ಪ್ರೀತಿಸಿದ ಯುವತಿಗೆ ಚಾಕುವಿನಿಂದ ಇರಿದ ಯುವಕ

| Published : Jan 17 2024, 01:45 AM IST / Updated: Jan 17 2024, 01:46 AM IST

ಸಾರಾಂಶ

ಯುವತಿಗೆ ಪ್ರಿಯಕರನೇ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಜಿಲ್ಲೆಯ ಹಾಡೋನಹ್ಳಳಿ ಗ್ರಾಮದ ಯುವಕ, ಯುವತಿ ಪರಸ್ಪರ ಪ್ರೇಮಿಸುತ್ತಿದ್ದರು. ಈ ಮಧ್ಯೆ ಪ್ರೀತಿಯಲ್ಲಿ ಭಿನ್ನರಾಗ ಹೊಮ್ಮಿದೆ. ಒಂದೇ ಸಮುದಾಯದ ಪ್ರೇಮಿಗಳಾದರೂ ಮದುವೆಯಾಗಲು ಸಾಧ್ಯ ಆಗಿರಲಿಲ್ಲ.

ಶಿವಮೊಗ್ಗ: ಯುವತಿಗೆ ಪ್ರಿಯಕರನೇ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಹಾಡೋನಹ್ಳಳಿ ಗ್ರಾಮದ ಯುವಕ, ಯುವತಿ ಪರಸ್ಪರ ಪ್ರೇಮಿಸುತ್ತಿದ್ದರು. ಈ ಮಧ್ಯೆ ಪ್ರೀತಿಯಲ್ಲಿ ಭಿನ್ನರಾಗ ಹೊಮ್ಮಿದೆ. ಒಂದೇ ಸಮುದಾಯದ ಪ್ರೇಮಿಗಳಾದರೂ ಮದುವೆಯಾಗಲು ಸಾಧ್ಯ ಆಗಿರಲಿಲ್ಲ.

ಸಾಲದ್ದಕ್ಕೆ ಪ್ರೀತಿಯಲ್ಲಿನ ಭಿನ್ನರಾಗದ ಹಿನ್ನೆಲೆ ಮಂಗಳವಾರ ಶಿವಪ್ಪ ನಾಯಕ ವೃತ್ತದ ಬಳಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಯುವಕನು ಸಿಟ್ಟಿನ ಬರದಲ್ಲಿ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಘಟನೆಯನ್ನು ನೋಡಿದ ಸ್ಥಳೀಯರು ಯುವಕನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಅಲ್ಲದೇ, ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನೊಂದೆಡೆ ಪೆಟ್ಟು ತಿಂದ ಯುವಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕ ಚೇತನ್ ಶಿವಮೊಗ್ಗ ಆಟೋ ಕಾಂಪ್ಲೆಕ್ಸ್‌ನಲ್ಲಿ ವರ್ಕ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಆರು ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದು, ಕಳೆದ ಒಂದು ವರ್ಷದಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಇತ್ತು. ಇತ್ತೀಚಿಗೆ ಆಕೆಗೆ ಬೇರೆ ಕಡೆ ಮದುವೆ ಮಾಡಲು ಅವರ ಮನೆಯವರು ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - (-ಸಾಂದರ್ಭಿಕ ಚಿತ್ರ)