ಗುಂಡ್ಲುಪೇಟೇಲಿ ಇಂದಿರಾ ಕ್ಯಾಂಟೀನ್ ಪುನಾರಂಭ
KannadaprabhaNewsNetwork | Published : Oct 06 2023, 01:12 AM IST
ಗುಂಡ್ಲುಪೇಟೇಲಿ ಇಂದಿರಾ ಕ್ಯಾಂಟೀನ್ ಪುನಾರಂಭ
ಸಾರಾಂಶ
ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ ಬಂದ್ ಎಂದು ಕನ್ನಡಪ್ರಭ ಪತ್ರಿಕೆಯಲ್ಲಿ ಅ.4 ರಂದು ವರದಿ ಪ್ರಕಟವಾದ ಬೆನ್ನಲ್ಲೆ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಗೊಂಡಿದೆ. ಕನ್ನಡಪ್ರಭ ವರದಿ ಗಮನಿಸಿದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಡುವುದಿಲ್ಲ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ಅನುದಾನ ವಿಳಂಬವಾಗಿದ್ದರೆ ಅನುದಾನ ನೀಡಲು ಹೇಳುತ್ತೇನೆ ಎಂದಿದ್ದರು
ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಡಲ್ಲ ಎಂದಿದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರಂಗೂಪುರ ಶಿವಕುಮಾರ್ ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ ಬಂದ್ ಎಂದು ಕನ್ನಡಪ್ರಭ ಪತ್ರಿಕೆಯಲ್ಲಿ ಅ.4 ರಂದು ವರದಿ ಪ್ರಕಟವಾದ ಬೆನ್ನಲ್ಲೆ ಮತ್ತೆ ಇಂದಿರಾ ಕ್ಯಾಂಟೀನ್ ಆರಂಭಗೊಂಡಿದೆ. ಕನ್ನಡಪ್ರಭ ವರದಿ ಗಮನಿಸಿದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಇಂದಿರಾ ಕ್ಯಾಂಟೀನ್ ಮುಚ್ಚಲು ಬಿಡುವುದಿಲ್ಲ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ಅನುದಾನ ವಿಳಂಬವಾಗಿದ್ದರೆ ಅನುದಾನ ನೀಡಲು ಹೇಳುತ್ತೇನೆ ಎಂದಿದ್ದರು. ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಕೂಡ ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವ ಸಿಬ್ಬಂದಿ ಜತೆ ಮಾತನಾಡಿ ಶಾಸಕರು ಹೇಳಿದ್ದಾರೆ, ಕ್ಯಾಂಟೀನ್ ಆರಂಭಿಸುವಂತೆ ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಬುಧವಾರ ರಾತ್ರಿಯಿಂದಲೇ ಕ್ಯಾಂಟೀನ್‌ನಲ್ಲಿ ಊಟ ಕೊಡಲು ಆರಂಭ ಮಾಡಿದರೂ ಜನರು ಕ್ಯಾಂಟೀನ್ ಮುಚ್ಚಿದೆ ಎಂದು ಭಾವಿಸಿದ್ದರಿಂದ ಜನರು ಬಂದಿರಲಿಲ್ಲ. ಆದರೆ ಗುರುವಾರ ಬೆಳಿಗ್ಗೆ ಮತ್ತು ಮಧ್ಯಾಹ್ನದ ಉಪಾಹಾರಕ್ಕೆ ಜನರು ಆಗಮಿಸಿದ್ದಾರೆ. ಕನ್ನಡಪ್ರಭ ವರದಿಯ ಪರಿಣಾಮ ಇಂದಿರಾ ಕ್ಯಾಂಟೀನ್ ತೆರೆಯಿತು ಎಂದು ಕೂಲಿ ಕಾರ್ಮಿಕನೊಬ್ಬ ಸಂತಸ ವ್ಯಕ್ತಪಡಿಸಿದ್ದಾನೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಮಾಡುವ ಸಂತೋಷ್ ಕನ್ನಡಪ್ರಭದೊಂದಿಗೆ ಮಾತನಾಡಿ, ಗುತ್ತಿಗೆದಾರರು ಮೂರು ದಿನಗಳಲ್ಲಿ ಸಂಬಳ ಕೊಡುತ್ತೇವೆ ಎಂದು ಹೇಳಿದ ಹಿನ್ನಲೆ ಕ್ಯಾಂಟೀನ್ ಆರಂಭಿಸಿ ಉಪಾಹಾರ, ಊಟ ನೀಡಲಾಗುತ್ತಿದೆ ಎಂದರು. ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದ ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿ ಸಂಬಳ ಕೊಡದ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದ್ದರು. 2013 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಲ್ಲದೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಇದ್ದರೂ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ ಎಂದು ಸಿಬ್ಬಂದಿ ಕ್ಯಾಂಟೀನ್ ಮುಚ್ಚಿದ್ದರು. ಈ ಬಗ್ಗೆ ಕನ್ನಡಪ್ರಭ ವರದಿ ಮಾಡಿ ಬೆಳಕು ಚೆಲ್ಲಿದ ಹಿನ್ನಲೆ ಬಂದಾಗಿದ್ದ ಇಂದಿರಾ ಕ್ಯಾಂಟೀನ್ ಮತ್ತೆ ಆರಂಭವಾಗಿದೆ. ಕಾಳಜಿಗೆ ಮೆಚ್ಚುಗೆ ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಕಡಿಮೆ ಹಣದಲ್ಲಿ ಹೊಟ್ಟೆ ತುಂಬಿಸುತ್ತಿದ್ದ ಮುಚ್ಚಿದ್ದ ಇಂದಿರಾ ಕ್ಯಾಂಟೀನ್ ತೆಗೆಯಿಸಿ ಮತ್ತೆ ಆಹಾರ ಸಿಗಲು ಕಾರಣವಾದ ಕನ್ನಡಪ್ರಭ ಪತ್ರಿಕೆಯ ಸಾಮಾಜಿಕ ಕಾಳಜಿಗೆ ಶಿವಪುರ ಮಂಜಪ್ಪ, ಭೀಮನಬೀಡು ಮಂಜು, ಗೋಪಾಲಪುರ ಪ್ರಕಾಶ್, ಮಡಹಳ್ಳಿ ಮಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ ಗುರುವಾರ ಮಧ್ಯಾಹ್ನದ ಉಪಾಹಾರವನ್ನು ಕಾರ್ಮಿಕನೊಬ್ಬ ಸೇವಿಸುತ್ತಿರುವುದು. ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ ಗುರುವಾರ ಮಧ್ಯಾಹ್ನ ಊಟ ಪಡೆಯುತ್ತಿರುವ ಸಾರ್ವಜನಿಕರು. ಗುಂಡ್ಲುಪೇಟೆ ಇಂದಿರಾ ಕ್ಯಾಂಟೀನ್ ಬಂದಾಗಿದೆ ಎಂದು ಅ.4ರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲು ಬಿಡಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅ.5ರ ಕನ್ನಡಪ್ರಭದಲ್ಲಿ ಸುದ್ದಿ ಬಂದಿದೆ.