ಸಾರಾಂಶ
ನವಲಗುಂದ:
ಮಲಪ್ರಭಾ ನದಿಗೆ ಡ್ಯಾಮನ್ನು ಕೃಷಿ ಚಟುವಟಿಕೆಗಾಗಿ ನಿರ್ಮಿಸಲಾಗಿದೆಯೇ ಹೊರತು ಹುಬ್ಬಳ್ಳಿ-ಧಾರವಾಡದ ಜನತೆಗೆ ಕುಡಿಯಲು ಅಲ್ಲ. ಆದರೂ ಆ ಜನತೆಗೆ ಕುಡಿಯಲು ನೀರು ಶೇಕಡಾ ಅರ್ಧದಷ್ಟು ಮೀಸಲಿಡಲಾಗಿದೆ. ಅಲ್ಲಿಯ ಜನತೆಯೂ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡಬೇಕು. ಈ ಮೂಲಕ ಯೋಜನೆ ಜಾರಿಗಾಗಿ ಪಣತೊಟ್ಟು ನಿಲ್ಲಬೇಕೆಂದು ರೈತ ಮುಖಂಡ ಲೋಕನಾಥ ಹೆಬಸೂರ ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವಿವಿಧ ರೈತ ಪರ ಸಂಘಟನೆಗಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜು. 21ರಂದು ಮಹದಾಯಿ, ಕಳಸಾ- ಬಂಡೂರಿ ನಾಲಾ ಜೋಡಣೆಗೆ ಉಭಯ ಸರ್ಕಾರಗಳ ಮಾಡುತ್ತಿರುವ ನಾಟಕವನ್ನು ಜನರಿಗೆ ತಿಳಿಸಲಾಗುವುದು. ಅಂದು 5ರಿಂದ 10ಸಾವಿರಕ್ಕೂ ಹೆಚ್ಚು ಸೇರಲಿದ್ದು ಬೆಳಗ್ಗೆ 9ಕ್ಕೆ ನಗರದ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ರೈತ ವೀರಗಲ್ಲಿಗೆ ನಮನ ಸಲ್ಲಿಸಲಾಗುವುದು. ಬಳಿಕ ವೇದಿಕೆ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ತಿಳಿಸಿದರು.ರೈತ ಮುಖಂಡ ಶಂಕರ ಅಂಬಲಿ ಮಾತನಾಡಿ, ನಾಳೆಯ ಕಾರ್ಯಕ್ರಮ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು. ಎಲ್ಲ ರೈತಪರ ಸಂಘಟನೆಗಳು ಒಗ್ಗೂಡಲು ಇದು ಮಹಾ ವೇದಿಕೆಯಾಗಲಿ ಎಂದು ಹೇಳಿದ್ದಾರೆ. ಅಂದೇ ರೈತ ಜಾಗೃತಿ ಸಮಾವೇಶ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಇಡೀ ರಾಜ್ಯದ ರೈತಪರ ಸಂಘಟನೆ, ಪರಿಸರ ಸಂಘಟನೆ, ಉತ್ತರ ಕರ್ನಾಟಕ ಸಮಗ್ರ ರೈತ ಸಂಘಟನೆ, ನಟ ಸುರೇಶ ಹೆಬ್ಬಳ್ಳಿಕರ ಸೇರಿದಂತೆ ಅನೇಕ ನಾಯಕರು ಸೇರಲಿದ್ದಾರೆ ಎಂದರು.ಮಾರ್ಲಾಪಣೆಗೆ ಅವಕಾಶವಿಲ್ಲನಾವು ಆಯ್ಕೆ ಮಾಡಿರುವ ಸಂಸದರು ಹಾಗೂ ಶಾಸಕರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆಂದು ಹೇಳುತ್ತಿದ್ದಾರೆ. ಅವರು ಸಂಸತ್ ಹಾಗೂ ವಿಧಾನಸೌಧದಲ್ಲಿ ನಮ್ಮ ಪರ ಹೋರಾಟ ಮಾಡಲಿ. ಅದನ್ನು ಬಿಟ್ಟು ಹುತಾತ್ಮರಿಗೆ ಮಾರ್ಲಾಪಣೆ ಮಾಡಲು ಅವಕಾಶವಿಲ್ಲ. ರೈತರ ವಿರೋಧದ ನಡುವೆ ಬಂದರೆ ಅವರ ಯೋಗ್ಯತೆ ಏನು ಎಂಬುದನ್ನು ತಿಳಿಸಬೇಕಾಗುತ್ತದೆ. 2018ರಲ್ಲೇ ಮಹದಾಯಿ ನ್ಯಾಯಾಧಿಕರಣ 13.5ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಬಿಡುಗಡೆ ಮಾಡಲು ಆದೇಶಿಸಿದೆ. ಆದರೂ ಈವರೆಗೂ ಹನಿನೀರು ಹರಿದಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ ಎಂದು ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.