ಮಾಜಿ ಶಾಸಕರಾದ ನಾರಾಯಣ, ಜಯಣ್ಣಗೆ ಕೆಳಮನೆಯಲ್ಲಿ ಸಂತಾಪ

| Published : Dec 13 2024, 12:48 AM IST

ಸಾರಾಂಶ

ಮಾಜಿ ಶಾಸಕರಾದ ಆರ್‌.ನಾರಾಯಣ ಮತ್ತು ಎಸ್‌.ಜಯಣ್ಣ ಅವರ ನಿಧನಕ್ಕೆ ಕೆಳಮನೆಯಲ್ಲಿ ಸಂತಾಪ ಸೂಚಿಸಲಾಯಿತು. ಗುರುವಾರ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ನಿರ್ಣಯ ಮಂಡಿಸಿದರು. ಈ ವೇಳೆ ಉಭಯ ನಾಯಕರ ಗುಣಗಾನ ಮಾಡಿದರು. ಮಾಜಿ ಶಾಸಕ ಆರ್.ನಾರಾಯಣ ಮೊದಲ ಬಾರಿಗೆ 9ನೇ ವಿಧಾನಸಭೆ ಪ್ರವೇಶಿಸಿದ ನಂತರ 10ನೇ ಮತ್ತು 11ನೇ ವಿಧಾನಸಭೆಗೆ ಪುನರ್‌ ಆಯ್ಕೆಗೊಂಡಿದ್ದರು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸಭೆ

ಮಾಜಿ ಶಾಸಕರಾದ ಆರ್‌.ನಾರಾಯಣ ಮತ್ತು ಎಸ್‌.ಜಯಣ್ಣ ಅವರ ನಿಧನಕ್ಕೆ ಕೆಳಮನೆಯಲ್ಲಿ ಸಂತಾಪ ಸೂಚಿಸಲಾಯಿತು.

ಗುರುವಾರ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸಂತಾಪ ನಿರ್ಣಯ ಮಂಡಿಸಿದರು. ಈ ವೇಳೆ ಉಭಯ ನಾಯಕರ ಗುಣಗಾನ ಮಾಡಿದರು. ಮಾಜಿ ಶಾಸಕ ಆರ್.ನಾರಾಯಣ ಮೊದಲ ಬಾರಿಗೆ 9ನೇ ವಿಧಾನಸಭೆ ಪ್ರವೇಶಿಸಿದ ನಂತರ 10ನೇ ಮತ್ತು 11ನೇ ವಿಧಾನಸಭೆಗೆ ಪುನರ್‌ ಆಯ್ಕೆಗೊಂಡಿದ್ದರು ಎಂದು ಹೇಳಿದರು.

ಎಸ್‌.ಜಯಣ್ಣ ಅವರು ಪ್ರಸ್ತುತ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 9ನೇ ವಿಧಾನಸಭೆಗೆ ಪ್ರಥಮ ಬಾರಿಗೆ ಆಯ್ಕೆಗೊಂಡು ನಂತರ 2013ರಲ್ಲಿ 14ನೇ ವಿಧಾನಸಭೆಗೆ ಪುನರಾಯ್ಕೆಗೊಂಡಿದ್ದರು ಎಂದರು. ಸಭಾಧ್ಯಕ್ಷರ ಸಂತಾಪ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇಬ್ಬರು ನಾಯಕರ ಜತೆ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ಪಕ್ಷದ ಅಧ್ಯಕ್ಷರಾಗಿ ನಾರಾಯಣ ಅವರು ಕೆಲಸ ಮಾಡಿದ್ದರು. ಕ್ಷೇತ್ರ ಪುನರ್‌ವಿಂಗಡನೆಗೊಂಡ ಬಳಿಕ ಮತ್ತೆ ಸ್ಪರ್ಧಿಸಲು ಅವಕಾಶ ಲಭ್ಯವಾಗಲಿಲ್ಲ. ಇನ್ನು, ಜಯಣ್ಣ ಅವರು ಸಜ್ಜನಿಕೆ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು. ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೃಷಿ ಸಚಿವ ಚಲುವರಾಯಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್‌.ಡಿ.ಮಹದೇವಪ್ಪ, ಸದಸ್ಯರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಗೌಡ, ಪುಟ್ಟರಂಗಶೆಟ್ಟಿ ಇತರರು ಚರ್ಚೆಯಲ್ಲಿ ಭಾಗವಹಿಸಿದರು. ಸಭಾಧ್ಯಕ್ಷರ ಸಂತಾಪ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಇಬ್ಬರು ನಾಯಕರ ಜತೆ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ಪಕ್ಷದ ಅಧ್ಯಕ್ಷರಾಗಿ ನಾರಾಯಣ ಅವರು ಕೆಲಸ ಮಾಡಿದ್ದರು. ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಮತ್ತೆ ಸ್ಪರ್ಧಿಸಲು ಅವಕಾಶ ಲಭ್ಯವಾಗಲಿಲ್ಲ. ಇನ್ನು, ಜಯಣ್ಣ ಅವರು ಸಜ್ಜನಿಕೆ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಕೃಷಿ ಸಚಿವ ಚಲುವರಾಯಸ್ವಾಮಿ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಸದಸ್ಯರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಗೌಡ, ಪುಟ್ಟರಂಗಶೆಟ್ಟಿ ಇತರರು ಚರ್ಚೆಯಲ್ಲಿ ಭಾಗವಹಿಸಿದರು.