ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ೨೦೨೩-೨೪ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಜಿಲ್ಲೆಯ ಅನುಷ್ಠಾನ ಇಲಾಖೆ, ಗ್ರಾಪಂ ಹಾಗೂ ಸರ್ಕಾರೇತರ ಸಂಸ್ಥೆಗೆ ರಾಜ್ಯಮಟ್ಟದ ಪುರಸ್ಕಾರ ದೊರೆತಿದೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಪಂ ಸಿಇಓ ಪ್ರವೀಣ್ ಪಿ. ಬಾಗೇವಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಜಿಲ್ಲೆಗೆ ಮೂರು ಪ್ರಶಸ್ತಿ ಪ್ರದಾನಮಹಾತ್ಮ ಗಾಂಧಿ ನರೇಗಾ ಒಗ್ಗೂಡಿಸುವಿಕೆಯಲ್ಲಿ ಬೆಂಗಳೂರು ವಿಭಾಗೀಯ ಮಟ್ಟದಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗ ಕೋಲಾರ ಜಿಲ್ಲೆ, ಅತ್ಯುತ್ತಮ ಅನುಷ್ಠಾನ ಇಲಾಖೆ, ಅತ್ಯುತ್ತಮ ಗ್ರಾಪಂ ಪುರಸ್ಕಾರಕ್ಕೆ ಕೋಲಾರ ತಾಲೂಕಿನ ಮದನಹಳ್ಳಿ, ಹಾಗೂ ಅತ್ಯುತ್ತಮ ಸರ್ಕಾರೇತ್ತರ ಸಂಸ್ಥೆ ಸ್ಥಾನಕ್ಕೆ ಎಫ್‌ಇಸಿ ಸ್ಥಂಸ್ಥೆ ಆಯ್ಕೆಯಾಗಿತ್ತು. ಬೆಂಗಳೂರಿನ ವಸಂತ ನಗರದ ಅಂಬೇಡ್ಕರ್ ಮೆಮೋರಿಯಲಿಸ್ಟ್ ಅಂಬೇಡ್ಕರ್ ಭವನದಲ್ಲಿ ನಡೆದ ನರೇಗಾ ಹಬ್ಬ-೨೦೨೫ರ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಚಿವರು ಪ್ರಶಸ್ತಿ ನೀಡಿ ಗೌರವಿಸಿದರು. ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರಕ್ಕೆ ಪಾತ್ರವಾದ ಪಂಚಾಯತ್ ರಾಜ್ ಇಂಜಿಯರಿಂಗ್ ವಿಭಾಗ-೨೦೨೩-೨೪ನೇ ಸಾಲಿನಲ್ಲಿ ಶೇ.೧೦೦ರ ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದೆ. ನರೇಗಾದಡಿಯಲ್ಲಿ ಕಳೆದ ವ? ಸಮಗ್ರ ಕೆರೆ ಅಭಿವೃದ್ಧಿ, ರಾಜಕಾಲುವೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶದಲ್ಲಿ ನಮ್ಮ ಹೊಲ-ನಮ್ಮ ರಸ್ತೆ ಅಭಿವೃದ್ಧಿ, ಸಿಸಿ ರಸ್ತೆ, ಸಿಸಿ ಚರಂಡಿಗಳನ್ನು ನಿರ್ಮಾಣ ಮಾಡಿ, ಅತ್ಯತ್ತಮ ಸಾಧನೆ ಮಾಡಲಾಗಿದೆ.
ಮದನಹಳ್ಳಿ ಅತ್ಯತ್ತಮ ಗ್ರಾಪಂಮದನಹಳ್ಳಿ ಗ್ರಾಮಪಂಚಾಯತಿ ಕಳೆದ ಸಾಲಿನಲ್ಲಿ ನರೇಗಾದಡಿಯಲ್ಲಿ ಶೇಕಡ ೧೦೦ರ ಮಾನವದಿನಗಳನ್ನು ಸೃಜನೆ ಮಾಡಲಾಗಿದ್ದು, ಪಂಚಾಯತಿ ವ್ಯಾಪ್ತಿಯಲ್ಲಿ ಶಾಶ್ವತ ಆಸ್ತಿಗಳನ್ನು ಸೃಷ್ಟಿಸಲಾಗಿದೆ. ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ, ಕಾಮಗಾರಿಗಳ ಮುಕ್ತಾಯ, ಆಧಾರ ಜೋಡಣೆ, ಒಂಬುಡ್ಸ್‌ಮನ್ ಮತ್ತು ಸಾಮಾಜಿಕ ಲೆಕ್ಕಪರಿ ಶೋಧನಾ ಪ್ರಕರಣಗಳ ಸಕಾಲದಲ್ಲಿ ವಸೂಲಾತಿ ಮತ್ತು ವಿಲೇವಾರಿಗೆ ಕ್ರಮವಹಿಸಲಾಗಿದೆ.ಕೆರೆಗಳಲ್ಲಿ ಹೊಳೆತ್ತುವುದು, ಕಾಲುವೆಗಳ ಅಭಿವೃದ್ಧಿ, ಕೃಷಿಹೊಂಡ, ಬದು ನಿರ್ಮಾಣ, ರಸ್ತೆ ಕಾಮಗಾರಿಗಳು. ದನದ ಕೊಟ್ಟಿಗೆ, ಎರೆಹುಳು ಗೊಬ್ಬರ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ನಿರ್ಮಾಣ, ಮೈದಾನ ಅಭಿವೃದ್ಧಿ, ವೈಯುಕ್ತಿಕ ಕಾಮಗಾರಿಗಳ ಅನುಷ್ಠನ ಪರಿಗಣಿಸಿ ಜಿಲ್ಲೆಯ ಅತ್ಯುತ್ತಮ ಗ್ರಾಮಪಂಚಾಯತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ವೈಜ್ಞಾನಿಕ ಕ್ರಮಗಳ ಜಾರಿ
ನರೇಗಾ ಯೋಜನೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕಾಮಗಾರಿಗಳ ಅನುಷ್ಠಾನದಲ್ಲಿ ವೈಜ್ಞಾನಿಕ ಕ್ರಮಗಳ ಜಾರಿ, ಜಲಸಂರಕ್ಷಣೆಗೆ ತೆಗೆದುಕೊಂಡ ಕ್ರಮಗಳು, ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಿಬ್ಬಂದಿಗೆ ತರಬೇತಿ ವಿಚಾರದಲ್ಲಿ ಎಫ್.ಇ.ಎಸ್ ಸಂಸ್ಥೆಯ ಕಾರ್ಯಗಳಿಗೆ ಮೆಚ್ಚಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿತ್ತು. ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಜಿಪಂ ರಾಜ್ ಎಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಾಂತ ರವೀಂದ್ರ, ಕೋಲಾರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮದನಹಳ್ಳಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಪಿಡಿಓ ಅನುರಾಧ ಇದ್ದರು.ಫೋಟೋ.................
ನರೇಗಾ ಪರಿಣಾಮಕಾರಿ ಅನುಷ್ಠಾನಗೊಳಿಸಿದ ಕೋಲಾರ ಜಿಲ್ಲೆಗೆ ಮೂರು ಪ್ರಶಸ್ತಿಗಳು ದೊರೆತಿತ್ತು ಬೆಂಗಳೂರಿನಲ್ಲಿ ನಡೆಸ ಸಮಾರಂಭದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಕೋಲಾರ ಜಿಪಂ ಸಿಇಓ ಪ್ರವೀಣ್ ಪಿ. ಬಾಗೇವಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.