ಸೌಹಾರ್ದಯುತ ಕ್ರಿಕೆಟ್‌ ಪಂದ್ಯಾವಳಿ

| Published : Feb 08 2025, 12:32 AM IST

ಸಾರಾಂಶ

ಚನ್ನರಾಯಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಸಿಕೊಂಡು ಬರುತ್ತಿರುವ ಪ್ರತಿವರ್ಷದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್ಲಾ ಇಲಾಖೆಯವರು ಉತ್ತಮವಾಗಿ ಆಟ ಆಡಿದ್ದಾರೆಂದು ಎಂದು ತಹಸೀಲ್ದಾರ್ ನವೀನ್ ಕುಮಾರ್ ತಿಳಿಸಿದರು. ಸರ್ಕಾರಿ ಅಧಿಕಾರಿಗಳ ಕೆಲಸದ ಒತ್ತಡದ ನಡುವೆಯೂ ಒಂದು ದಿನಗಳ ಕಾಲ ದೇಹ ದಂಡಿಸಿ ಮನಸ್ಸಿಗೆ ನೆಮ್ಮದಿಗೆ ಹಾಗೂ ಪರಿಸರದ ವಾತಾವರಣ ಬದಲಾಗುವ ದೃಷ್ಟಿಯಿಂದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಸಿಕೊಂಡು ಬರುತ್ತಿರುವ ಪ್ರತಿವರ್ಷದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಲ್ಲಾ ಇಲಾಖೆಯವರು ಉತ್ತಮವಾಗಿ ಆಟ ಆಡಿದ್ದಾರೆಂದು ಎಂದು ತಹಸೀಲ್ದಾರ್ ನವೀನ್ ಕುಮಾರ್ ತಿಳಿಸಿದರು.

ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ ಹಾಗೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಹಕರಿಸಿದವರಿಗೆ ಔಪಚಾರಿಕ ಕೂಟದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಒಂದು ಮಾದರಿಯಾದ ಪತ್ರಕರ್ತರ ಸಂಘವಾಗಿದ್ದು, ಸರ್ಕಾರಿ ಅಧಿಕಾರಿಗಳ ಕೆಲಸದ ಒತ್ತಡದ ನಡುವೆಯೂ ಒಂದು ದಿನಗಳ ಕಾಲ ದೇಹ ದಂಡಿಸಿ ಮನಸ್ಸಿಗೆ ನೆಮ್ಮದಿಗೆ ಹಾಗೂ ಪರಿಸರದ ವಾತಾವರಣ ಬದಲಾಗುವ ದೃಷ್ಟಿಯಿಂದ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಇಲಾಖೆಗಳ ತಂಡವನ್ನ ಒಗ್ಗೂಡಿಸಿ ಒಂದೇ ಸೂರಿನಡಿ ಸೌಹಾರ್ದಯುತ ಕ್ರಿಕೆಟ್ ಆಯೋಜಿಸಿದ್ದ ಪತ್ರಕರ್ತರ ಸಂಘಕ್ಕೆ ಅಭಿನಂದನೆಗಳು. ಇದೇ ರೀತಿ ಪ್ರತಿ ವರ್ಷ ಕ್ರಿಕೆಟ್ ಪಂದ್ಯಾವಳಿ ನಡೆಸಿಕೊಂಡು ಹೋಗುಬೇಕು. ಅದನ್ನ ನಮ್ಮ ಸಹಕಾರ ಇದ್ದೇ ಇರುತ್ತದೆ. ಬೇರೆ ತಾಲೂಕಿನ ಅಧಿಕಾರಿಗಳು ಸಹ ನಮಗೆ ದೂರವಾಣಿ ಕರೆ ಮಾಡಿ ನಮ್ಮ ತಾಲೂಕಿನಲ್ಲಿ ಈ ತರಹದ ವ್ಯವಸ್ಥೆ ಇಲ್ಲ. ಆದರೆ ನಿಮ್ಮ ತಾಲೂಕಿನಲ್ಲಿ ವಿಭಿನ್ನವಾಗಿದೆ ಎಂದು ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದಾರೆ ಎಂದರು.ಇತ್ತೀಚೆಗೆ ತುಮಕೂರಿನಲ್ಲಿ ನಡೆದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಂದನ್‌ಪುಟ್ಟಣ್ಣ ಮತ್ತು ಪುಟ್ಟರಾಜು ಅವರಿಗೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷ ಬನಶಂಕರಿ ರಘು, ಪುರಸಭಾ ಮುಖ್ಯಾಧಿಕಾರಿ ಯತೀಶ್ ಕುಮಾರ್, ಕಂದಾಯ ಇಲಾಖೆಯ ಪವನ್, ತಾಲೂಕು ಪಂಚಾಯಿತಿ ಅಧಿಕಾರಿ ಹರೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಶಿಕ್ಷಣ ಇಲಾಖೆಯ ವಿನಯ್, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ನಂದನ್ ಪುಟ್ಟಣ್ಣ, ಪುಟ್ಟರಾಜು, ಕಾರ್ಯದರ್ಶಿ ನಟೇಶ್, ಎ. ಎಲ್. ನಾಗೇಶ್ ಮತ್ತಿತರಿದ್ದರು.