ಚನ್ನಗಿರಿ ತಾಲೂಕಿನಲ್ಲಿ 12 ಮನೆಗಳಿಗೆ ಹಾನಿ

| Published : Jul 21 2024, 01:15 AM IST

ಚನ್ನಗಿರಿ ತಾಲೂಕಿನಲ್ಲಿ 12 ಮನೆಗಳಿಗೆ ಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಗೊಪ್ಪೇನಹಳ್ಳಿ, ರಾಮೇನಹಳ್ಳಿ, ನವಿಲೇಹಾಳ್, ತಿಪ್ಪಗೊಂಡನಹಳ್ಳಿ, ಹನುಮಲಾಪುರ, ಕಗತೂರು, ಬೆಂಕಿಕೆರೆ, ಮಹಾತ್ಮ ಗಾಂಧಿ ನಗರ, ಬೆಳಲಗೆರೆ, ಚಿರಡೋಣಿ, ತಿಮ್ಮಲಾಪುರ, ಕೆಂಪಯ್ಯನ ತೊಕ್ಕಲು ಈ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

- ಜೋರು ಮಳೆಯಿಲ್ಲದೇ ಬಹುತೇಕ ಕೆರೆಗಳಲ್ಲಿ ನೀರಿಲ್ಲ: ತಹಸೀಲ್ದಾರ್‌ - - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ತಾಲೂಕಿನಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ಗೊಪ್ಪೇನಹಳ್ಳಿ, ರಾಮೇನಹಳ್ಳಿ, ನವಿಲೇಹಾಳ್, ತಿಪ್ಪಗೊಂಡನಹಳ್ಳಿ, ಹನುಮಲಾಪುರ, ಕಗತೂರು, ಬೆಂಕಿಕೆರೆ, ಮಹಾತ್ಮ ಗಾಂಧಿ ನಗರ, ಬೆಳಲಗೆರೆ, ಚಿರಡೋಣಿ, ತಿಮ್ಮಲಾಪುರ, ಕೆಂಪಯ್ಯನ ತೊಕ್ಕಲು ಈ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

ರಭಸ ಮಳೆ ಇಲ್ಲದ ಕಾರಣ ತಾಲೂಕಿನ ಕೆಲವು ಕೆರೆಗಳನ್ನು ಹೊರತುಪಡಿಸಿ ಬಹುತೇಕ ಕೆರೆಗಳಿಗೆ ಮಳೆಯ ನೀರು ಬಂದಿಲ್ಲ. ತಾಲೂಕಿನ ಉಬ್ರಾಣಿ ಹೋಬಳಿಯ ಏತನೀರಾವರಿ ಯೋಜನೆಯ ಕೆರೆಗಳಿಗೆ ನೀರು ಹರಿಯುತ್ತಿದೆ ಎಂದಿದ್ದಾರೆ.

ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿದೆ. ಶುಕ್ರವಾರ ಸುರಿದ ಮಳೆಯ ಪ್ರಮಾಣವು 9 ಮಳೆ ಮಾಪನ ಕೇಂದ್ರಗಳಲ್ಲಿ ಶನಿವಾರ ದಾಖಲಾಗಿದೆ. ಮಳೆ ಬಿದ್ದ ಪ್ರಮಾಣ ವಿವರದಂತೆ, ಚನ್ನಗಿರಿ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 24.0 ಮೀ.ಮೀ. ಮಳೆ, ದೇವರಹಳ್ಳಿಯಲ್ಲಿ 24.6 ಮಿಮೀ, ಕತ್ತಲಗೆರೆಯಲ್ಲಿ 29.2 ಮಿಮೀ, ತ್ಯಾವಣಿಗೆಯಲ್ಲಿ 15.8 ಮಿಮೀ, ಬಸವಾಪಟ್ಟಣದಲ್ಲಿ 19.4 ಮಿಮೀ, ಜೋಳದಾಳ್‌ನಲ್ಲಿ 32.2 ಮಿಮೀ, ಸಂತೆಬೆನ್ನೂರಿನಲ್ಲಿ 17.0 ಮಿಮೀ, ಉಬ್ರಾಣಿಯಲ್ಲಿ 26.8 ಮಿಮೀ, ಕೆರೆಬಿಳಚಿಯಲ್ಲಿ 18.6 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಒಟ್ಟು 207.6 ಮೀ.ಮೀ ಮಳೆಯಾಗಿದೆ ಎಂದು ವಿವರ ನೀಡಿದ್ದಾರೆ.

ತಾಲೂಕಿನ ಕೃಷಿ ಕಾರ್ಮಿಕರು, ರೈತರು ಜಡಿ ಜಮೀನು, ತೋಟಗಳ ಕೃಷಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜಿಟಿಜಿಟಿ, ಸಾಧಾರಣ ಮಳೆಯಿಂದಾಗಿ ತಾಲೂಕು ಕೇಂದ್ರವಾದ ಚನ್ನಗಿರಿ ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ದಾಖಲೆ-ಪತ್ರಗಳ ಕೆಲಸಗಳಿಗೆ ಆಗಮಿಸುತ್ತಿದ್ದ ಜನರ ಸಂಖ್ಯೆಯೂ ಇಳಿಕೆಯಾಗಿದೆ. ಪಟ್ಟಣದಲ್ಲಿಯೂ ಜನರು ನೆಮ್ಮದಿಯಿಂದ ಓಡಾಡದಂತಾಗಿದ್ದು, ಕೆಲ ರಸ್ತೆಗಳೆಲ್ಲ ಜನರಿಲ್ಲದೇ ಖಾಲಿ ಖಾಲಿ ಗೋಚರಿಸುತ್ತಿವೆ.

- - - -20ಕೆಸಿಎನ್ಜಿ1:

ಚನ್ನಗಿರಿ ತಾಲೂಕಿನ ಕಗತೂರಿನಲ್ಲಿ ಮಳೆಯಿಂದ ಮನೆಗೆ ಹಾನಿಯಾಗಿದೆ.