ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹಳೆಯ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಆದರೆ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಬಾವಲಿಗಳು ನಿರಾಶ್ರಿತವಾಗಿ ಮೂಕ ರೋಧನೆ ಅನುಭವಿಸಿದವು. ಮರವು ಹಳೆಯಾಗಿದ್ದು, ಈ ಮರದಲ್ಲಿನ ಹಲವು ಕೊಂಬೆಗಳು ಓಡಾಡುವ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು.
ಹೊಳೆನರಸೀಪುರ: ಪಟ್ಟಣದ ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹಳೆಯ ಬೃಹತ್ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಂತ್ರಗಳ ಮೂಲಕ ತೆರವುಗೊಳಿಸಿದರು. ಆದರೆ ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಬಾವಲಿಗಳು ನಿರಾಶ್ರಿತವಾಗಿ ಮೂಕ ರೋಧನೆ ಅನುಭವಿಸಿದವು.
ಪಟ್ಟಣದ ಮಹಾರಾಜ ಪಾರ್ಕ್ ಪಕ್ಕದಲ್ಲಿದ್ದ ಹತ್ತಾರು ವರ್ಷಗಳಿಂದ ಈ ಮರಗಳು ಬೃಹದಾಕಾರವಾಗಿ ಬೆಳೆದು ದೊಡ್ಡ ದೊಡ್ಡ ಕೊಂಬೆಗಳು ಸುತ್ತಲೂ ಹರಡಿಕೊಂಡಿದ್ದವು. ಮರವು ಹಳೆಯಾಗಿದ್ದು, ಈ ಮರದಲ್ಲಿನ ಹಲವು ಕೊಂಬೆಗಳು ಓಡಾಡುವ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಬಿದ್ದು ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಜತೆಗೆ ಕಳೆದ ವಾರದ ಹಿಂದೆ ಸಂಚರಿಸುತ್ತಿದ್ದ ವಾಹನದ ಮೇಲೆ ಸಣ್ಣ ಕೊಂಬೆಗಳು ಬಿದ್ದು ಅವಘಡ ಸೃಷ್ಟಿಯಾಗಿತ್ತು. ಆದರೆ ಯಾವುದೇ ಅನಾಹುತ ನಡೆದಿರಲಿಲ್ಲ. ಈ ಘಟನೆ ಸಂಬಂಧ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಕಾರ್ಯಕರ್ತರು ಮತ್ತು ವಾಹನ ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಸಂಸದರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಈ ಬೃಹತ್ ಮರದ ಕೊಂಬೆಗಳು ಕೆಳಗೆ ಬೀಳುತ್ತಿರುವುದನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಮಾಹಿತಿ ನೀಡಿದರು ಎಂಬ ಸೂಚನೆ ಪ್ರಕಾರ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿದರು. ತೆರವು ಕಾರ್ಯದ ವೇಳೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ ಪಟ್ಟಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.