾಗೂ ಚಂದ್ರವನ ಆಶ್ರಮವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಸರ್ವಧರ್ಮದ ಶಾಂತಿಯ ತೋಟದಂತೆ ಕೆಲಸ ಮಾಡುತ್ತಿದೆ. ಮಠಕ್ಕೆ ಯಾವುದೇ ಆಸ್ತಿ ಇಲ್ಲವಾದರೂ ಸಮಾಜದಲ್ಲಿ ಭಿಕ್ಷಾಟನೆ ಮಾಡಿ ಮಠವನ್ನು ಬೆಳೆಸುವ ಜತೆಗೆ ಸಾಮಾಜಿಕ ಸೇವಾ ಕಾರ್ಯ ಮಾಡಲಾಗಿದೆ ಎಂದರು.

ಎಸ್.ಎ.ಮಲ್ಲೇಶ್ ಮಾತನಾಡಿ, ಶ್ರೀಮರೀದೇವರು ಉತ್ತರ ಕರ್ನಾಟಕದಿಂದ ಬಂದು ಪಾಳಮಂಟಪವನ್ನು ಮಠವನ್ನಾಗಿ ಪರಿವರ್ತಿಸಿ ಈ ಭಾಗದಲ್ಲಿ ಧಾರ್ಮಿಕ ಸೇವಾ ಕಾರ್ಯ ಮಾಡಿದರು. ಅವರ ನಂತರ ಶ್ರೀತ್ರಿನೇತ್ರಮಹಂತಶಿವಯೋಗಿ ಸ್ವಾಮೀಜಿಗಳು ಉತ್ತಮವಾದ ರೀತಿಯಲ್ಲಿ ನಕೆಲಸ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಚ್.ಆರ್.ಧನ್ಯಕುಮಾರ್, ಸಾಹಿತಿ ಚಂದ್ರಶೇಖರಯ್ಯ, ಈರಣ್ಣ ಇದ್ದರು.