ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಭಾರತ ಸರ್ಕಾರದ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್-ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕಿನ ಚೌಡದೇನಹಳ್ಳಿ ಈ ನೆಲ-ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ-೨೦೨೫ ರಂದು ಬೆಳಿಗ್ಗೆ ೧೦.೩೦ಕ್ಕೆ ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸಂಬಂಧ ಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ೧೧.೩೦ ಆದರೂ ಯಾವ ಕ್ರೀಡಾಪಟುಗಳು ಸಹ ಕಾರ್ಯಕ್ರಮದಲ್ಲಿ ಹಾಜರಾಗಿರಲ್ಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಇರಲಿಲ್ಲ. ಕೇವಲ ಮಾಡಿ ಇಂತಹ ಪುಕ್ಕಟೆ ಪ್ರಚಾರ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ನ್ಯಾಯಾಧೀಶರಾದ ಸುನಿಲ್ ಹೊಸಮನಿಯವರನ್ನು ಆಹ್ವಾನಿಸಲಾಗಿತ್ತು, ಉಳಿದಂತೆ ಸರ್ಕಾರಿ ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಗಳಲ್ಲಿ ಪ್ರಕಟಿಸಿ ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಅಧಿಕಾರಿಗಳೇ ನಾಪತ್ತೆ
ಆದರೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ೬ ತಾಲ್ಲೂಕುಗಳಿಂದ ಭಾಗವಹಿಸಬೇಕಾಗಿದ್ದ ನೂರಾರು ಕ್ರೀಡಾ ಪಟುಗಳ ನಿರೀಕ್ಷೆಯಲ್ಲಿ ಕಾರ್ಯಕ್ರಮಕ್ಕೆ ಹೋದ ಮಾಧ್ಯಮದವರಿಗೆ ಬಿಗ್ ಶಾಕ್ ಕಾದಿತ್ತು, ಬೆಳಗ್ಗೆ ೧೦.೩೦ಕ್ಕೆ ನಿಗಧಿಯಾದ ಕಾರ್ಯಕ್ರಮಕ್ಕೆ ೧೧.೩೦ ಆದರೂ ಓರ್ವ ಸರ್ಕಾರಿ ಅಧಿಕಾರಿಗಳು ಇಲ್ಲ, ಓರ್ವ ಕ್ರೀಡಾ ಪಟುಗಳು ಇರಲಿಲ್ಲ. ಕಾರ್ಯಕ್ರಮದ ಪೆಂಡಲ್ ಬ್ಯಾನರ್, ಆಸನದ ವ್ಯವಸ್ಥೆ, ಉದ್ಘಾಟನೆಗೆ ಜ್ಯೋತಿ ಎಲ್ಲವೂ ಸಿದ್ದವಾಗಿತ್ತು.ದೈಹಿಕ ಶಿಕ್ಷಕರು ಭಾಗಿಈ ಕಾರ್ಯಕ್ರಮದ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ವೆಂಕಟಚಲಪತಿ ಹೊರತುಪಡಿಸಿ ಯಾವ ಅಧಿಕಾರಿಗಳು ಇರಲಿಲ್ಲ ೩-೪ ಮಂದಿ ದೈಹಿಕ ಶಿಕ್ಷಕರು ಹಾಜರಾಗಿದ್ದು ಹೊರತುಪಡಿಸಿ ಇಡೀ ಕ್ರೀಡಾಂಗಣದಲ್ಲಿ ಯಾರೂ ಕಂಡು ಬರಲಿಲ್ಲ. ನ್ಯಾಯಾಧೀಶರಾದ ಸುನಿಲ್ ಹೊಸಮನಿ ಅವರು ೨-೩ ಭಾರಿ ವೆಂಕಟಚಲಪತಿ ಅವರ ಮೊಬೈಲ್‌ಗೆ ಕರೆ ಮಾಡಿ ಕ್ರೀಡಾಪಟುಗಳು, ಅಧಿಕಾರಿಗಳು ಬಂದಿಲ್ಲವೇಕೆ ಎಂದು ಪ್ರಶ್ನಿಸಿ ಸುಸ್ತು ಆದರೂ ಮಾಧ್ಯಮದವರು ಬೇಸತ್ತು ವಾಪಸ್ಸಾದರು.