ಏಳೇ ನಿಮಿಷದಲ್ಲಿ ಬಿಸಿನೀರು ನೀಡುವ ದೇಸಿ ಬಾಯ್ಲರ್‌

| Published : Sep 15 2025, 01:00 AM IST

ಏಳೇ ನಿಮಿಷದಲ್ಲಿ ಬಿಸಿನೀರು ನೀಡುವ ದೇಸಿ ಬಾಯ್ಲರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಗೊಮ್ಮಟೇಶ ಕೃಷಿ ಸೇವಾ ಕೇಂದ್ರವು ಗುಣಮಟ್ಟದ ದೇಸಿ ಬಾಯ್ಲರ್‌ ಸಿದ್ಧಪಡಿಸಿ ಮಾರುಕಟ್ಟೆಗೆ ನೀಡಿದೆ. ಶನಿವಾರದಿಂದ ಧಾರವಾಡದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಹುಬ್ಬಳ್ಳಿ: ಧಾರವಾಡ ಕೃಷಿಮೇಳದಲ್ಲಿ ನೀರು ಕಾಯಿಸುವ ಸ್ವದೇಶಿ ಬಾಯ್ಲರ್‌ ಗ್ರಾಹಕರ ಗಮನ ಸೆಳೆಯುತ್ತಿದೆ. ಬರಿ ಏಳೇ ನಿಮಿಷದಲ್ಲಿ ಬಿಸಿನೀರು ನೀಡುವ ಈ ಬಾಯ್ಲರ್‌ ಖರೀದಿಗೆ ಜನತೆ ಮುಗಿಬಿದ್ದಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಗೊಮ್ಮಟೇಶ ಕೃಷಿ ಸೇವಾ ಕೇಂದ್ರವು ಗುಣಮಟ್ಟದ ದೇಸಿ ಬಾಯ್ಲರ್‌ ಸಿದ್ಧಪಡಿಸಿ ಮಾರುಕಟ್ಟೆಗೆ ನೀಡಿದೆ. ಶನಿವಾರದಿಂದ ಧಾರವಾಡದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿದ್ಯುತ್ ದರ ಹೆಚ್ಚಳ, ಉರುವಲು ಕೊರತೆಯಿಂದ ಮನೆಗಳಲ್ಲಿ ನೀರು ಕಾಯಿಸುವುದು ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಮುಕ್ತಿ ನೀಡುವುದಕ್ಕಾಗಿಯೇ "ಗೊಮ್ಮಟೇಶ್ ಬಾಯ್ಲರ್‌ ಆ್ಯಂಡ್‌ ಸೋಲಾರ್‌ ಸಂಸ್ಥೆ "ಯು ಸ್ಟೀನ್‌ಲೆಸ್‌ ಸ್ಟೀಲ್‌ ಕಾಯಿಸುವ ಟಾಕಿ (ಬಾಯ್ಲರ್) ಪರಿಹಾರದ ರೂಪದಲ್ಲಿ ನೀಡಿದೆ.

ಐದು ಬಗೆಯ ಬಾಯ್ಲರ್‌: ಮೇಳದಲ್ಲಿ ಐದು ಬಗೆಯ ಟಾಕಿಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದೆ. ಇದರಲ್ಲಿ ಎರಡು ಬಗೆಯಲ್ಲಿ ಕಟ್ಟಿಗೆ, ಇಲೆಕ್ಟ್ರಿಕ್, ಗ್ಯಾಸ್, ಡಿಸೇಲ್ ಬಳಕೆ ಮಾಡಿ ನೀರು ಕಾಯಿಸುವ ಬಾಯ್ಲರ್‌ ದೊರೆಯುತ್ತಿವೆ. ರಾಷ್ಟ್ರೀಯ ಮಾನ್ಯತೆ ಪಡೆದ ಎಂಜಿನಿಯರ್‌ಗಳು ಮೊಟ್ಟಮೊದಲ ಬಾರಿಗೆ ರೂಪಿಸಿದ್ದಾರೆ. ದೀರ್ಘಕಾಲ ಬಾಳಿಕೆ ಬರುವ ಬಾಯ್ಲರ್ ಇದಾಗಿದ್ದು, ಕೇವಲ 7 ನಿಮಿಷದಲ್ಲಿ ಬಿಸಿ ನೀರು ದೊರೆಯುತ್ತದೆ.

