ಸಾರಾಂಶ
ಮಹಾರಾಷ್ಟ್ರದ ಲೋನಾವಾಲದಲ್ಲಿ ಜರುಗಿದ ರಾಷ್ಟ್ರಮಟ್ಟದ ‘ಬ್ಯಾಂಕೋ ಬ್ಲೂ ರಿಬ್ಬನ್ ಮತ್ತು ವಾರ್ಷಿಕ ಶೃಂಗಸಭೆ’ಯಲ್ಲಿ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ಗೆ ‘ಬೆಸ್ಟ್ ಟರ್ನ್ ಅರೌಂಡ್ ಬ್ಯಾಂಕ್’ ಎಂಬ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಪ್ರಶಸ್ತಿ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಹಾರಾಷ್ಟ್ರದ ಲೋನಾವಾಲದಲ್ಲಿ ಜರುಗಿದ ರಾಷ್ಟ್ರಮಟ್ಟದ ‘ಬ್ಯಾಂಕೋ ಬ್ಲೂ ರಿಬ್ಬನ್ ಮತ್ತು ವಾರ್ಷಿಕ ಶೃಂಗಸಭೆ’ಯಲ್ಲಿ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್‌ಗೆ ‘ಬೆಸ್ಟ್ ಟರ್ನ್ ಅರೌಂಡ್ ಬ್ಯಾಂಕ್’ ಎಂಬ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಪ್ರಶಸ್ತಿ ಸ್ವೀಕರಿಸಿದರು.ಶತಮಾನದ ಹೆಗ್ಗಳಿಕೆಯ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾನದಂಡದಂತೆ ಬ್ಯಾಂಕಿನ ಹಣಕಾಸು ಸ್ಥಿರತೆ ಮತ್ತು ಸದೃಢತೆ ಖಚಿತಪಡಿಸಿಕೊಂಡು ಸಹಕಾರಿ ಬ್ಯಾಂಕಿಂಗ್ ಶ್ರೇಷ್ಠತೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ರಾಷ್ಟ್ರಮಟ್ಟದ ಈ ಸಮಾರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಭಾಗೇಶ್ವರ್ ಬ್ಯಾನರ್ಜಿ, ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಮಾರಂಭದಲ್ಲಿ ಕೊಲ್ಲಾಪುರದ ಎವಿಯಸ್ ಪಬ್ಲಿಕೇಷನ್ಸ್‌ನ ಮುಖ್ಯಸ್ಥ ಅವಿನಾಶ್ ಶಿಂಟ್ರಿ ಗುಂಡಾಲೆ ಮತ್ತು ಪೂನಾದ ಗ್ಯಾಲಕ್ಸಿ ಇನ್‌ನ ನಿರ್ದೇಶಕ ಅಶೋಕ್ ನಾಯಕ್ ಭಾಗವಹಿಸಿದ್ದರು.ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ವಿಷ್ಣುಮೂರ್ತಿ ಆಚಾರ್ಯ, ಮುಖ್ಯ ಸಲಹೆಗಾರರಾದ ಎಸ್. ಕುಮಾರಸ್ವಾಮಿ ಉಡುಪ, ನಿರ್ದೇಶಕರ ಮಂಡಳಿ, ಎಲ್ಲ ಸಿಬ್ಬಂದಿ ವರ್ಗದವರು, ಸದಸ್ಯರು ಮತ್ತು ಗ್ರಾಹಕರ ಸಹಕಾರವನ್ನು ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಈ ಸಂದರ್ಭದಲ್ಲಿ ಸ್ಮರಿಸಿದರು.