ವೃತ್ತಿಯಲ್ಲಿ ಸ್ವಾವಲಂಬನೆ ಸಾಧಿಸಿ, ಆರ್ಥಿಕ ಅಭಿವೃದ್ಧಿ ಹೊಂದಿ

| Published : Sep 21 2025, 02:02 AM IST

ವೃತ್ತಿಯಲ್ಲಿ ಸ್ವಾವಲಂಬನೆ ಸಾಧಿಸಿ, ಆರ್ಥಿಕ ಅಭಿವೃದ್ಧಿ ಹೊಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆಲ್ಲ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಮನಸ್ಸಿದ್ದರೂ ವ್ಯವಸ್ಥೆಗಳಿರಲಿಲ್ಲ

ಮುಂಡಗೋಡ: ಹಿಂದೆಲ್ಲ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಮನಸ್ಸಿದ್ದರೂ ವ್ಯವಸ್ಥೆಗಳಿರಲಿಲ್ಲ, ಆದರೆ ಈಗ ವಿವಿಧ ಬ್ಯಾಂಕ್‌ , ಹಣಕಾಸಿನ ವ್ಯವಸ್ಥೆಗಳಿವೆ. ಅವುಗಳ ಸಹಾಯ ಪಡೆದುಕೊಂಡು ತರಬೇತಿಯ ಪ್ರಯೋಜನ ಪಡೆದುಕೊಂಡು ವೃತ್ತಿಯಲ್ಲಿ ಸ್ವಾವಲಂಬನೆ ಸಾಧಿಸಿ ಆರ್ಥಿಕ ಅಭಿವೃದ್ಧಿ ಹೊಂದಿ ಎಂದು ಬೆಂಗಳೂರು ಆಶೀರ್ವಾದ ಸಂಸ್ಥೆ ನಿರ್ದೇಶಕ ಅರುಣ್ ಲೂಯಿಸ್ ಹೇಳಿದರು.

ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಸಿಡಾಕ್, ಕಾರವಾರ (ಉತ್ತರ ಕನ್ನಡ) ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗಿ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರ ಕಾರವಾರ (ಉತ್ತರ ಕನ್ನಡ) ಲೊಯೋಲ ವಿಕಾಸ ಕೇಂದ್ರ ಮುಂಡಗೋಡ, ಸಿಸಿಎಫ್ ಲೊಯೋಲ ಜನಸ್ಫೂರ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್, ರಾಷ್ಟೀಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಮಿಶನ್ ಮುಂಡಗೋಡ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಲೊಯೋಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರವಾರ ಸಿಡಾಕ್ ತರಬೇತುದಾರ ಶಿವರಾಜಕುಮಾರ ಹೆಳವಿ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಮಹಿಳೆಗೆ ಉದ್ಯಮಶೀಲತೆಯಲ್ಲಿ ನೀಡುವ ಪ್ರೋತ್ಸಾಹ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು. ರಾಷ್ಟ್ರೀಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಮಿಶನ್‌ ತಾಲೂಕು ವ್ಯವಸ್ಥಾಪಕ ಸುಧೀರ ಕರಿಯಣ್ಣನವರ ಮಾಹಿತಿ ನೀಡಿದರು. ಜಗದೀಶ ಎಲಿಗಾರ ಉದ್ಯಮ ಶೀಲತಾ ಸಾಧನಾ ಪ್ರೇರಣಾ ತರಬೇತಿ ನೀಡಿದರು. ಲೊಯೋಲ ವಿಕಾಸ ಕೇಂದ್ರ ನಿರ್ದೇಶಕ ಅನಿಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಂಜುನಾಥ ಕುಲಕರ್ಣಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಇರುವ ಯೋಜನೆಗಳು ಮತ್ತು ಹಣಕಾಸು ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಮುರಳೀಧರ ದೇಶಪಾಂಡೆ, ಸರೋಜಾ ಚವ್ಹಾಣ, ಗೋಪಿಕಾ ಮುಂತಾದವರು ಉಪಸ್ಥಿತರಿದ್ದರು.

ಮಲ್ಲಮ್ಮ ನೀರಲಗಿ ಕಾರ್ಯಕ್ರಮ ನಿರೂಪಿಸಿದರು. ಮಂಗಳಾ ಮೋರೆ ಸ್ವಾಗತಿಸಿದರು. ನಕ್ಲೂಬಾಯಿ ಕೊಕರೆ ವಂದಿಸಿದರು.

ಮುಂಡಗೋಡ ಪಟ್ಟಣದ ಲೊಯೋಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರವನ್ನು ಬೆಂಗಳೂರು ಆಶೀರ್ವಾದ ಸಂಸ್ಥೆ ನಿರ್ದೇಶಕ ಅರುಣ್ ಲೂಯಿಸ್ ಉದ್ಘಾಟಿಸಿದರು.