ಕೆಮಿಕಲ್ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಸಂದೇಶ । ಕಳೆದ ವಾರವಷ್ಟೇ 2 ಬಾಂಬ್ ಸಂದೇಶಗಳನ್ನು ಪಡೆದಿದ್ದ ನ್ಯಾಯಾಲಯ । ವಕೀಲರ ಆಕ್ರೋಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರದ ಜಿಲ್ಲಾ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಎಲ್ಲೆ ಮೀರಿದ್ದು, ಒಂದೇ ವಾರದಲ್ಲಿಯೇ ಇಲ್ಲಿ 3 ಬಾಂಬ್ ಸಂದೇಶಗಳು ಕೋರ್ಟ್‌ಗೆ ಬಂದಿದೆ. ಮೊದಲಿಗೆ ಉಗ್ರ ಅಜ್ಮಲ್ ಕಸಬ್, 2ನೇ ಬಾರಿ ತಮಿಳ್ನಾಡು ಮಾಜಿ ಸಿಎಂ ಸ್ಟಾಲಿನ್ ಪತ್ನಿ ವಿರುದ್ಧ ಆಕ್ರೋಶಕ್ಕಾಗಿ, ಈಗ ಡಿಎಂಕೆ ಪಕ್ಷದ ಜೆನ್‌ಝೀ ನಾಯಕ ಎಂದು ಹೇಳಿಕೊಂಡು ಕಿಡಿಗೇಡಿಗಳು ಬಾಂಬ್ ಸಂದೇಶ ಕಳುಹಿಸಿದ್ದಾರೆ.
ಡಾರ್ಕ್‌ವೆಬ್ ಮೂಲಕ anbanantham.ariyappan@atomicmail.io ಎಂಬ ಇ-ಮೇಲ್ ವಿಳಾಸದಿಂದ ಅಂಬುನಾಥನ್ ಅರಿಯಪ್ಪನ್ ಎಂಬಾತನ ಹೆಸರಿನಲ್ಲಿ ಬೆದರಿಕೆ ಸಂದೇಶ ಬಂದಿದೆ. ‘ಬೆಂಗಳೂರಿನ ಇಸ್ರೇಲ್ ರಾಯಭಾರಿ ಕಚೇರಿ ಮತ್ತು ಚಾಮರಾಜನಗರ ನ್ಯಾಯಾಲಯದಲ್ಲಿ 6 ಕೆಮಿಕಲ್ ವೇಪರ್ ಬಾಂಬ್ ಇಡಲಾಗಿದೆ. ಮಧ್ಯಾಹ್ನ 1ಕ್ಕೆ ಸ್ಫೋಟಗೊಳ್ಳಲಿದೆ.ಇ-ಮೇಲ್ ಸಂದೇಶದ ಬಳಿಕ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಮಧ್ಯಾಹ್ನ 12ರವರೆಗೂ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ವಕೀಲರು, ಜನರು ಕೋರ್ಟ್‌ನಿಂದ ಹೊರಬಂದು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದೂರದೂರುಗಳಿಂದ ಬಂದಿದ್ದ ಕಕ್ಷಿದಾರರ ಸಮಯವು ಇದರಿಂದಾಗಿ ವ್ಯರ್ಥವಾಯಿತು.
---
ಬೆದರಿಕೆ ಹಾಕುತ್ತಿರುವ ಕಿಡಿಗೇಡಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಂಬ್ ಬೆದರಿಕೆ ಬಂದಾಗಿನಿಂದ ವಕೀಲರು ಮತ್ತು ಕಕ್ಷಿದಾರರಲ್ಲಿ ಗೊಂದಲಮಯವಾಗಿದೆ. ಎಲ್ಲರಿಗೂ ಜೀವಭಯ ಉಂಟಾಗಿದೆ. ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದು 3ನೇ ಬೆದರಿಕೆಯಾಗಿದ್ದು, ಇಷ್ಟಾದರೂ ಕಿಡಿಗೇಡಿಗಳ ಸುಳಿವು ಪತ್ತೆಯಾಗಿಲ್ಲ. ಸಿಇಎನ್ ಪೊಲೀಸರಿಗೆ ಈ ಬಗ್ಗೆ ಹೆಚ್ಚಿನ ಜವಾಬ್ದಾರಿಯಿದೆ. ಕೂಡಲೇ ಕ್ರಮವಹಿಸಬೇಕು.
- ಪುಟ್ಟಸ್ವಾಮಿ, ಚಾಮರಾಜನಗರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ--
29ಸಿಎಚ್ಎನ್15ಮತ್ತು14ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ 3ನೇ ಬಾರಿ ಬಾಂಬ್ ಬೆದರಿಕೆ ಹಿನ್ನಲೆ ಸೋಮವಾರ ಶೋಧ ಕಾರ್ಯ ನಡೆಸಲಾಯಿತು.