ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ೮ ಕೋಟಿ ಅನುದಾನ: ಶಾಸಕ ಅಶೋಕ್ ರೈ

| Published : Sep 29 2025, 03:02 AM IST

ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ೮ ಕೋಟಿ ಅನುದಾನ: ಶಾಸಕ ಅಶೋಕ್ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶಾರದೋತ್ಸವ ಸಮಿತಿ ಹಾಗೂ ಸುಂದರ ಯಕ್ಷಕಲಾ ವೇದಿಕೆ ವತಿಯಿಂದ ಕೊಳ್ತಿಗೆ ಗ್ರಾಮೀಣ ದಸರಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ನಾವು ಜಾತಿ, ಮತ, ಧರ್ಮ ಭೇದ ಭಾವವಿಲ್ಲದೆ ಎಲ್ಲರಿಗೂ ಒಳಿತನ್ನು ಬಯಸಬೇಕು. ಆಗ ಮಾತ್ರ ನಾವು ದೇವರಿಗೆ ಹತ್ತಿರವಾಗಲು ಸಾಧ್ಯವಿದೆ. ಶಾಸಕನಾದ ಬಳಿಕ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಒಟ್ಟು ೮ ಕೋಟಿ ರು.ಗಳ ಅನುದಾನವನ್ನು ನೀಡಿದ್ದೇನೆ. ಇದರ ಜೊತೆಗೆ ಇತರ ಧರ್ಮಿಯರ ಧಾರ್ಮಿಕ ಕೇಂದ್ರಗಳಿಗೂ ಅನುದಾನವನ್ನು ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಶನಿವಾರ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಶಾರದೋತ್ಸವ ಸಮಿತಿ ಹಾಗೂ ಸುಂದರ ಯಕ್ಷಕಲಾ ವೇದಿಕೆ ವತಿಯಿಂದ ನಡೆದ ಕೊಳ್ತಿಗೆ ಗ್ರಾಮೀಣ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧರ್ಮಗಳು ಬದುಕನ್ನು ಕಲಿಸುತ್ತದೆ. ನಾವು ಹೇಗೆ ಜೀವನ ನಡೆಸಬೇಕು, ಹೇಗೆ ಸಮಾಜದಲ್ಲಿ ಇರಬೇಕು ಎಂಬುದನ್ನು ಧರ್ಮ ನಮಗೆ ಕಲಿಸುತ್ತದೆ. ಆ ಪ್ರಕಾರ ನಾವು ಬದುಕು ನಡೆಸಿದರೆ, ನಾವು ಎಲ್ಲರ ಸಂಪ್ರೀತಿಗೆ ಪಾತ್ರರಾಗಲು ಸಾಧ್ಯವಾಗುತ್ತದೆ ಎಂದರು.ಸರ್ಕಾರ ಪಂಚ ಗ್ಯಾರಂಟಿ ಯೋಜನೆಯನ್ನು ಮಹಿಳೆಯರಿಗೆ ನೀಡಿದೆ. ಯಾಕೆಂದರೆ ಮಹಿಳೆ ಕುಟುಂಬದ ಆಧಾರ ಸ್ತಂಭ. ಮಹಿಳೆ ಕುಟುಂಬವನ್ನು ನಡೆಸುವ ದೇವಿಯಾಗಿದ್ದಾಳೆ. ಈ ಕಾರಣಕ್ಕೆ ಸರ್ಕಾರ ಮಹಿಳೆಯರಿಗೆ ಗೌರವ ನೀಡುವ ಉದ್ದೇಶದಿಂದ ಗ್ಯಾರಂಟಿಯನ್ನು ನೀಡಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಗೆ ಕೊಟ್ಟ ಕಾರಣ ಇಂದು ಸಾವಿರಾರು ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.

ಶಾರದೋತ್ಸವ ಸಮಿತಿ ಅಧ್ಯಕ್ಷ ಅಮಲರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಗೌರವಾಧ್ಯಕ್ಷ ವಸಂತಕುಮಾರ್, ವೆಂಕಟ್ರಮಣ ಆಚಾರ್ಯ, ಪವನ್ ಕುಮಾರ್, ಲಕ್ಷ್ಮಣ ಗೌಡ ಕುಂಟಿಕಾನ, ತೀರ್ತಾನಂದ ಗೌಡ ದುಗ್ಗಳ ಉಪಸ್ಥಿತರಿದ್ದರು.ಸಮಿತಿ ಗೌರವಾಧ್ಯಕ್ಷ ಪ್ರಮೋದ್ ಕೆ.ಎಸ್. ಸ್ವಾಗತಿಸಿದರು. ವಿನೋದ್ ರೈ ಕೊಳ್ತಿಗೆ ಕಾರ್ಯಕ್ರಮ ನಿರೂಪಿಸಿದರು.