ಒಮ್ಮೆ ನೀರು ಕಾಯಿಸಿದರೆ 18 ಗಂಟೆಗಳ ಕಾಲ ಬಿಸಿಯಾಗಿರುತ್ತದೆ. 20 ಲೀಟರ್‌ನಿಂದ ಹಿಡಿದು 1000 ಲೀಟರ್‌ ಸಾಮರ್ಥ್ಯ ಹೊಂದಿರುವ ಬಾಯ್ಲರ್‌ಗಳು ಮಾರಾಟಕ್ಕೆ ಲಭ್ಯವಿವೆ. 35 ರಿಂದ 40 ವರ್ಷಗಳ ವರೆಗೆ ಬಾಳಿಕೆ ಬರಲಿವೆ. ಕೃಷಿಮೇಳದಲ್ಲಿ ಬುಕ್ ಮಾಡಿದರೆ ಸೂಕ್ತ ರಿಯಾಯಿತಿ ಜತೆಗೆ ಉಚಿತವಾಗಿ ಹೋಂ ಡೆಲಿವರಿ ವ್ಯವಸ್ಥೆ ಕಲ್ಪಿಸಿರುವುದು ವಿಶೇಷ.

ಸೋಲಾರ್ ಸೌಲಭ್ಯ: ಮೇಳದಲ್ಲಿ ಬಾಯ್ಲರ್‌ನೊಂದಿಗೆ ಟಾಪೆಸ್ಟ್‌ ಮಾಡಲ್‌ನ ಸೋಲಾರ್‌ಗಳನ್ನು ಮಾರಾಟಕ್ಕಿರಿಸಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಎಲ್‌, ಜಿಐ, ಎಸ್‌ಎಸ್‌, ಎಂಎಸ್‌ ಸೇರಿದಂತೆ ಹಲವು ವಿಧಗಳಲ್ಲಿ ಸೋಲಾರ್‌ಗಳು ಇಲ್ಲಿ ದೊರೆಯುತ್ತಿವೆ. ಕೃಷಿಮೇಳದಲ್ಲಿ ಶನಿವಾರ ಮತ್ತು ಭಾನುವಾರ ಎರಡೇ ದಿನಗಳಲ್ಲಿ 35 ಸಾವಿರಕ್ಕೂ ಅಧಿಕ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಜತೆಗೆ ಹಲವರು ಬುಕ್‌ ಮಾಡಿದ್ದಾರೆ.

ಇಲ್ಲಿಗೆ ಸಂಪರ್ಕಿಸಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿಯಲ್ಲಿರುವ ಗೊಮ್ಮಟೇಶ ಬಾಯ್ಲರ್‌ ಆ್ಯಂಡ್‌ ಸೋಲಾರ್ ಸಂಸ್ಥೆ. ಮೊ: 9972284678, 9686704678, 9353100008 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಧಾರವಾಡ ಕೃಷಿಮೇಳದಲ್ಲಿ ಗೊಮ್ಮಟೇಶ್ ದೇಸಿ ಬಾಯ್ಲರ್‌ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಮೇಳದ ಎರಡು ದಿನಗಳಲ್ಲಿ ಸಾವಿರಾರು ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಬಾಯ್ಲರ್‌ಗಳನ್ನು ಮುಂಗಡ ಹಣ ನೀಡಿ ಬುಕ್‌ ಮಾಡುತ್ತಿದ್ದಾರೆ ಎಂದು ಗೊಮ್ಮಟೇಶ ಬಾಯ್ಲರ್‌ ಆ್ಯಂಡ್‌ ಸೋಲಾರನ ಮಾಲಿಕ ಪ್ರಜ್ವಲ್‌ ಐತವಾಡಿ ಹೇಳಿದರು.