ಪುಣ್ಯಕೋಟಿ ಮಠದಲ್ಲಿ 11ರಂದು 5ನೇ ವರ್ಷದ ತುಂಗಾರತಿ: ಜಗದೀಶ್ವರ ಸ್ವಾಮೀಜಿ

| Published : Feb 07 2024, 01:45 AM IST

ಪುಣ್ಯಕೋಟಿ ಮಠದಲ್ಲಿ 11ರಂದು 5ನೇ ವರ್ಷದ ತುಂಗಾರತಿ: ಜಗದೀಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪುಣ್ಯಕೋಟಿ ಮಠದ ಆಶ್ರಯದಲ್ಲಿ ಕಳೆದ ೪ವರ್ಷಗಳಿಂದಲೂ ವಿಜೃಂಭಣೆಯಿಂದ ತುಂಗಾರತಿ ಕಾರ್ಯಕ್ರಮ ಮಾಡುತ್ತಿದ್ದು, ಅದರಂತೆ ಈ ಬಾರಿ ಭಾನುವಾರ ಸಂಜೆ ೫ಕ್ಕೆ ತುಂಗಭದ್ರಾ ನದಿ ತಟದಲ್ಲಿ ಸಂಗೀತಯುಕ್ತ ತುಂಗಾರತಿ ಹಾಗೂ ನಾಡಿನ ವಿವಿಧ ಹರ ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಹರಿಹರ

ಕೋಡಿಯಾಲ ಹೊಸಪೇಟೆ ತುಂಗಭದ್ರ ನದಿ ತಟದಲ್ಲಿ ಫೆ.೧೧ರ ಭಾನುವಾರದಂದು ೫ನೇ ವರ್ಷದ ತುಂಗಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹೇಳಿದರು.

ನಗರ ಸಮೀಪದ ಕೋಡಿಯಾಲ ಹೊಸಪೇಟೆಯ ಪುಣ್ಯಕೋಟಿ ಮಠದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುಣ್ಯಕೋಟಿ ಮಠದ ಆಶ್ರಯದಲ್ಲಿ ಕಳೆದ ೪ವರ್ಷಗಳಿಂದಲೂ ವಿಜೃಂಭಣೆಯಿಂದ ತುಂಗಾರತಿ ಕಾರ್ಯಕ್ರಮ ಮಾಡುತ್ತಿದ್ದು, ಅದರಂತೆ ಈ ಬಾರಿ ಭಾನುವಾರ ಸಂಜೆ ೫ಕ್ಕೆ ತುಂಗಭದ್ರಾ ನದಿ ತಟದಲ್ಲಿ ಸಂಗೀತಯುಕ್ತ ತುಂಗಾರತಿ ಹಾಗೂ ನಾಡಿನ ವಿವಿಧ ಹರ ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗಲಿದೆ.

ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ರಿಗೆ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿಯವರಿಗೆ ಸಜ್ಜನ ಜನನಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸುವವರು. ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಚಂದ್ರಶೇಖರ ಶ್ರೀ, ಶಾಕಾಶಪುರ ವಿಶ್ವಾರಾಧ್ಯ ತಪೋವನಮಠದ ಡಾ.ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು. ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಹಾಗೂ ಹರಿಹರ ಶಾಸಕ ಬಿ.ಪಿ.ಹರೀಶ್‌ರಿಗೆ ಸನ್ಮಾನ, ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ ಕುಮಾರ ಎಂ.ಪೂಜಾರ್ ಮತ್ತು ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪರಿಗೆ ಗೌರವ ಶ್ರೀರಕ್ಷೆ ನೀಡಲಾಗುವುದು. ಮಾಜಿ ಶಾಸಕ ಟಿ.ಗುರುಸಿದ್ದನಗೌಡ್ರು ಪುಣ್ಯಕೋಟಿ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಆರ್.ಶಂಕರ್, ಮಾಜಿ ಶಾಸಕರಾದ ಎಸ್.ರಾಮಪ್ಪ, ಎಚ್.ಎಸ್.ಶಿವಶಂಕರ್, ಸೋಮಣ್ಣ ಬೇವಿನ ಮರದ, ಕೆ.ಇ.ಕಾಂತೇಶ್, ನಂದಿಗಾವಿ ಶ್ರೀನಿವಾಸ್, ಶ್ರೀನಿವಾಸ್ ದಾಸಕರಿಯಪ್ಪ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವನಾಥ, ಗ್ರಾಪಂ ಸದಸ್ಯರಾದ ಬಿ.ಎಚ್.ದಿನೇಶ್, ಜಿಗಳಿಯ ಡಾ.ನಾಗರಾಜ್, ಮಂಜುನಾಥ್, ಎನ್.ಎಚ್.ಹಾವನೂರು, ಯುವರಾಜ್‌ ಇತರರಿದ್ದರು.

ಪುಣ್ಯಕೋಟಿ ತಪೋಮಂದಿರ ಲೋಕಾರ್ಪಣೆ

ಫೆ.೧೧ರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯಕೋಟಿ ಮಠದ ಆವರಣದಲ್ಲಿ ₹೨ಕೋಟಿ ಅನುದಾನದಲ್ಲಿ ನಿರ್ಮಾಣವಾದ ಪುಣ್ಯಕೋಟಿ ತಪೋಮಂದಿರ ಲೋಕಾರ್ಪಣೆ ಅಂಗವಾಗಿ ರೇಣುಕಾಚಾರ್ಯ ಮಹಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ವಾಸ್ತು ಶಾಂತಿ ಹೋಮಹವನಗಳ ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶ್ರೀಗಳ ಸಮ್ಮುಖದಲ್ಲಿ ನೆರವೇರಲಿದೆ ಎಂದು ಜಗದೀಶ್ವರ ಸ್ವಾಮೀಜಿ ಹೇಳಿದರು.