ತವರಿಗೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

| Published : Feb 04 2025, 12:30 AM IST

ಸಾರಾಂಶ

ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮ ಹಾರುಗೊಪ್ಪಗೆ ಆಗಮಿಸಿದ ಯೋಧ ಶಿವಾನಂದ ಚಿನ್ನಪ್ಪ ತಳವಾರ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಸ್ವಗ್ರಾಮ ಹಾರುಗೊಪ್ಪಗೆ ಆಗಮಿಸಿದ ಯೋಧ ಶಿವಾನಂದ ಚಿನ್ನಪ್ಪ ತಳವಾರ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.

ಹಾರುಗೊಪ್ಪ ಗ್ರಾಮದಲ್ಲಿ ಮಾಜಿ ಸೈನಿಕರು, ಗ್ರಾಮಸ್ಥರು, ಕುಟುಂಬಸ್ಥರು ಯೋಧ ಶಿವಾನಂದ ತಳವಾರ ದಂಪತಿಗೆ ಆರತಿ ಬೆಳಗಿ ಸ್ವಾಗತಿಸಲಾಯಿತು. ಬಳಿಕ ತೆರದ ಜೀಪ್‌ನಲ್ಲಿ ಮೆರವಣಿಗೆ ನಡೆಸಲಾಯಿತು. ಶಾಲಾ ಮಕ್ಕಳು, ಗ್ರಾಮಸ್ಥರು ಪುಷ್ಪವೃಷ್ಟಿಗೈದರು. ಯೋಧ ಶಿವಾನಂದ ಅವರು ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಯುವಕರು ಸೇನೆ ಸೇರಿ ತಾಯಿನಾಡಿನ ಸೇವೆ ಮಾಡಲು ಕರೆ ನೀಡಿದರು.

ಮಾಜಿ ಸೈನಿಕರಾದ ನಾಗಪ್ಪ ಕುರುಬರ, ಶಂಕರ ತಳವಾರ, ರಮೇಶ ಪೂಜೇರಿ, ಸುರೇಶ ಕೆಂಚನಾಯ್ಕರ, ಮಹಾಂತೇಶ ಮಲ್ಲಿಕಾರ್ಜುನ ತಳವಾರ, ರೇವಪ್ಪ ಗೊಡಚಿ, ವೀರಭದ್ರ ತಳವಾರ, ಆನಂದ ಸಿಂಗಾರಿ, ಮಲ್ಲಿಕಾರ್ಜುನ ಚಿಕ್ಕಬಸಣ್ಣವರ, ಪುಂಡಲೀಕ ತಳವಾರ, ನಾಗಪ್ಪ ಪೂಜೇರಿ, ರಾಚಯ್ಯ ಕಲ್ಲಯ್ಯನವರ, ನಿಂಗಪ್ಪ ಕುಂಟಮಾಯನ್ನವರ ಹಾಗೂ ಸರ್ಕಾರಿ ಶಾಲೆಯ ಶಿಕ್ಷಕರು, ಗ್ರಾಪಂ ಸದಸ್ಯರು, ಯುವಕರು, ಮಹರ್ಷಿ ವಾಲ್ಮೀಕಿ ಗೆಳೆಯರ ಬಳಗದವರು ಭಾಗವಹಿಸಿದ್ದರು.