ರಾಷ್ಟ್ರೀಯ ಡಾಡ್ಜ್‌ ಬಾಲ್‌ ಪಂದ್ಯಾವಳಿಯಲ್ಲಿ ಸಾಧನೆ

| Published : Jan 13 2024, 01:38 AM IST

ಸಾರಾಂಶ

ಮಹಾಲಿಂಗಪುರ: ಇತ್ತಿಚೆಗೆ ಹರ್ಯಾಣದಲ್ಲಿ ನಡೆದ ಭಾರತೀಯ ಫೆಡರೇಷನ್ ಮಾನ್ಯತೆ ಪಡೆದ ರಾಷ್ಟ್ರೀಯ ಡಾಡ್ಜ್‌ಬಾಲ್ ಅಂತಾರಾಜ್ಯ ಪಂದ್ಯಾವಳಿಯಲ್ಲಿ ಕರ್ನಾಟಕ ಸಬ್ ಜೂನಿಯರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಈ ತಂಡದ ಸದಸ್ಯೆಯಾಗಿ ಸ್ಥಳೀಯ ಖ್ಯಾತ ವೈದ್ಯ ಶ್ರೀನಿವಾಸ ಕನಕರೆಡ್ಡಿ ಅವರ ಪುತ್ರಿ ಕುಮಾರಿ ರಾಜೇಶ್ವರಿ ಕನಕರೆಡ್ಡಿ ಕೂಡ ಭಾಗವಹಿಸಿದ್ದು, ಮಹಾಲಿಂಗಪುರದ ಖ್ಯಾತಿ ಹೆಚ್ಚಿಸಿದ್ದಾಳೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಇತ್ತಿಚೆಗೆ ಹರ್ಯಾಣದಲ್ಲಿ ನಡೆದ ಭಾರತೀಯ ಫೆಡರೇಷನ್ ಮಾನ್ಯತೆ ಪಡೆದ ರಾಷ್ಟ್ರೀಯ ಡಾಡ್ಜ್‌ಬಾಲ್ ಅಂತಾರಾಜ್ಯ ಪಂದ್ಯಾವಳಿಯಲ್ಲಿ ಕರ್ನಾಟಕ ಸಬ್ ಜೂನಿಯರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೆ, ಈ ತಂಡದ ಸದಸ್ಯೆಯಾಗಿ ಸ್ಥಳೀಯ ಖ್ಯಾತ ವೈದ್ಯ ಶ್ರೀನಿವಾಸ ಕನಕರೆಡ್ಡಿ ಅವರ ಪುತ್ರಿ ಕುಮಾರಿ ರಾಜೇಶ್ವರಿ ಕನಕರೆಡ್ಡಿ ಕೂಡ ಭಾಗವಹಿಸಿದ್ದು, ಮಹಾಲಿಂಗಪುರದ ಖ್ಯಾತಿ ಹೆಚ್ಚಿಸಿದ್ದಾಳೆ.

ಮಹಾರಾಷ್ಟ್ರ, ಬಿಹಾರ, ಗುಜರಾತ್, ಪಾಂಡಿಚೇರಿ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹೀಗೆ ದೇಶದ ಒಟ್ಟು 21 ರಾಜ್ಯಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಕರ್ನಾಟಕವು ಪಂಜಾಬ್ ತಂಡವನ್ನು ಮಣಿಸಿ, 2024ರ ಡಾಡ್ಜ್‌ಬಾಲ್ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಪಂದ್ಯಾವಳಿ ಉದ್ದಕ್ಕೂ ರಾಜೇಶ್ವರಿ ಕನಕರೆಡ್ಡಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾಳೆ.

ಸನ್ಮಾನ: ಡಾಡ್ಜ್‌ಬಾಲ್ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕುಮಾರಿ ರಾಜೇಶ್ವರಿಯನ್ನು ಮಹಾಲಿಂಗಪುರದ ಗಣ್ಯರು ಹಾಗೂ ಡಾಡ್ಜ್‌ಬಾಲ್ ರಾಷ್ಟ್ರೀಯ ತಂಡದ ಉಪ ನಾಯಕಿಯೂ ಆಗಿರುವ ಪೂರ್ವ ಅಂಗಡಿ ಅವರ ತಂದೆ ಅಶೋಕ ಅಂಗಡಿ ಮತ್ತು ಪರಿವಾರದ ಸದಸ್ಯರು ಆಟಗಾರ್ತಿಯನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವೀನಾ ಶ್ರೀನಿವಾಸ್‌ ಕನಕರೆಡ್ಡಿ, ಸದಾಶಿವರೆಡ್ಡಿ ಗಿರೆಡ್ಡಿ, ಲಕ್ಷ್ಮಿ ಅಶೋಕ ಅಂಗಡಿ ಸೇರಿದಂತೆ ಇತರರು ಇದ್ದರು.