ಗುಂಡ್ಲುಪೇಟೆ: ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ದುಬಾರಿ ಶುಲ್ಕ ಆರೋಪ: ಕ್ರಮಕ್ಕೆ ಆಗ್ರಹ
KannadaprabhaNewsNetwork | Published : Oct 06 2023, 01:13 AM IST
ಗುಂಡ್ಲುಪೇಟೆ: ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ದುಬಾರಿ ಶುಲ್ಕ ಆರೋಪ: ಕ್ರಮಕ್ಕೆ ಆಗ್ರಹ
ಸಾರಾಂಶ
ಗುಂಡ್ಲುಪೇಟೆಯ ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ದುಬಾರಿ ಸೇವಾ ಶುಲ್ಕ ಪಡೆಯುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಕ್ರಮ ಜರುಗಿಸಬೇಕು ಎಂದು ಪಟ್ಟಣದ ನಿವಾಸಿ ಮಹೇಶ್ ದೂರಿದ್ದಾರೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಪಟ್ಟಣದ ಖಾಸಗಿ ಆನ್‌ಲೈನ್ ಸೆಂಟರ್‌ಗಳಲ್ಲಿ ದುಬಾರಿ ಸೇವಾ ಶುಲ್ಕ ಪಡೆಯುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಕ್ರಮ ಜರುಗಿಸಬೇಕು ಎಂದು ಪಟ್ಟಣದ ನಿವಾಸಿ ಮಹೇಶ್ ದೂರಿದ್ದಾರೆ. ಈ ಬಗ್ಗೆ ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ, ಸೇವಾ ಶುಲ್ಕ ಒಂದಲ್ಲ, ಎರಡಲ್ಲ, ನಾಲ್ಕು ಪಟ್ಟು ಹೆಚ್ಚುವರಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದಾರೆ. ಈ ದಂಧೆ ತಪ್ಪೋದು ಯಾವಾಗ? ಎಂದು ಹೇಳಿಕೆಯಲ್ಲಿ ತಾಲೂಕು ಆಡಳಿತವನ್ನು ಪ್ರಶ್ನಿಸಿದ್ದಾರೆ. ಆರೋಪವೇನು? ಮಹೇಶ್ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆಯಲು ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ಮಾಟೀಗೇಜ್ ಮಾಡಿಸಲು ಪಟ್ಟಣದ ಪುರಸಭೆ ಬಿಲ್ಡಿಂಗ್‌ನಲ್ಲಿರುವ ಖಾಸಗಿ ಖುಷಿ ಆನ್‌ಲೈನ್ ಸೆಂಟರ್‌ನಲ್ಲಿ ಮಾಟೀಗೇಜ್‌ಗೆ ಅರ್ಜಿ ಸಲ್ಲಿಸಿ ನೋಂದಣಿ ಆನ್‌ಲೈನ್ ಮೂಲಕ ಶುಲ್ಕ 5,840 ರು. ಪಾವತಿಸಿದ್ದಾರೆ. ಆದರೆ ಖುಷಿ ಆನ್‌ಲೈನ್ ಖಾಸಗಿ ಸೆಂಟರ್‌ನ ಮಾಲೀಕ ಸ್ವಾಮಿ ಅರ್ಜಿ ಸಲ್ಲಿಸಿರುವುದಕ್ಕೆ ಸೇವಾ ಶುಲ್ಕ 650 ರು. ಪಡೆದಿದ್ದಾರೆ. ಇದು ಅನ್ಯಾಯ ಎಂದು ಪ್ರಶ್ನಿಸಿದಾಗ, ಶುಲ್ಕ 650 ರು. ಪಾವತಿಸಲೇಬೇಕು ಎಂದು ಫೋನ್ ಪೇ ಮೂಲಕ ಪಡೆದುಕೊಂಡಿದ್ದಾರೆ. ಇಷ್ಟೊಂದು ಸೇವಾ ಶುಲ್ಕ ಪಡೆಯುತ್ತಿರುವ ಖಾಸಗಿ ಆನ್‌ಲೈನ್ ಸೆಂಟರ್‌ಗಳಿಂದ ತಾಲೂಕಿನ ಜನರಿಗೆ ತುಂಬಾ ಅನ್ಯಾಯ ವಾಗುತ್ತಿದೆ. ಕಾನೂನು ಬಾಹಿರವಾಗಿ ಹೆಚ್ಚು ಹಣ ಪಡೆದ ಸೆಂಟರ್ ಮೇಲೆ ಕ್ರಮ ಜರುಗಿಸಬೇಕು ಎಂದು ಮಹೇಶ್ ಆಗ್ರಹಿಸಿದ್ದಾರೆ. ಖಾಸಗಿ ಆನ್‌ಲೈನ್ ಸೆಂಟರ್ ಇರಲಿ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಇಂಥ ಸೇವೆಗೆ ಇಷ್ಟು ಹಣ ಎಂದು ಫಲಕ ಹಾಕಬೇಕು. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಖಾಸಗಿ ಆನ್‌ಲೈನ್ ಸೆಂಟರ್‌ನಲ್ಲಿ ಮಾಟೀಗೇಜ್ ಶುಲ್ಕ 5,840 ರು. ಗುಂಡ್ಲುಪೇಟೆ ಖುಷಿ ಆನ್‌ಲೈನ್ ಸೆಂಟರ್‌ನಲ್ಲಿ 650 ರು.ಸೇವಾ ಶುಲ್ಕ ಪಡೆದಿರುವುದು.