ಟೋಲ್‌ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಕಾರ್ಯಕರ್ತರು: ನವೀನ್‌ ನಾಯಕ್

| Published : Aug 20 2024, 12:47 AM IST

ಟೋಲ್‌ ವಿರೋಧಿ ಹೋರಾಟಕ್ಕೆ ಕಾರ್ಕಳದಿಂದ 2000 ಕಾರ್ಯಕರ್ತರು: ನವೀನ್‌ ನಾಯಕ್
Share this Article
  • FB
  • TW
  • Linkdin
  • Email

ಸಾರಾಂಶ

ಟೋಲ್‌ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಆ.24ರಂದು ನಂದಳಿಕೆ ಸುಹಾಸ್‌ ಹೆಗ್ಡೆ ನೇತೃತ್ವದ ಸ್ಥಳೀಯ ಟೋಲ್‌ ಸಂಗ್ರಹ ವಿರೋಧಿ ಹೋರಾಟ ಸಮಿತಿ ಬೃಹತ್ ಸಾರ್ವಜನಿಕ ಪ್ರತಿಭಟನೆಗೆ ಕರೆ ನೀಡಿದ್ದು, ಈ ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಸ್ತೆಯ ಕಂಚಿನಡ್ಕದಲ್ಲಿ ರಾಜ್ಯ ಸರ್ಕಾರ ಟೋಲ್‌ ಸಂಗ್ರಹಕ್ಕೆ ಆದೇಶ ನೀಡಿರುವುದನ್ನು ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಪ್ರತಿ ಬಾರಿಯೂ ವಿರೋಧಿಸುತ್ತಾ, ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸುತ್ತಾ ಬಂದಿದೆ. ಆದರೂ ಕೂಡ ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಡದೆ ಟೋಲ್‌ ಸಂಗ್ರಹಕ್ಕೆ ಮುಂದಾಗಿರುವುದರಿಂದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಜನಪರ ಸರ್ಕಾರ ಅಲ್ಲ, ಜನ ವಿರೋಧಿ ಸರ್ಕಾರ ಎಂದು ಸಾಬೀತಾಗಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.

ಟೋಲ್‌ ಸಂಗ್ರಹಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ಆ.24ರಂದು ನಂದಳಿಕೆ ಸುಹಾಸ್‌ ಹೆಗ್ಡೆ ನೇತೃತ್ವದ ಸ್ಥಳೀಯ ಟೋಲ್‌ ಸಂಗ್ರಹ ವಿರೋಧಿ ಹೋರಾಟ ಸಮಿತಿ ಬೃಹತ್ ಸಾರ್ವಜನಿಕ ಪ್ರತಿಭಟನೆಗೆ ಕರೆ ನೀಡಿದ್ದು, ಈ ಪ್ರತಿಭಟನೆಯಲ್ಲಿ ಭಾರತೀಯ ಜನತಾ ಪಾರ್ಟಿ ಕಾರ್ಕಳದಿಂದ ಎರಡು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ವಾಹನ ಸವಾರರಿಗೆ ಬರ ಎಳೆಯಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿರುವ ಬಿಜೆಪಿ ಪಕ್ಷವು ನಿರಂತರ ಜನರ ಪರವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