ಸಾರಾಂಶ
ರಾಣಿಬೆನ್ನೂರು: ಶಿಕ್ಷಕ ಅರಿವಿನ ಅಕ್ಷಯ ಪಾತ್ರೆಯಿದ್ದಂತೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಸಿ. ನಾಗರಜ್ಜಿ ಹೇಳಿದರು. ನಗರದ ಬಿಎಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ಜ್ಞಾನ, ಕೌಶಲ್ಯ ಹಾಗೂ ಜೀವನ ಮೌಲ್ಯಗಳ ಪ್ರತಿಪಾದಕ, ಸಾಂಸ್ಕೃತಿಕ ರಾಯಭಾರಿ. ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಕನಸು ಬಿತ್ತುವ ಶ್ರೇಷ್ಠ ಕೃಷಿಕ ಎಂದರು. ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ಶಿಕ್ಷಕ ಜ್ಞಾನದ ಜ್ಯೋತಿಯಾಗುವುದರ ಜತೆಗೆ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ನಿರಂತರ ಅಧ್ಯಯನಶೀಲರಾಗಿ ಬೋಧನೆಯ ಉಪಾಯಗಳೊಂದಿಗೆ ಮಕ್ಕಳ ಮನಸ್ಸನ್ನು ಅರಿಯುವ ಕಲಾಕಾರನಾಗಿರಬೇಕು ಎಂದರು.ಕಾಲೇಜಿನ ಪ್ರಾ. ಎಂ.ಎಂ.ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎ.ಶಂಕರನಾಯ್ಕ, ಪ್ರೊ.ಪರಶುರಾಮ ಪವಾರ, ಪ್ರೊ. ಶ್ರೀಕಾಂತ ಗೌಡಶಿವಣ್ಣನವರ, ಪ್ರೊ. ಹೆಚ್.ಐ. ಬ್ಯಾಡಗಿ, ಪ್ರೊ. ವಂದನಾ ಪಿ.ಎನ್., ಪ್ರೊ. ಪ್ರಿಯಾಂಕಾ ಮಲ್ಲಾಡದ, ಶಿವಕುಮಾರ ಜಾಧವ, ಮುತ್ತುರಾಜ ಸಿದ್ದಣ್ಣನವರ, ಮೇಘನಾ ಮಾಕನೂರ, ಭಾರತಿ, ರಾಜೇಶ್ವರಿ ಭಗವಂತಗೌಡ್ರ, ರಮೇಶ ಎಚ್., ಪೂಜಾ ಹುಲ್ಲತ್ತಿ, ಸಾವಿತ್ರಾ ಕೆರೂಡಿ, ರಮೇಶ, ಪ್ರಿಯಾರಾಣಿ, ಭಾರತಿ ಉಪಸ್ಥಿತರಿದ್ದರು.