ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ 26ಕ್ಕೆ ಸಚಿವರ ಚಾಲನೆ

| Published : Jan 17 2024, 01:45 AM IST

ಸಾರಾಂಶ

ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ ಹೇಳಿದ್ದು ಹೀಗೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜ.೨೬ ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಭಾರತದ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮವನ್ನು ಆಚರಿಸುವ ಕುರಿತು ಪ್ರಸ್ತಾಪಿಸಲು ಹಾಗೂ ಏಕಕಾಲದಲ್ಲಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಆಚರಿಸುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರದ ಮೆರವಣಿಗೆಗೆ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಎರಡೂ ಸ್ತಬ್ಧಚಿತ್ರಗಳು ಜಿಲ್ಲೆಯಾದ್ಯಂತ ೨೭ ದಿನಗಳ ಕಾಲ ಸಂಚರಿಸಲಿವೆ. ಜನವರಿ ೨೬ ರಿಂದ ಫೆಬ್ರವರಿ ೨೩ರವರೆಗೆ ಸ್ತಬ್ಧಚಿತ್ರ ಜಿಲ್ಲೆಯಾದ್ಯಂತ ಸಂಚರಿಸಿ, ಫೆ.೨೩ರಂದು ಬೆಂಗಳೂರಿಗೆ ಎರಡೂ ಸ್ತಬ್ಧಚಿತ್ರಗಳು ತಲುಪಲಿವೆ. ಒಂದು ವಿಜಯಪುರದಿಂದ ಹಾಗೂ ಇನ್ನೊಂದು ಇಂಡಿಯಿಂದ ಸ್ತಬ್ಧಚಿತ್ರ ಸಂಚರಿಸಲಿದೆ. ಜಿಲ್ಲೆಯ ೧೩ ತಾಲೂಕಿನ ೨೧೧ ಗ್ರಾಮ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಪುರಸಭೆ ವ್ಯಾಪ್ತಿಗಳಲ್ಲಿ ಸ್ತಬ್ಧಚಿತ್ರ ಸಂಚರಿಸಲಿವೆ ಎಂದು ತಿಳಿಸಿದರು.ಜಿಲ್ಲೆಯ ಚಡಚಣ ತಾಲೂಕಿನಲ್ಲಿ ೩ ದಿನ, ಇಂಡಿ ತಾಲೂಕಿನಲ್ಲಿ ೯ ದಿನ, ಆಲಮೇಲ ತಾಲೂಕಿನಲ್ಲಿ ೩ ದಿನ, ದೇವರಹಿಪ್ಪರಗಿ ತಾಲೂಕಿನಲ್ಲಿ ೪ ದಿನ, ಸಿಂದಗಿ ತಾಲೂಕಿನಲ್ಲಿ ೪ ದಿನ, ತಾಳಿಕೋಟೆ ತಾಲೂಕಿನಲ್ಲಿ ೪ ದಿನ, ಮುದ್ದೇಬಿಹಾಳ ತಾಲೂಕಿನಲ್ಲಿ ೬ ದಿನ, ಬಸವನಬಾಗೇವಾಡಿ ತಾಲೂಕಿನಲ್ಲಿ ೪ ದಿನ, ಕೊಲ್ಹಾರ ತಾಲೂಕಿನಲ್ಲಿ ೨ ದಿನ, ಬಬಲೇಶ್ವರ ತಾಲೂಕಿನಲ್ಲಿ ೪ ದಿನ, ತಿಕೋಟಾ ತಾಲೂಕಿನಲ್ಲಿ ೪ ದಿನ ಹಾಗೂ ವಿಜಯಪುರ ತಾಲೂಕಿನಲ್ಲಿ ೬ ದಿನ, ನಿಡಗುಂದಿ ತಾಲೂಕಿನಲ್ಲಿ ೩ ದಿನ ಕಾಲ ಸ್ತಬ್ಧಚಿತ್ರ ಸಂಚರಿಸಲಿವೆ ಎಂದು ವಿವರಿಸಿದರು.

ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಂಬಂಧಿಸಿದಂತೆ ವಿಜಯಪುರ ತಾಲೂಕಿಗೆ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ (ಮೊ:೯೪೮೦೮೫೭೦೦೪), ಬಬಲೇಶ್ವರ ತಾಲೂಕಿಗೆ ಕೃಷಿ ಇಲಾಖೆ ಉಪನಿರ್ದೇಶಕ ಪ್ರಕಾಶ ಚವ್ಹಾಣ (ಮೊ:೮೨೭೭೯೩೦೬೦೨), ತಿಕೋಟಾ ತಾಲೂಕಿಗೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಇಂಡಿ ತಾಲೂಕಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಮ ವಿಜಯಕುಮಾರ ಮೆಕ್ಕಳಕಿ, ಚಡಚಣ ತಾಲೂಕಿಗೆ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸಿ.ಬಿ.ಕುಂಬಾರ ಹಾಗೂ ಸಿಂದಗಿ ತಾಲೂಕಿಗೆ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ದೇವರಹಿಪ್ಪರಗಿ ತಾಲೂಕಿಗೆ ಇಂಡಿ ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಪವಾರ, ಆಲಮೇಲ ತಾಲೂಕಿಗೆ ಅಲ್ಪಸಂಖ್ಯಾತರ ಇಲಾಕೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ಮುದ್ದೇಬಿಹಾಳ ತಾಲೂಕಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಆಶಾಪುರ, ತಾಳಿಕೋಟೆ ತಾಲೂಕಿಗೆ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ, ಬಸವನಬಾಗೇವಾಡಿ ತಾಲೂಕಿಗೆ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಕೊಲ್ಹಾರ ತಾಲೂಕಿಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಹಾಗೂ ನಿಡಗುಂದಿ ತಾಲೂಕಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಅವರನ್ನು ನೇಮಕ ಮಾಡಲಾಗಿದ್ದು, ಎರಡೂ ಸ್ತಬ್ಧ ಚಿತ್ರಗಳು ವ್ಯವಸ್ಥಿತವಾಗಿ ಸಂಚರಿಸಲು ನಿರ್ವಹನೆಗಾಗಿ ತಾಲೂಕಾವಾರು ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಸಂಬಂಧಿಸಿದ ತಹಸೀಲ್ದಾರ್‌ರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು.

ತಾಲೂಕು ಹಂತದಲ್ಲಿ ಸಭೆ ಕರೆದು, ಮೆರವಣಿಗೆ, ರಚನೆ ಮತ್ತು ಸಂಯೋಜನೆ ಮಾರ್ಗ, ತುಂಗುವಿಕೆ, ವಸತಿ, ವಿಶ್ರಾಂತಿ, ಸುರಕ್ಷತೆ ಸೇರಿದಂತೆ ಪ್ರತಿದಿನ ೬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ತಬ್ಧಚಿತ್ರಗಳು ಸಂಚರಿಸುವಂತೆ ನೋಡಿಕೊಳ್ಳಲು ಸೂಕ್ತ ರೂಪರೇಷೆ (ರೂಟ್‌ಮ್ಯಾಪ್) ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಆಶಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಜಯಪುರ ತಹಸೀಲ್ದಾರ್‌ ಕವಿತಾ ಸೇರಿದಂತೆ ಮುಂತಾದವರು ಇದ್ದರು.