ಸಾರಾಂಶ
ಭಾರತ್ ಪೆಟ್ರೋಲಿಯಂ ಕಂಪನಿ ಈವರೆಗೆ 14,18 ಕೆ.ಜಿ ಸಿಲಿಂಡರ್ ಮಾತ್ರ ನೀಡುತ್ತಿದ್ದ ಕಂಪನಿ ಬದಲಾದ ಕಾಲಕ್ಕೆ ತಕ್ಕಂತೆ 5 .ಕೆ.ಜಿ.ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 5 ಕೆ.ಜಿ ಸಿಲಿಂಡರ್ ನಿಮ್ಮ ಹತ್ತಿರದ ಪ್ರಾವಿಷನ್ ಸ್ಟೋರ್‌ಗಳಲ್ಲಿ ಕೂಡ ಇನ್ನುಮುಂದೆ ಮಾರಾಟಕ್ಕೆ ಲಭ್ಯವಾಗಲಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಭಾರತ್ ಪೆಟ್ರೋಲಿಯಂ ಕಂಪನಿ 5 ಕೆ.ಜಿಯ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಯಾವುದೇ ದಾಖಲಾತಿ ನೀಡದೆ ಕೇವಲ 500 ರೂಪಾಯಿ ನೀಡಿ ಗ್ಯಾಸ್ ಸಿಲಿಂಡರ್ ಪಡೆಯಬಹುದು ಎಂದು ಭಾರತ್ ಪೆಟ್ರೋಲಿಯಂ ಕಂಪನಿಯ ಟೆರಿಟರಿ ಮೇನೇಜರ್ ಜಾವಿದ್ ದೇಸಾಯಿ ತಿಳಿಸಿದರು.ನಗರದ ಗರ್ಲ್ಸ್ ಸ್ಕೂಲ್ ರಸ್ತೆಯಲ್ಲಿರುವ ವಿನಾಯಕ ಪ್ರಾವಿಷನ್ ಸ್ಟೋರ್‌ನಲ್ಲಿ 5 ಕೆ.ಜಿ.ಗ್ಯಾಸ್ ಸಿಲಿಂಡರ್ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತ್ ಪೆಟ್ರೋಲಿಯಂ ಕಂಪನಿ ತೈಲ ಮಾರಾಟದ ಜತೆಗೆ ಎಲ್‌ಪಿಜಿ ಗ್ಯಾಸ್ ವಿತರಣೆಯಲ್ಲಿ ಕೂಡ ಗ್ರಾಹಕರ ವಿಶ್ವಾಸ ಪಡೆದ ಕಂಪನಿಯಾಗಿದೆ ಎಂದರು.
5 ಕೆಜಿ ಸಿಲಿಂಡರ್ ಮಾರಾಟಈವರೆಗೆ 14,18 ಕೆ.ಜಿ ಸಿಲಿಂಡರ್ ಮಾತ್ರ ನೀಡುತ್ತಿದ್ದ ಕಂಪನಿ ಬದಲಾದ ಕಾಲಕ್ಕೆ ತಕ್ಕಂತೆ 5 .ಕೆ.ಜಿ.ಸಿಲಿಂಡರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಗರದ ಜನತೆ ಇದರ ಸದುಪಯೋಗ ಪಡಿಸಿ ಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕೆಂದು ಮನವಿ ಮಾಡಿದರು.ಮಾರಾಟ ವ್ಯವಸ್ಥಾಪಕ ಅನಿಕೇತ್ ಬಾಬು ಮಾತನಾಡಿ, ಭಾರತ್ ಪೆಟ್ರೋಲಿಯಂ ಕಂಪನಿ ಯ 5 ಕೆ.ಜಿ ಸಿಲಿಂಡರ್ ನಿಮ್ಮ ಹತ್ತಿರದ ಪ್ರಾವಿಷನ್ ಸ್ಟೋರ್‌ಗಳಲ್ಲಿ ಕೂಡ ಇನ್ನುಮುಂದೆ ಮಾರಾಟಕ್ಕೆ ಲಭ್ಯವಾಗಲಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಮಹೇಶ್ವರಿ ಗ್ಯಾಸ್ ಏಜೆನ್ಸಿಯಲ್ಲಿ ಸಹ ಲಭ್ಯವಿರಲಿದೆ.ಬೇಕೆಂದಾಗ ಬಂದು 500 ರೂಪಾಯಿ ನೀಡಿ ಸಿಲಿಂಡರ್ ಪಡೆದು ಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ವೇಳೆ ಮಾಜಿ ಶಾಸಕ ಎಂ.ಶಿವಾನಂದ್, ರವಿ ಮತ್ತಿತರರು ಇದ್ದರು.