ಕನುವನಘಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಕಲಾಸಿರಿ-೨೦೨೬ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಮ್ಮೆ ಹಾಳು ಮಾಡಿದರೆ ಮತ್ತೊಮ್ಮೆ ಸರಿಪಡಿಸಲು ಸಾಧ್ಯವಿಲ್ಲ ಎಂದರು. ಅಕ್ಕ-ಪಕ್ಕದ ಮನೆಯ ಮಕ್ಕಳನ್ನು ತೋರಿಸಿ, ಇಲ್ಲವೇ ಹೆಚ್ಚು ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಓದುವಂತೆ ಒತ್ತಡ ಹಾಕಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಲಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಕ್ಕಳ ಮನಸ್ಸು ಶುಭ್ರವಾದ ಬಿಳಿಯ ಹಾಳೆ ಇದ್ದಂತೆ ಎಂದು ನಟ, ಗಾಯಕ ಶಶಿಧರ್ ಕೋಟೆ ಹೇಳಿದರು.ತಾಲೂಕಿನ ಕನುವನಘಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಕಲಾಸಿರಿ-೨೦೨೬ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಮ್ಮೆ ಹಾಳು ಮಾಡಿದರೆ ಮತ್ತೊಮ್ಮೆ ಸರಿಪಡಿಸಲು ಸಾಧ್ಯವಿಲ್ಲ ಎಂದರು. ಅಕ್ಕ-ಪಕ್ಕದ ಮನೆಯ ಮಕ್ಕಳನ್ನು ತೋರಿಸಿ, ಇಲ್ಲವೇ ಹೆಚ್ಚು ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ಓದುವಂತೆ ಒತ್ತಡ ಹಾಕಬೇಡಿ. ಇದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಲಿದ್ದು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಮಕ್ಕಳ ದೈನಂದಿನ ಚಟುವಟಿಕೆಯ ಮೇಲೆ ಪಾಲಕರು ಗಮನ ಹರಿಸಬೇಕು. ಜೊತೆಗೆ ಮಕ್ಕಳ ಮನಸ್ಸಿನಲ್ಲಿ ಅಡಗಿರುವ ಪ್ರತಿಭೆ ಹಾಗೂ ಉನ್ನತ ಆಸೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳು ಭವಿ?ದಲ್ಲಿ ಬದುಕನ್ನು ಸದೃಢವಾಗಿ ಕಟ್ಟಿಕೊಳ್ಳುವಲ್ಲಿ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅನಿಲ್ ಮಾತನಾಡಿ, ಟೀವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರ ಇಡುವುದರ ಜೊತೆಗೆ ಪಾಲಕರು ಸಹ ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಕುಳಿತು ಓದು-ಬರಹದ ಬಗ್ಗೆ ಕಣ್ಣಾಡಿಸಬೇಕು. ಇದರಿಂದ ಮಕ್ಕಳು ಭವಿಷ್ಯ ಉತ್ತಮವಾಗಿ ರೂಪಗೊಳ್ಳಲಿದೆ. ಆದರೆ ಕೆಲ ಪಾಲಕರು ತಾವೇ ಕುಳಿತು ಟೀವಿ ವೀಕ್ಷಣೆ ಹಾಗೂ ಮೊಬೈಲ್ ಬಳಕೆಯತ್ತ ಹೆಚ್ಚು ಸಮಯ ಕಳೆಯುವ ಬರದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಅಗತ್ಯ ಆದ್ಯತೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಕಲರವ ಎಂಬ ವಾರ್ಷಿಕ ಸಂಚಿಕೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಕೆ.ಜೆ.ವೈಶಾಖ್ ಬರೆದಿರುವ ಧೃವತಾರೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಜ್ಯ ಮಕ್ಕಳ ಸಾಹಿತ್ಯ ಪರಿ?ತ್ ವತಿಯಿಂದ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎನ್. ಹರಿಪ್ರಸಾದ್, ಗೀತಾ, ನಾಗರತ್ನ, ಮಾಜಿ ಸದಸ್ಯ ಕೆ.ಟಿ.ನಾಗರಾಜ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಹಿರಿಯ ಚಿತ್ರನಟ ಶಿವಕುಮಾರ್ ಆರಾಧ್ಯ, ಮಾನವ ಹಕ್ಕುಗಳ ತನಿಖಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಸಂತೋಷ, ಜಿಲ್ಲಾಧ್ಯಕ್ಷ ತೇಜಸ್, ಪಿಡಿಒ ಕೆ.ಎಸ್.ಪ್ರಕಾಶ್, ಯುವ ರೈತ ಕೀರ್ತಿ, ಮಕ್ಕಳ ತಜ್ಞ ಡಾ.ಪವನ್, ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್, ಮುಖ್ಯಶಿಕ್ಷಕಿ ಡಿ.ಮಂಜಳಾ ಹಾಗೂ ಇತರರು ಇದ್ದರು.