ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಜವಹರ್ ಶಿಕ್ಷಣ ಸಂಸ್ಥೆ ನೈತಿಕ, ಗುಣಾತ್ಮಕ ಶಿಕ್ಷಣ ಕೊಡಲು ಮುಂದಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಹೇಳಿದರು.ಪಟ್ಟಣದ ಜವಹರ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ೨೦೨೩-೨೪ ನೇ ಸಾಲಿನ ಶಾಲಾ, ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿದ್ಯಾರ್ಥಿ ಸಂಘಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಜ್ಞಾನ ಬಹಳ ಮುಖ್ಯ, ಮಗು ಮುಗ್ಧ ಸ್ಥಿತಿಯಲ್ಲಿರುವಾಗ ಮಗುವಿನೊಳಗೆ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಹೊರ ತೆಗೆಯುವ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕೆಂದರು.ಜಹವರ್ ಶಿಕ್ಷಣ ಸಂಸ್ಥ ವಿಜ್ಞಾನ ವಿಭಾಗದ ಆರಂಭಿಸುವುದಾದರೆ ಶಾಲಾ ಶಿಕ್ಷಣ ಇಲಾಖೆಯ ಜೊತೆಗೆ ನಾನು ಸಹ ಸಹಕರಿಸುವುದಾಗಿ ಭರವಸೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸು ಮಾತನಾಡಿ, ಜವಹರ್ ಶಿಕ್ಷಣ ಸಂಸ್ಥೆ ಸಾಂಸ್ಕೃತಿಕ, ಕ್ರೀಡೆ, ಶಿಕ್ಷಣದಲ್ಲೂ ಪ್ರತಿಭೆ ಗುರುತಿಸುತ್ತಿದೆ ಜೊತೆಗೆ ಮಕ್ಕಳ ಆತ್ಮ ವಿಶ್ವಾಸ, ದೃಢತೆ, ಪರಿಶ್ರಮ ತುಂಬುವ ಕೆಲಸ ಆಗಲಿ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜವಹರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್‌ಆರ್‌ಎಸ್ ರಾಜಶೇಖರ್ ಮಾತನಾಡಿ, ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಆಡಳಿತ ಮಂಡಳಿ ಕಟಿಬದ್ಧವಾಗಿದೆ ಎಂದರು. ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಪರಶಿವಮೂರ್ತಿ, ಎಸ್‌ಐ ಸಾಹೇಬ ಗೌಡ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಎಚ್.ಎನ್.ಮಾದಪ್ಪ, ಟ್ರಸ್ಟಿಗಳಾದ ಸಿ.ಎನ್.ಮಹೇಶ್, ನಾಗರಾಜು, ಸಂಸ್ಥೆಯ ಎಲ್ಲಾ ಶಾಲಾ, ಕಾಲೇಜಿನ ಪ್ರಾಂಶುಪಾಲ, ಮುಖ್ಯ ಶಿಕ್ಷಕ, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು ಉಪಸ್ಥಿತರಿದ್ದರು.