ಶಿವರಾಮೇಗೌಡರ ವ್ಯಕ್ತಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೆ ನಷ್ಟ. ಅವಮಾನ ಕಟ್ಟಿಟ್ಟ ಬುತ್ತಿ. ತಕ್ಷಣ ಅವರನ್ನು ಪಕ್ಷದಿಂದ ಹೊರಹಾಕಬೇಕು. ತಕ್ಷಣ ಆತ ಸಾರ್ವಜನಿವಾಗಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಾಜಿ ಸಂಸದ, ಕಾವೇರಿ ಹೋರಾಟಗಾರ ದಿ.ಜಿ.ಮಾದೇಗೌಡರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ಧ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ.ನಂಜೇಗೌಡ ಆಗ್ರಹಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಕ್ತಿಯೊಬ್ಬರ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡುವಾಗ ಜಿ.ಮಾದೇಗೌಡರು ನಾಗಮಂಗಲ ಕ್ಷೇತ್ರದಿಂದ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ತಪ್ಪಿಸಿದ್ದರು ಎಂದು ಹಿರಿಯ ಗಾಂಧಿವಾದಿ ಸುಸಂಸ್ಕೃತ ವ್ಯಕ್ತಿ ಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದರು.
ಈ ಹಿಂದೆಯೂ ಕೂಡ ಜಿ.ಮಾದೇಗೌಡರ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ಮೊಬೈಲ್‌ನಲ್ಲಿ ಮಾತನಾಡುವ ಅವಹೇಳನ ಮಾಡಿದ್ದರು. ಆ ವೇಳೆ ಸಾರ್ವಜನಿಕರು ಪ್ರತಿಭಟಿಸಿದ ನಂತರ ಕ್ಷಮೆ ಕೋರಿದ್ದು, ತನ್ನ ಹೊಲಸು ನಾಲಿಗೆಯಲ್ಲಿ ಗೌಡರ ಬಗ್ಗೆ ಅವಹೇಳನ ಮುಂದುವರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಜಿ.ಮಾದೇಗೌಡರು ಜೀವತಾವಧಿವರೆಗೂ ರೈತರಿಗಾಗಿ ಹೋರಾಟ ಮಾಡಿದ್ದ ಧೀಮಂತ ವ್ಯಕ್ತಿ. ಅಲ್ಲದೇ, ಮಾಜಿ ಸಂಸದ ಅಂಬರೀಶ್ ಸೇರಿ ಹಲವರ ಬಗ್ಗೆ ನಾಲಿಗೆ ಹರಿಬಿಡುವ ಮೂಲಕ ತಾನೊಬ್ಬ ಮಾನಸಿಕ ಅಸ್ವಸ್ಥ ಎಂದು ಸಾಬೀತುಮಾಡಿದ್ದಾನೆ. ಇಂಥ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಲು ಅರ್ಹನಲ್ಲ. ಶಿವರಾಮೇಗೌಡರಿಗೆ ಜನ ಮುಂದೆ ಬುದ್ಧಿಕಲಿಸಲಿದ್ದಾರೆ ಎಂದರು.
ಶಿವರಾಮೇಗೌಡರ ವ್ಯಕ್ತಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೆ ನಷ್ಟ. ಅವಮಾನ ಕಟ್ಟಿಟ್ಟ ಬುತ್ತಿ. ತಕ್ಷಣ ಅವರನ್ನು ಪಕ್ಷದಿಂದ ಹೊರಹಾಕಬೇಕು. ತಕ್ಷಣ ಆತ ಸಾರ್ವಜನಿವಾಗಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.ರಾಜಕೀಯ ಲಾಭಕ್ಕಾಗಿ ಈ ಹಿಂದೆ ಕೇಂದ್ರದ ಮಾಜಿ ಸಚಿವ ದಿ.ಅಂಬರೀಷ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ. ಈಗ ಮತ್ತೆ ಅವರ ಬಗ್ಗೆಯು ಕೀಳಾಗಿ ಮಾತನಾಡಿರುವುದು ಆತನಿಗೆ ಶೋಭೆ ತರುವುದಿಲ್ಲ. ಮಾನಸಿಕ ಸೀಮಿತತೆ ಕಳೆದುಕೊಂಡಿರುವ ಎಲ್.ಆರ್. ಶಿವರಾಮೇಗೌಡರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.