ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಉತ್ತರ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ಗುರುವಾರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12.35 ಕಿಲೋ ಮೀಟರ್ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿದ್ದಾರೆ.ಬ್ಯಾಟರಾಯನಪುರ ವಿಭಾಗದ ಜಕ್ಕೂರು ಡಬಲ್ ರಸ್ತೆ (ಬಳ್ಳಾರಿ ರಸ್ತೆಯಿಂದ ಜಕ್ಕೂರು ಮೂಲಕ ಜಕ್ಕೂರು ಡಬಲ್ ರಸ್ತೆಯವರೆಗೆ)1.25 ಕಿ.ಮೀ., ಜಕ್ಕೂರು ಡಬಲ್ ರಸ್ತೆ (ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ವೃತ್ತದವರೆಗೆ)2.50 ಕಿ.ಮೀ, ದಾಸರಹಳ್ಳಿ ವಿಭಾಗದಲ್ಲಿ ಬಾಗಲಗುಂಟೆ ಮುಖ್ಯರಸ್ತೆ (ಬಾಗಲಗುಂಟೆ ಅರ್ಚ್‌ನಿಂದ ಕೆನರಾ ಬ್ಯಾಂಕ್ ಸರ್ಕಲ್, ಎನ್.ಎಚ್.–4 ಮಾರ್ಗ) 2.50 ಕಿ.ಮೀ ಸೇರಿ ಒಟ್ಟು 6.25 ಕಿ.ಮೀ. ಉದ್ದದ ಪಾದಚಾರಿ ರಸ್ತೆ ಒತ್ತುವರಿ ತೆರವುಗೊಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ 3 ಜೆಸಿಬಿಗಳು, 5 ಟ್ರಾಕ್ಟರ್‌ಗಳು, 1 ಟಿಪ್ಪರ್, 30 ಸಿಬ್ಬಂದಿ ಮತ್ತು ಕಾರ್ಮಿಕರು ಪಾಲ್ಗೊಂಡಿದ್ದರು ಎಂದು ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.
ದಕ್ಷಿಣ ಪಾಲಿಕೆಯಲ್ಲಿಯೂ ತೆರವು:ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ 6.10 ಕಿ.ಮೀ ಪಾದಚಾರಿ ರಸ್ತೆ ಅತಿಕ್ರಮಣ ಮುಕ್ತಗೊಳಿಸಲಾಗಿದೆ. ಬೊಮ್ಮನಹಳ್ಳಿ ಮತ್ತು ಆನೇಕಲ್ ಭಾಗದ ಎಚ್‌ಎಸ್‌ಆರ್ ಲೇಔಟ್ ಉಪವಿಭಾಗ ಬಳಿ 24ನೇ ಮುಖ್ಯ ರಸ್ತೆಯಲ್ಲಿ 0.80 ಕಿ.ಮೀ, ಬಿಟಿಎಂ ಲೇಔಟ್ ವಿಭಾಗದಲ್ಲಿ ಡಾ. ಮರಿಗೌಡ ರಸ್ತೆ, 29ನೇ ಮುಖ್ಯ ರಸ್ತೆ, ಬಿಟಿಎಂ 2ನೇ ಹಂತ ಮತ್ತು 57ನೇ ಕ್ರಾಸ್ ರಸ್ತೆಯಲ್ಲಿ ಒಟ್ಟು 3.80 ಕಿ.ಮೀ, ಎಚ್‌ಎಸ್‌ಆರ್ ಲೇಔಟ್ ವಿಭಾಗದಲ್ಲಿ, 19ನೇ ಮತ್ತು 24ನೇ ಮುಖ್ಯ ರಸ್ತೆಯಲ್ಲಿ 1.50 ಕಿ.ಮಿ ಪಾದಚಾರಿ ರಸ್ತೆಯಲ್ಲಿ ಒತ್ತುವರಿ ತೆರವು ಮಾಡಲಾಗಿದೆ ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.