ಚಿಕಿತ್ಸೆಯಲ್ಲಿ ನ್ಯೂನತೆ: ಗಿರಿಜಾ ಡೆಂಟಲ್ ಕೇರ್‌ಗೆ 9.24 ಲಕ್ಷ ರು. ಪರಿಹಾರಕ್ಕೆ ಆದೇಶ
2 Min read
KannadaprabhaNewsNetwork
Published : Oct 06 2023, 01:13 AM IST
Share this Article
FB
TW
Linkdin
Whatsapp
ಚಿಕಿತ್ಸೆಯಲ್ಲಿ ನ್ಯೂನತೆ : ಗಿರಿಜಾ ಡೆಂಟಲ್ ಕೇರ್‌ಗೆ ವೈದ್ಯ ಡಾ. ಮಂಜುನಾಥ್‌ಗೆ ಗ್ರಾಹಕರ ನ್ಯಾಯಾಲಯ ೯.೨೪ ಲಕ್ಷ ರು ಪರಿಹಾರಕ್ಕೆ ಆದೇಶ | Kannada Prabha
Image Credit: KP
ಅಗ್ರಹಾರ ಬೀದಿಯ ಪಾರ್ಕ್ ಎದುರಿನಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ದಂತ ವೈದ್ಯ ಡಾ.ಮಂಜುನಾಥ್ ಅವರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾದೀಶ ಎಂ.ವಿ. ಭಾರತಿ ಹಾಗೂ ಸದಸ್ಯರಾದ ಕೆ.ಎಸ್. ರಾಜು ಅವರು ಪೀಠ ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ದೃಢಪಟ್ಟಿರುವುದರಿಂದ ಫಲಾನುಭವಿ ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರು. ಹಾಗೂ 3 ಲಕ್ಷ ರು. ಪರಿಹಾರ ಮತ್ತು 10 ಸಾವಿರ ರು. ದಂಡ ಸೇರಿ 9,24,605 ರು. ಪಾವತಿ ಮಾಡುವಂತೆ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ
ಚಿಕಿತ್ಸೆ ವೇಳೆ ವೈದ್ಯ ಡಾ. ಮಂಜುನಾಥ್ ನಿರ್ಲಕ್ಷ್ಯ | ಶಾಶ್ವತ ಅಂಗವಿಕಲತೆಗೊಳಗಾದ ಸುಕನ್ಯಾ! ಕನ್ನಡಪ್ರಭ ವಾರ್ತೆ ಚಾಮರಾಜನಗರ ಹಲ್ಲು ನೋವಿಗೆ ಚಿಕಿತ್ಸೆ ಪಡೆದುಕೊಳ್ಳಲು ಹೋದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದಾಗಿ ಶಾಶ್ವತ ಅಂಗವಿಕಲತೆಗೆ ಒಳಗಾಗಿರುವ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ನ್ಯಾಯಲಯವು ದಂತ ವೈದ್ಯ ಮಂಜುನಾಥ್‌ಗೆ 9,24,605 ರು. ದಂಡದ ರೂಪದಲ್ಲಿ ಪರಿಹಾರ ನೀಡುವಂತೆ ಮಹತ್ವದ ಆದೇಶ ನೀಡಿದೆ. ನಗರದ ಅಗ್ರಹಾರ ಬೀದಿಯ ಪಾರ್ಕ್ ಎದುರಿನಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ದಂತ ವೈದ್ಯ ಡಾ.ಮಂಜುನಾಥ್ ಅವರಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯದ ನ್ಯಾಯಾದೀಶ ಎಂ.ವಿ. ಭಾರತಿ ಹಾಗೂ ಸದಸ್ಯರಾದ ಕೆ.ಎಸ್. ರಾಜು ಅವರು ಪೀಠ ಸೇವಾ ನ್ಯೂನತೆ ಮತ್ತು ಚಿಕಿತ್ಸೆ ನೀಡುವಾಗ ಬೇಜವ್ದಾರಿ ತೋರಿರುವುದು ವಿಚಾರಣೆ ಹಾಗೂ ವೈದ್ಯಕೀಯ ದಾಖಲೆಯಲ್ಲಿ ದೃಢಪಟ್ಟಿದೆ. ಅಲ್ಲದೇ ರೋಗಿಗೆ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ನೇರವಾಗಿ ಇಂಜೆಕ್ಷನ್ ನೀಡಿರುವುದು ಸೇವಾ ನ್ಯೂನತೆಯಾಗಿದ್ದು, ಇದಕ್ಕಾಗಿ ಫಲಾನುಭವಿ ಸುಕನ್ಯಾ ಅವರಿಗೆ ವೈದ್ಯಕೀಯ ವೆಚ್ಚ 6,14,605 ರು. ಹಾಗೂ 3 ಲಕ್ಷ ರು. ಪರಿಹಾರ ಮತ್ತು 10 ಸಾವಿರ ರು. ದಂಡ ಸೇರಿ 9,24,605 