ಲಕ್ಷ ದೀಪೋತ್ಸವದಲ್ಲಿ 1.5 ಲಕ್ಷ ಜನ ಸೇರುವ ನಿರೀಕ್ಷೆ

| Published : Nov 09 2025, 03:45 AM IST

ಸಾರಾಂಶ

ತಾಲೂಕಿನ ಐನಾಪುರ ಪಟ್ಟಣದ ಕೆರಿ ಸಿದ್ದೇಶ್ವರ ದೇವರ ಪೌಳಿ ವಾಸ್ತು ಶಾಂತಿ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಾದಿಗಳಿಗೆ ಅನ್ನ ಪ್ರಸಾದಕ್ಕಾಗಿ ಐನಾಪುರದ ಮನೆ ಮನೆಯಿಂದ 10 ಲಕ್ಷ ರೊಟ್ಟಿ ಬುತ್ತಿ ನೀಡಿದ್ದು, ಕಾರ್ಯಕ್ರಮದಲ್ಲಿ 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಕಮಿಟಿ ಅಧ್ಯಕ್ಷ ರಾಜುಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕಿನ ಐನಾಪುರ ಪಟ್ಟಣದ ಕೆರಿ ಸಿದ್ದೇಶ್ವರ ದೇವರ ಪೌಳಿ ವಾಸ್ತು ಶಾಂತಿ ಮತ್ತು ಲಕ್ಷ ದೀಪೋತ್ಸವ ಕಾರ್ಯಕ್ರಮ ಭಕ್ತಾದಿಗಳಿಗೆ ಅನ್ನ ಪ್ರಸಾದಕ್ಕಾಗಿ ಐನಾಪುರದ ಮನೆ ಮನೆಯಿಂದ 10 ಲಕ್ಷ ರೊಟ್ಟಿ ಬುತ್ತಿ ನೀಡಿದ್ದು, ಕಾರ್ಯಕ್ರಮದಲ್ಲಿ 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಕಮಿಟಿ ಅಧ್ಯಕ್ಷ ರಾಜುಗೌಡ ಪಾಟೀಲ ಹೇಳಿದರು.

ಐನಾಪೂರ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅ.9 ರಂದು ಇಡೀ ರಾಜ್ಯದಿಂದ 46 ದೇವರ ಪಲ್ಲಕ್ಕಿ ಭೇಟಿ ಕಾರ್ಯಕ್ರಮ ಇಲ್ಲಿಗೆ ನೆರವೇರಲಿದೆ. ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ರಾಜ್ಯದಲ್ಲಿಯೇ ಮೊದಲ ಬಾರಿ ಜರುಗಲಿದೆ. ಅ.10 ರಂದು ಸುತ್ತು ಪೌವಳಿ ವಾಸ್ತು ಶಾಂತಿ ಕಾರ್ಯಕ್ರಮ, ಪೂಜಾ ಹೋಮ ಬೆಳಗ್ಗೆ 6 ಗಂಟೆಯಿಂದ ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ಹಾಗೂ 6 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗುವುದು. ಅ.11 ರಂದು ನಸುಕಿನ 4 ಗಂಟೆಗೆ ಮಲಕಾರಿ ಸಿದ್ದ ದೇವರ ಮಂದರೂಪ ಆಡುವಈ ವಿಶೇಷ ಭಕ್ತಿ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ ದೇವರ ಅಗಲುವ ಭೇಟಿ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.ಸದ್ಭಕ್ತರ ನೀಡುತ್ತಿರುವ ಬೆಂಬಲ ಹಾಗೂ ಭಕ್ತಿ ಬಗ್ಗೆ ಮಾಹಿತಿ ನೀಡುವಾಗ ಐನಾಪುರ ಪಟ್ಟಣದಲ್ಲಿ ಸಿದ್ದ ಮಹಾತ್ಮೆ ಮತ್ತಷ್ಟು ಎದ್ದು ಕಾಣುತ್ತಿದೆ. ಇಲ್ಲಿಯ ಭಕ್ತರು ವಾದ್ಯದ ಮೂಲಕ ಬುತ್ತಿಗಳನ್ನು ಶೇಂಗಾ ಚಟ್ನಿ, ಶೇಂಗಾ ಹೋಳಿಗೆ, ಹಸಿ ತರಕಾರಿಗಳು, ಬೆಲ್ಲ, ಸಕ್ಕರೆ, ಅಕ್ಕಿ, 20 ಕ್ವಿಂಟಲ್ ಶೇಂಗಾ ದಾನವಾಗಿ ನೀಡುತ್ತಿದ್ದಾರೆ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಎಲ್ಲರಿತಿಯಿಂದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.ಪಿಎಸೈ ರಾಘವೇಂದ್ರ ಖೋತ ಮಾತನಾಡಿ, ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ವ್ಯವಸ್ಥೆ ಮಾಡಬೇಕು ಹಾಗೂ ಜನ ಜಾಸ್ತಿ ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾಗಳ ಅಳವಡಿಸಬೇಕು ಎಂದು ಕಮಿಟಿಗೆ ತಿಳಿಸಿದರು.ಪಟ್ಟಣದ ಬೀರದೇವರ ಹಾಗೂ ಜ್ಯೋತಿರ್ಲಿಂಗ್‌ ಮಂದಿರದ ಪರಿಸರದಲ್ಲಿಯ ಸಾವಿರಾರು ಮಹಿಳಾ ಭಕ್ತರು ಎರಡ್ಮೂರು ದಿನಗಳಿಂದ ಲಕ್ಷಾಂತರ ರೊಟ್ಟಿ ತಯಾರಿಸಿ ವಾದ್ಯದೊಂದಿಗೆ ಮಂದಿರಕ್ಕೆ ಆಗಮಿಸಿ ದೇವಾಲಯದಲ್ಲಿ ಹಸ್ತಾಂತರಿಸಿದರು. ಸಿದ್ಧೇಶ್ವರ ಮಂದಿರದ ಟ್ರಸ್ಟ್‌ ಸದಸ್ಯರು ಭಕ್ತರು ಪಾಲ್ಗೊಂಡಿದ್ದಾರೆ. ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಅರುಣ ಗಾಣಿಗೇರ, ಸುಭಾಷ ಪಾಟೀಲ, ಪ್ರಕಾಶ ಕೋರ್ಬ, ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ದಾದಾ ಜಂತೆಣ್ಣವರ ಸೇರಿದಂತೆ ಅನೇಕರು ಇದ್ದರು.