ಬೆಂಗಳೂರು : ಬಯೋಕಾನ್, ಸಿಪ್ಲಾ, ಮೈಕ್ರೋಲ್ಯಾಬ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಪ್ರಮುಖ ಕೈಗಾರಿಕೆಗಳಿರುವ 7 ಕಿ.ಮೀ ಉದ್ದದ ಬೊಮ್ಮಸಂದ್ರ–ಜಿಗಣಿ ಲಿಂಕ್ ರಸ್ತೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿಯಾಗಿವೆ.

ಜಾಲತಾಣ ಎಕ್ಸ್‌ನಲ್ಲಿ ತೀವ್ರ ಅಸಮಾಧಾನ

ಹದಗೆಟ್ಟ ರಸ್ತೆ ಕುರಿತು ಉದ್ಯಮಿ ಕಿರಣ್ ಮಜುಮ್ದಾರ್ ಶಾ ಅವರು ಜಾಲತಾಣ ಎಕ್ಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

7 ಕಿ.ಮೀ ಕೈಗಾರಿಕಾ ಕಾರಿಡಾರ್‌ನಲ್ಲಿ ಬರೀ ಗುಂಡಿ

7 ಕಿ.ಮೀ ಕೈಗಾರಿಕಾ ಕಾರಿಡಾರ್‌ನಲ್ಲಿ ಬರೀ ಗುಂಡಿಗಳಿದ್ದು, ಫುಟ್‌ಪಾತ್ ಇಲ್ಲ. ಕಳಪೆ ಮೂಲಸೌಕರ್ಯಗಳಿಂದ ಬೇಸತ್ತಿರುವ 1 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳ ಮುಖ್ಯಸ್ಥರು, ನೌಕರರು ರಸ್ತೆ ಸರಿಪಡಿಸುವಂತೆ ಗೋಗರೆಯುತ್ತಿದ್ದಾರೆ.


ಅತ್ಯಂತ ಮುಖ್ಯವಾದ ಲಿಂಕ್ ರಸ್ತೆಯನ್ನು ಸುಸ್ಥಿತಿಯಲ್ಲಿಡಬೇಕಾಗಿತ್ತು. ಆದರೆ, ಅನೇಕ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ರಸ್ತೆ ದುಸ್ಥಿತಿಯಲ್ಲಿದೆ. ಈ ಕುರಿತು ಕೂಡಲೇ ಗಮನ ಹರಿಸಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಲ್ಲಿ ಕಿರಣ್ ಶಾ ಮನವಿ ಮಾಡಿದ್ದಾರೆ.