ಆಕಸ್ಮಿಕ ಬೆಂಕಿ ತಗುಲಿ ಗೂಡಂಗಡಿ ಬೆಂಕಿಗಾಹುತಿ

| Published : Nov 18 2025, 02:00 AM IST

ಸಾರಾಂಶ

ಆಕಸ್ಮಿಕವಾಗಿ ಬೆಂಕಿ ಬಿದ್ದು ಗೂಡಂಗಡಿ ಬೆಂಕಿಗಾಹುತಿಯಾದ ಘಟನೆ ಒಂಟಿಯಂಗಡಿಯಲ್ಲಿ ನಡೆದಿದೆ.

ಸಿದ್ದಾಪುರ: ಆಕಸ್ಮಿಕವಾಗಿ ಬೆಂಕಿ ಬಿದ್ದು ಗೂಡಂಗಡಿ ಬೆಂಕಿಗಾಹುತಿಯಾದ ಘಟನೆ ನೆಲ್ಯಹುದಿಕೇರಿ ಸಮೀಪದ ಒಂಟಿಯಂಗಡಿಯಲ್ಲಿ ನಡೆದಿದೆ.

ಒಂಟಿಯಂಗಡಿಯ ರಸ್ತೆ ಬದಿಯಲ್ಲಿ ಜಬ್ಬಾರ್ ಎಂಬುವವರು ಗೂಡ್ಸ್ ಆಟೋವನ್ನು ಗೂಡಂಗಡಿ ರೂಪದಲ್ಲಿ ಮಾಡಿ ಟೀ ವ್ಯಾಪಾರ ನಡೆಸುತ್ತಿದ್ದರು. ಭಾನುವಾರ ತಡರಾತ್ರಿ ಗೂಡಂಗಡಿ ಹೊತ್ತಿ ಉರಿದಿದ್ದು ಗೂಡ್ಸ್ ವಾಹನ ಸೇರಿದಂತೆ ಪಾತ್ರೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ರಾತ್ರಿ ಅಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿ ಅವಘಡ ಸಂಭವಿಸಲು ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ.

-------------------------------------------

ಇಂದು ಕನ್ನಡಪ್ರಭದಿಂದ ಕುಶಾಲನಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಕುಶಾಲನಗರ : ಕನ್ನಡಪ್ರಭ, ಕುಶಾಲನಗರದ ವಿವೇಕಾನಂದ ಎಜುಕೇಶನಲ್ ಟ್ರಸ್ಟ್, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕೊಡಗು ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕುಶಾಲನಗರ ತಾಲೂಕು ಘಟಕದ ಸಹಯೋಗದಲ್ಲಿ ಕುಶಾಲನಗರದ ವಿವೇಕಾನಂದ ಪಿ.ಯು. ಕಾಲೇಜು ಸಭಾಂಗಣದಲ್ಲಿ ನ. 18 ಮಂಗಳವಾರ ಬೆಳಗ್ಗೆ 10 ಗಂಟೆಗೆ ಕುಶಾಲನಗರ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಕರ್ನಾಟಕದ ಅರಣ್ಯ/ ವನ್ಯಜೀವಿ ವಿಷಯದ ಬಗ್ಗೆ ನಡೆಯಲಿದೆ.ಮಧ್ಯಾಹ್ನ 12.30ಕ್ಕೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದ್ದು, ಕುಶಾಲನಗರ ವಿವೇಕಾನಂದ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಎನ್ ಎನ್ ಶಂಭುಲಿಂಗಪ್ಪ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಕುಶಾಲನಗರ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿ ರಕ್ಷಿತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕುಶಾಲನಗರ ತಾಲೂಕು ಘಟದ ಅಧ್ಯಕ್ಷರಾದ ಚೈತನ್ಯ ಸಿ ಮೋಹನ್, ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ ಪಾಲ್ಗೊಳ್ಳಲಿದ್ದಾರೆ.