ಕನ್ನಡಪ್ರಭ ವಾರ್ತೆ ಅಥಣಿ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆತರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಕಟಗೇರಿಯ ಸರಕಾರಿ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಬಿರಾದಾರ್ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಬೀತು ಮಾಡಿದ್ದಾಳೆ ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಹೇಳಿದರು.ಇಲ್ಲಿಯ ಎಸ್ಎಸ್ಎಮ್ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಚಂಡಕಿ ಜನಕಲ್ಯಾಣ ಶಿಕ್ಷಣ ಸಂಘ ಹಾಗೂ ಮಹೇಶ್ ಅಕಾಡೆಮಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಟಾಪರ್ ಪ್ರಾರ್ಥನಾ ಬಿರಾದಾರ ಪಾಟೀಲ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಧನೆಗೆ ಬಡತನ, ಅಂಗವಿಕಲತೆ ಅಡ್ಡಿಯಾಗದು, ನಮ್ಮಲ್ಲಿ ಸಾಧಿಸುವ ಛಲ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನ ಇದ್ದಾಗ ಸಾಧನೆ ಸುಲಭವಾಗುತ್ತದೆ. ಎಸ್ಎಸ್ಎಲ್ಸಿಯಲ್ಲಿ 7 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ ಅದರಲ್ಲಿ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾರ್ಥನಾ ಬಿರಾದಾರ ಪಾಟೀಲ ಮಾತನಾಡಿ, ಆತ್ಮವಿಶ್ವಾಸದಿಂದ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಿವಿದ್ದರೆ ಸಾಧನೆ ಸುಲಭ. ನಾನೇನು ಹಗಲು ರಾತ್ರಿ ನಿದ್ದೆಗೆಟ್ಟು ಓದಲಿಲ್ಲ, ಶಿಕ್ಷಕರು ಪಾಠ ಮಾಡುವಾಗ ಏಕಾಗ್ರತೆಯಿಂದ ಆಲಿಸುತಿದ್ದೆ, ಮನೆಗೆ ಬಂದ ನಂತರ ಅದನ್ನು ಮತ್ತೊಮ್ಮೆ ಓದಿ ಬರೆದುಕೊಳ್ಳುತ್ತಿದ್ದೆ, ವಾರಕ್ಕೊಮ್ಮೆ ಓದಿದ ವಿಷಯಗಳನ್ನು ಮತ್ತೊಮ್ಮೆ ಓದಿಕೊಳ್ಳುತ್ತಿದ್ದೆ. ನನಗೆ ತಿಳಿಯಲಾರದ ಸಮಸ್ಯೆಗಳ ಬಗ್ಗೆ ವಿಷಯವಾರು ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದೆ. ಕಳೆದ ವರ್ಷ ಚಂಡಿಕೆ ಜಣಕಲ್ಯಾಣ ಶಿಕ್ಷಣ ಸಂಸ್ಥೆಯ ಬೇಸಿಗೆಯ ಶಿಬಿರದಲ್ಲಿ ಭಾಗವಹಿಸಿದಾಗ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾನು ರಾಜ್ಯಮಟ್ಟದ ಟಾಪರ್ ಆಗಬೇಕು ಎಂದು ಕನಸು ಕಂಡಿದ್ದೆ. ಅದು ಇಂದು ನನಸಾಗಿರುವುದು ನನಗೆ ಸಂತಸ ತಂದಿದೆ. ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ, ಪ್ರೋತ್ಸಾಹ ನೀಡಿದ ಪಾಲಕರಿಗೆ, ನನ್ನ ಸಾಧನೆಯನ್ನ ಕಂಡು ಅಭಿನಂದನಾ ಪೂರ್ವಕವಾಗಿ ಸನ್ಮಾನಿಸುತ್ತಿರುವ ಈ ಸಂಸ್ಥೆಯ ಎಲ್ಲಾ ಶಿಕ್ಷಕ ಬಳಗದವರಿಗೆ, ವಿವಿಧ ಸಂಘ ಸಂಸ್ಥೆಯವರಿಗೆ ಅಭಿನಂದಿಸುಸುವುದಾಗಿ ತಿಳಿಸಿದರು.

ಪ್ರಾಧ್ಯಾಪಕ ಡಾ.ವೈ.ವೈ.ಕೊಕ್ಕನವರ ಮಾತನಾಡಿ, ಗ್ರಾಮೀಣ ಬಡ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸದುದ್ದೇಶದಿಂದ ಮಹೇಶ್ ಚಂಡಕಿ ಜನಕಲ್ಯಾಣ ಶಿಕ್ಷಣ ಸಂಘ ಹಾಗೂ ಅಕಾಡೆಮಿಯನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಪ್ರಾಚಾರ್ಯ ಶಿವಾನಂದ ಮಗದುಮ್ಮ, ಪ್ರಾಧ್ಯಾಪಕ ಶಂಕರ ಕಮತಗಿ, ಮುಖ್ಯೋಪಾಧ್ಯಾಯ ತುಕಾರಾಮ ಬಾಗೇನ್ನವರ, ಕನ್ನಡಪರ ಹೋರಾಟಗಾರ ಶಬ್ಬೀರ್ ಸಾತಬಚ್ಚಿ, ಕಾನಿಪ ಸಂಘದ ಅಧ್ಯಕ್ಷ ರಾಕೇಶ್ ಮೈಗೂರ, ಶಿಕ್ಷಣ ಪ್ರೇಮಿ ವಿಠ್ಠಲ ಚಂಡಕಿ, ಶಿವಾನಂದ ಪಾಟೀಲ, ನಾಗಪ್ಪ ಬಿರಾದರ ಪಾಟೀಲ, ಅಮಿತ ಪುಕಾಳೆ, ರಮೇಶ್ ಇಂಗಳೆ, ಕೆಂಚಪ್ಪ ಚಂಡಕಿ, ಶಶಿಧರ ಬರಲಿ ಸೇರಿ ಹಲವರು ಇದ್ದರು.