ರು. ಪಾವತಿ ಮಾಡುವಂತೆ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ. ಸುಕನ್ಯಾ ಅವರು ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ತಮ್ಮ ವಕೀಲ ಧಾರವಾಡದ ಬಸವಪ್ರಭುಹೊಸಕೇರಿ ಅವರ ಮುಖಾಂತರ 2022ರ ಮಾ.25ರಂದು ವೈದ್ಯರ ವಿರುದ್ದ ದಾವೆ ಹೂಡಿದ್ದರು. ನ್ಯಾಯಾಲಯವು ಆರೋಪಿಯಾಗಿದ್ದ ಡಾ. ಮಂಜುನಾಥ್ ಅವರಿಗೆ ಸಮನ್ಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಜೊತೆಗೆ ವೈದ್ಯಕೀಯ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚನೆ ನೀಡಿತ್ತು. ಒಂದು ವರ್ಷ ನಾಲ್ಕು ತಿಂಗಳು ಕಾಲ ವಿಚಾರಣೆ ಮಾಡಿ, ಅನೇಕ ತಜ್ಞ ವೈದ್ಯರು ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮವಾಗಿ ವೈದ್ಯ ಡಾ. ಮಂಜುನಾಥ್ ಸೇವಾ ನ್ಯೂನತೆ, ಬೇಜವಾಬ್ದಾರಿಯಿಂದ ಮಹಿಳೆಯು ಶಾಶ್ವತವಾಗಿ ಎಡ ಕೈ ಮತ್ತು ಎಡ ಕಾಲಿನ ಸ್ವಾಧೀನವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವೈದ್ಯರಿಂದ 9.24 ಲಕ್ಷ ರು. ಪರಿಹಾರವನ್ನು ನೀಡುವಂತೆ ಆದೇಶ ನೀಡಿದ್ದಾರೆ. ಘಟನೆ ವಿವರ: ಚಾನಗರ ರಥದ ಬೀದಿಯಲ್ಲಿರುವ ಲೇಟ್ ಕೆ.ಬಿ. ಸುಂದರ್ ಅವರ ಪತ್ನಿ ಸುಕನ್ಯಾ ಅವರು 2021ರ ಫೆಬ್ರವರಿ 3 ರಂದು ನಗರದ ಆಗ್ರಹಾರ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್‌ನ ವೈದ್ಯ ಡಾ. ಮಂಜುನಾಥ್ ಅವರಿಗೆ ಹಲ್ಲು ನೋವಿನ ಬಗ್ಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ಆದರೆ, ಡಾ. ಮಂಜುನಾಥ್ ಮುನ್ನಚ್ಚರಿಕೆ ಕ್ರಮ ಹಾಗೂ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡದೇ ಏಕಾಏಕಿ ದವಡೆಗೆ ಅರವಳಿಕೆ ನೀಡಿದ ಪರಿಣಾಮ ತೀವ್ರ ನಿತ್ರಾಣಗೊಂಡು ಕುಸಿದು ಬಿದ್ದರು. ವೈದ್ಯ ಮಂಜುನಾಥ್ ಹತ್ತಿರದಲ್ಲಿಯೇ ಇದ್ದ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯದೇ ದೂರದ ಮರಿಯಾಲದ ಬಳಿ ಇದ್ದ ಬಸವರಾಜೇಂದ್ರ ಅಸ್ಪತ್ರೆಗೆ ದಾಖಲು ಮಾಡಿದರು. ಬಳಿಕ ವಿಳಂಬವಾಗಿ ಮೈಸೂರಿನ ನಾರಾಯಣ ಅಸ್ಪತ್ರೆಗೆ ಸೇರ್ಪಡೆ ಮಾಡಿದರು. ವಾರಗಳ ಕಾಲ ತುರ್ತು ಚಿಕಿತ್ಸೆ ಘಟಕದಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರು.ಗಳನ್ನು ಖರ್ಚು ಮಾಡಿ ಸುಕನ್ಯಾ ಜೀವ ಉಳಿಸಿಕೊಂಡರು. ಆದರೆ, ವೈದ್ಯರು ತೋರಿದ ನಿರ್ಲಕ್ಷ್ಯದಿಂದಾಗಿ ಸುಕನ್ಯಾ ಅವರಿಗೆ ಈ ಗತಿಯಾಗಿದೆ ಎಂದು ಪುತ್ರ ರವಿಕುಮಾರ್ ವೈದ್ಯಕೀಯ ಅಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾದ ಕಾರಣ ಒಂದು ವರ್ಷಗಳ ಕಾಲ ಚಿಕಿತ್ಸೆ ಪಡೆದುಕೊಂಡು ನಂತರ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.