ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದು ನಿಲ್ಲಲಿ: ಭೀಮನಾಯ್ಕ

| Published : Sep 21 2025, 02:02 AM IST

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದು ನಿಲ್ಲಲಿ: ಭೀಮನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೇ ಆಗಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ಮಾಡುವುದು ಸರಿಯಲ್ಲ, ಧರ್ಮ ಜಾಗೃತಿ ಮೂಡಿಸುವವರ ಮೇಲೆ ವಿನಾಕಾರಣ ಆರೋಪ ಮಾಡುವುದನ್ನ ಪಕ್ಷಾತೀತವಾಗಿ ವಿರೋಧಿಸುತ್ತೇನೆ.

ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಯಾರೇ ಆಗಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ಮಾಡುವುದು ಸರಿಯಲ್ಲ, ಧರ್ಮ ಜಾಗೃತಿ ಮೂಡಿಸುವವರ ಮೇಲೆ ವಿನಾಕಾರಣ ಆರೋಪ ಮಾಡುವುದನ್ನ ಪಕ್ಷಾತೀತವಾಗಿ ವಿರೋಧಿಸುತ್ತೇನೆ ಎಂದು ಮಾಜಿ ಶಾಸಕ ಎಸ್.ಭೀಮನಾಯ್ಕ ಹೇಳಿದರು.ತಾಲೂಕಿನ ಸುಕ್ಷೇತ್ರ ನಂದಿಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮದ್ಯವ್ಯಸನಿಗಳು ಸುಖಿ ಸಂಸಾರಿಗಳು ಆಗಲಿ ಎಂಬುವ ಉದ್ದೇಶದಿಂದ ಮದ್ಯವನ್ನು ಬಿಡಿಸಲು ಶಿಬಿರಗಳ ಮೂಲಕ ರಾಜ್ಯಾದ್ಯಂತ ಯಶಸ್ವಿಯಾಗಿದ್ದಾರೆ. ಈ ಶಿಬಿರಗಳ ಮೂಲಕ ಈಗಾಗಲೇ ಲಕ್ಷಕ್ಕೂ ಹೆಚ್ಚು ವ್ಯಸನಿಗಳು ಮದ್ಯಮುಕ್ತರಾಗಿ ಕುಟುಂಬಗಳೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಧರ್ಮಸ್ಥಳ ಸಂಘ ಗ್ರಾಮೀಣ ಮಹಿಳೆಯರ ಸಬಲೀಕರಣ, ಕಡುಬಡವರಿಗೆ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುತ್ತಿರುವುದು ಸಮಾಜಮುಖಿ ಕೆಲಸವಾಗಿದೆ. ಹೆಗ್ಗಡೆಯವರ ವಿರುದ್ಧ ಷಡ್ಯಂತ್ರ ಹೀಗೆ ಮುಂದುವರೆದರೆ ಹಗರಿಬೊಮ್ಮನಹಳ್ಳಿಯಿಂದ ಧರ್ಮಸ್ಥಳಕ್ಕೆ ಶೀಘ್ರದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗುವುದು ಎಂದರು.ಮಾಜಿ ಶಾಸಕ ಭೀಮನಾಯ್ಕ ಶಿಬಿರದಲ್ಲಿ ಪಾಲ್ಗೊಂಡ ೬೯ ಮದ್ಯವ್ಯಸನಿಗಳಿಗೆ ಪ್ರಮಾಣ ಮಾಡಿಸಿದರು.

ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಶೇಖರ್ ಮಾತನಾಡಿ, ಶಿಬಿರಾರ್ಥಿಗಳು ಹೊಸ ಜೀವನ ಆರಂಭಿಸಿದರೆ ಶಿಬಿರ ಸಾರ್ಥಕತೆ ಪಡೆಯುತ್ತದೆ ಎಂದರು.ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ, ಗದ್ದಿಕೇರಿ ಚರಂತೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬದಾಮಿ, ಅಮ್ಮ ಫೌಂಡೇಷನ್ ಅಧ್ಯಕ್ಷೆ ಸಾಹಿರಾಬಾನು, ಶಿಬಿರದ ಅಧ್ಯಕ್ಷ ಶಿವರೆಡ್ಡಿ ಬಸವರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮರಿರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಪ್ರಗತಿಪರ ರೈತ ಎಸ್.ಎಸ್. ಎತ್ತಿನಮನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್‌ಶೆಟ್ಟಿ, ತಾಲೂಕು ಯೋಜನಾಧಿಕಾರಿಗಳಾದ ಚಂದ್ರಶೇಖರ್, ವಾಣಿ, ನಾಗೇಶ್ ವೈ.ಎ., ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ಜಿಲ್ಲಾ ಪ್ರತಿನಿಧಿ ಹೆಗ್ಡಾಳ್ ಪರುಶುರಾಮ, ಗುಂಡ್ರು ಹನುಮಂತಪ್ಪ, ಆನಂದೇವನಹಳ್ಳಿ ಪ್ರಭಾಕರ, ಮೇಘರಾಜ ಒಂಟಿ, ಬಾಲಕೃಷ್ಣಬಾಬು, ಪುರಸಭೆ ಸದಸ್ಯರಾದ ಅಜೀಜುಲ್ಲಾ, ತ್ಯಾವಣಗಿ ಕೊಟ್ರೇಶ, ಬಾಳಪ್ಪ, ಜನಜಾಗೃತಿಯ ಹೊನ್ನೂರಪ್ಪ, ಶಿಲ್ಪಕಲಾ ಇತರರಿದ್ದರು. ಮೇಲ್ವಿಚಾರಕ ಮಂಜುನಾಥ, ನಾಗೇಂದ್ರ, ಯಶೋಧಾ ಕಾರ್ಯಕ್ರಮ ನಿರ್ವಹಿಸಿದರು.