ಪುಸ್ತಕವೇ ಅಧ್ಯಾಪಕನ ನಿಜ ಸಂಗಾತಿ: ಪ್ರೊ.ದಾದಾಪೀರ್ ನವಿಲೆಹಾಳ್

| Published : Mar 22 2024, 01:08 AM IST

ಪುಸ್ತಕವೇ ಅಧ್ಯಾಪಕನ ನಿಜ ಸಂಗಾತಿ: ಪ್ರೊ.ದಾದಾಪೀರ್ ನವಿಲೆಹಾಳ್
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆಯ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘವನ್ನು ಪ್ರೊ.ದಾದಾಪೀರ್ ನವಿಲೆಹಾಳ್ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಿಕ್ಷಣವು ವಿವೇಕತನದಿಂದ ಕೂಡಿರಬೇಕು. ಶಿಕ್ಷಕರು ಮೌಲ್ಯಗಳ ಪ್ರವರ್ತಕರು ಹಾಗೂ ಮೌಲ್ಯವಾಹಕರಾಗಿರಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ದಾದಾಪೀರ್ ನವಿಲೆಹಾಳ್ ಪ್ರತಿಪಾದಿಸಿದರು.

ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳ ವಿಶೇಷತೆ ಮತ್ತು ಸಾಮರ್ಥ್ಯಗಳನ್ನು ಗುರುತಿಸ ಬೇಕು ಎಂದರಲ್ಲದೆ, ಅಧ್ಯಾಪಕನ ನಿಜವಾದ ಸಂಗಾತಿ ಪುಸ್ತಕಗಳಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಣ ಮತ್ತು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಓದು ಬರಹ ಅತ್ಯಂತ ಮುಖ್ಯವಾದದ್ದು, ಶಿಕ್ಷಕರು ಓದು ಬರಹವನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ. ಶಿಕ್ಷಕರೆಲ್ಲಾ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಿದಾಗ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.

ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಪರಶುರಾಮನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕ ವೃತ್ತಿಯ ಬಗ್ಗೆ ಅಭಿಮಾನವಿರಬೇಕು. ಅಲ್ಲದೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಸ್.ದಿವಾಕರ್ ನಾಯ್ಕ, ಸಹ ಪ್ರಾಧ್ಯಾಪಕರಾದ ಡಿ.ಮಂಜುಳ, ಕೆ.ಹನುಮಂತಪ್ಪ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.