ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಹಿಂದೂ ಸನಾತನ ಧರ್ಮ ಬೆಳೆಯಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಡಿಶಾಂತ್ ಹೇಳಿದರು.ಚಿಕ್ಕಮಗಳೂರಿನಲ್ಲಿ ಪ್ರತಿವರ್ಷದಂತೆ ನಡೆಯುವ ಪವಿತ್ರ ದತ್ತಪೀಠ ಶೋಭಾಯಾತ್ರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂದೆ ಬೈಕ್ ಹಾಗೂ ಆಟೋದಲ್ಲಿ ಹೊರಟಿರುವ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂ ಧರ್ಮ ಅನಾದಿಕಾಲದ ಒಂದು ಶ್ರೇಷ್ಠ ಧರ್ಮ, ಅದು ಬೆಳೆಯಬೇಕೆಂದು ಈ ದೇಶದ ಪ್ರಜೆಗಳ ಆಸೆ, ಅದರಂತೆ ಸನಾತನ ಧರ್ಮ ಬೆಳೆಯಬೇಕು, ದೇಶದಲ್ಲಿ ಎಲ್ಲರೂ ಸುಭಿಕ್ಷವಾಗಿ ಬಾಳಬೇಕು, ಯುವಕರು ಹೆಚ್ಚು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹಿಂದೂ ಧರ್ಮದ ಬಗ್ಗೆ ಗೌರವ ಬರುವಂತೆ ಹಾಗೂ ಜನತೆಗೆ ಅದರ ಬಗ್ಗೆ ಜಾಗೃತಿ ಬರುವಂತೆ ಮಾಡುವುದು ಅವರ ಕರ್ತವ್ಯ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತರೀತಿಯಲ್ಲಿ ಯಾತ್ರೆ ನಡೆಯಬೇಕು, ದತ್ತಾತ್ರೇಯರ ಆಶೀರ್ವಾದ ಪಡೆದು ಪುನೀತರಾಗಬೇಕು, ದೇಶಕ್ಕೆ ಒಳ್ಳೆಯದಾಗುವಂತೆ ಪ್ರಾರ್ಥಿಸಬೇಕು, ಸನಾತನ ಧರ್ಮಕ್ಕೆ ಗೌರವ ಸಿಗುವಂತೆ ನಡೆದುಕೊಳ್ಳಬೇಕೆಂದರು.
ಶೋಭಾಯಾತ್ರೆ ವೇಳೆ ನಗರದ ಪ್ರಮುಖ ಬೀದಿಗಳಲ್ಲಿ ದೇಶದ ಪ್ರಮುಖ ಸನಾತನ ಹಿಂದೂ ಧರ್ಮದ ಮುಖಂಡರ ಭಾವಚಿತ್ರದ ಫೋಟೋ ಪ್ರದರ್ಶಿಸಿ ಮೆರವಣಿಗೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ ಎಂ ಸಂತೋಷ್, ವಿಶ್ವ ಹಿಂದೂ ಪರಿಷತ್ ಮುಖಂಡ ಗುಂಡ, ಸಂತೋಷ್, ಅರುಣ್, ಭರತ್, ಲೋಕೇಶ್ ಮುಂತಾದವವರಿದ್ದರು.
ಫೋಟೋ: 12ಎಚ್ಎಸ್ಎನ್3 :ಚಿಕ್ಕಮಗಳೂರಿನಲ್ಲಿ ದತ್ತಪೀಠ ಶೋಭಾಯಾತ್ರೆಗೆ ಬೈಕ್, ಆಟೋದಲ್ಲಿ ಹೊರಟಿರುವ ಯಾತ್ರಾರ್ಥಿಗಳ ಪಯಣಕ್ಕೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂದೆ ಚಾಲನೆ ನೀಡಲಾಯಿತು.