ಸಾರಾಂಶ
ವಿವಿಧ ಮತಗಟ್ಟೆ ಕೇಂದ್ರಗಳಿಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಪ್ರಕಾಶ್ ಮತ್ತು ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರಾ ಭೇಟಿ ನೀಡಿ ಪರಿಶೀಲಿಸಿದರು.
ಕವಿತಾಳ: ಪಟ್ಟಣದ ವಿವಿಧ ಮತಗಟ್ಟೆ ಕೇಂದ್ರಗಳಿಗೆ ಸಹಾಯಕ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತ ಪ್ರಕಾಶ್ ಮತ್ತು ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೆರಾ ಭೇಟಿ ನೀಡಿ ಪರಿಶೀಲಿಸಿದರು.
ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶದಿಂದ ವಿಶೇಷವಾಗಿ ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆ ಸಂಖ್ಯೆ 77ನ್ನು ಸಖಿ ಮತಗಟ್ಟೆ ಎಂದು ಆಯ್ಕೆ ಮಾಡಿಕೊಳ್ಳಲಾಗಿದೆ.ಸಖಿ ಮತಗಟ್ಟೆ ಅಥವಾ ಪಿಂಕ್ ಭೂತ್ ಎಂದು ಗುರುತಿಸಿದ್ದು ಇದಕ್ಕೆ ಪಿಂಕ್ ಬಣ್ಣ ಹಚ್ಚಿ ಹೊರಗಡೆ ಆಕರ್ಷಣೆ ಮಾಡಲು ಬ್ಯಾನರ್ ಕಟೌಟ್ ಹಾಕಲು ಸೂಚಿಸಿದರು ಮತ್ತು ಸಖಿ ಮತಗಟ್ಟೆಗೆ ಬರುವ ಎಲ್ಲಾ ಚುನಾವಣೆ ಸಿಬ್ಬಂದಿ ಮಹಿಳೆಯರೇ ಇದ್ದು ಒಂದೇ ಬಣ್ಣದ ವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುವುದು ವಿಶೇಷ ವಾಗಿರುತ್ತದೆ ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ, ಮುಖ್ಯಗುರು ಸಂಗಪ್ಪ, ಇಂಜಿನಿಯರ್ ನರಸಮ್ಮ ಮತ್ತುಗ್ರಾಮ ಆಡಳಿತಾಧಿಕಾರಿ ಸದಾಕ್ ಅಲೀ ಮತ್ತು ಕಂದಾಯ ಇಲಾಖೆ ಹಾಗೂ ಪಪಂ ಸಿಬ್ಬಂದಿ ಉಪಸ್ಥಿತರಿದ್ದರು.