ಶಿಕ್ಷಕ ಭವಿಷದ ಪ್ರಜೆಯನ್ನು ರೂಪಿಸುವ ರೂವಾರಿ

| Published : Aug 26 2024, 01:43 AM IST

ಸಾರಾಂಶ

ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೆಲ್ಲ ಮಕ್ಕಳಾಗಿರಬಹುದು, ಯುವಕರಾಗಿರಬಹುದು ದುಡಿಕಿ ನಿರ್ಧಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ದಶಕಗಳ ಹಿಂದೆ ಎಂತಹ ಸಮಸ್ಯೆಯನ್ನಾಗಲಿ ಎದುರಿಸುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು, ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಚೇಳೂರು

ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಾಗಿದ್ದು, ಎಲ್ಲ ರೀತಿಯ ಪ್ರಜೆಗಳ ಭವಿಷ್ಯ ರೂಪಿಸುವ ರುವಾರಿಗಳಾಗಿರುತ್ತಾರೆ ಎಂದು ಶ್ರೀ ಗೂಳೂರು ನಿಡುಮಾಮಿಡಿ ಜಗದ್ಗುರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಮಹಾಸ್ವಾಮಿಯವರು ತಿಳಿಸಿದರು. ತಾಲೂಕಿನ ಎಂ.ನಲ್ಲಗುಟ್ಲಪಲ್ಲಿ ಸಮೀಪದ ಕೊಂಡಿಕೊಂಡ ಗಂಗಮ್ಮ ಬೆಟ್ಟದಲ್ಲಿ ಶ್ರೀ ಧರ್ಮಗುರು ಬಿ‌.ಇಡಿ ಕಾಲೇಜಿನ ವತಿಯಿಂದ ಎರಡು ದಿನಗಳ ಸಮುದಾಯ ಸಹಬಾಳ್ವೆ ಶಿಬಿರಕ್ಕೆ ಶನಿವಾರ ಸಂಜೆ ಚಾಲನೆ ನೀಡಿ ಮಾತನಾಡಿ, ಯಾವ ವೃತ್ತಿಯೂ ಕನಿಷ್ಠ ಅಲ್ಲ. ಆದರೆ ಕೆಲವು ವೃತ್ತಿಗಳು ಶ್ರೇಷ್ಟ ಗುಣಗಳನ್ನು ಹೊಂದಿರುತ್ತವೆ.ಹಾಗಾಗಿ ಶಿಕ್ಷಕ ವೃತ್ತಿಯು ಶ್ರೇಷ್ಟ ಗುಣಗಳುಳ್ಳ ವೃತ್ತಿಯಾಗಿದ್ದು ಉಳಿದೆಲ್ಲ ವೃತ್ತಿಗಳನ್ನು ಪೋಷಿಸುತ್ತದೆ ಎಂದರು.

ದುಡುಕಿ ನಿರ್ಧಾರ ಬೇಡ

ಇತ್ತೀಚೆಗೆ ಸಣ್ಣಪುಟ್ಟ ವಿಷಯಗಳಿಗೆಲ್ಲ ಮಕ್ಕಳಾಗಿರಬಹುದು, ಯುವಕರಾಗಿರಬಹುದು ದುಡಿಕಿ ನಿರ್ಧಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕೆಲವು ದಶಕಗಳ ಹಿಂದೆ ಎಂತಹ ಸಮಸ್ಯೆಯನ್ನಾಗಲಿ ಎದುರಿಸುತ್ತಿದ್ದರು. ಸಮಸ್ಯೆ ಪರಿಹಾರವಾಗಲಿ ಅಥವಾ ಆಗದಿರಲಿ ದೃಢ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು‌. ಆದರೆ ಈಗಿನ ಪರಿಸ್ಥಿತಿ ಭಿನ್ನವಾಗಿದ್ದು, ಆತ್ಮಹತ್ಯೆಯಂತಹ ನರ‍್ಧಾರಗಳನ್ನು ಪಡೆಯುತ್ತಿದ್ದಾರೆ. ಇಂತಹ ದುರ್ಬಲ ಮನಸ್ಸುಗಳನ್ನು ಬದಲಾಯಿಸುವಂತಹ ಕೆಲಸ ಈಗಿನ ಶಿಕ್ಷಕರು ಮಾಡಬೇಕಿದೆ ಎಂದು ಸ್ವಾಮೀಜಿಯವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕ ಶೇಷಾದ್ರಿಯವರು ಮಾತನಾಡಿ ಗಡಿಭಾಗದಲ್ಲಿ ಗೂಳೂರು ನಿಡುಮಾಮಿಡಿ ಮಹಾಸಂಸ್ಥಾನ ಮಠದ ವತಿಯಿಂದ ಶೈಕ್ಷಣಿಕ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.‌ಶಾಲೆಗಳ ಸ್ಥಾಪನೆಯಿಂದ ಶಿಕ್ಷಣ ವಂಚಿತರಿಗೂ ಶಿಕ್ಷಣ ಸೌಲಭ್ಯ ದೊರೆಯುವಂತಾಯಿತು ಎಂದರು.ಶಿಕ್ಷಕ ಕಲಿಕಾರ್ಥಿಯಾಗಿರಬೇಕು:

ಸಾಹಿತಿ ವಲ್ಲೀಬಾಷಾರವರು ಮಾತನಾಡಿ, ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡವರು ನಿರಂತರವಾಗಿ ಚಟುವಟಿಕೆಯಿಂದ ಕೂಡಿರಬೇಕು. ಮಕ್ಕಳಲ್ಲಿನ ಭಿನ್ನತೆಗಳನ್ನು ಗುರ್ತಿಸಿ ಸೃಜನಶೀಲರನ್ನಾಗಿಸಲು ಅವಕಾಶಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕನಾದವನು ಸದಾ ಕಲಿಕರ‍್ಥಿಯಾಗಿ ಜ್ಞಾನದಾಹವನ್ನು ಹೊಂದಿರಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕ ಮುನಿರಾಜು, ನಿವೃತ್ತ ಶಿಕ್ಷಕ ರಾಮಕೃಷ್ಣಾರೆಡ್ಡಿ, ಜಾನಪದ ಕಲಾವಿದ ಗೋಪಿನಾಯಕ್, ಪ್ರಾಂಶುಪಾಲ ಬಸವರಾಜ ಸಿ ಕೊರಳ್ಳಿ, ಉಪಪ್ರಾಂಶುಪಾಲ ಕೆ.ಎಂ ಲಕ್ಷ್ಮೀನಾರಾಯಣ, ಸಹಾಯಕ ಪ್ರಾಧ್ಯಾಪಕರಾದ ಚನ್ನಕೃಷ್ಣ, ಹಾಲೇಷಪ್ಪ, ರವಿಶಂಕರ್, ಅಧೀಕ್ಷಕ ತಿಪ್ಪಣ್ಣ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ನಾಗರಾಜ ಮತ್ತಿತರರು ಇದ್ದರು.