ಕನ್ನಡಪ್ರಭ ವಾರ್ತೆ, ಕಡೂರು
ಜಿಲ್ಲಾದ್ಯಂತ ಆರಂಭಗೊಳ್ಳುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಿಂದ ಅರ್ಹ ಮತದಾರರು ಮತಪಟ್ಟಿಯಿಂದ ದೂರ ಉಳಿಯದಂತೆ ಬಿಎಲ್‌ಒಗಳ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭನ್ವರ್‌ಸಿಂಗ್ ಮೀನಾ ಸೂಚನೆ ನೀಡಿದರು.ಶುಕ್ರವಾರ ಪಟ್ಟಣದ ತಾಪಂನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ನಡೆದ ತರಬೇತಿ ಕಾರ್ಯಾಗಾರ ದಲ್ಲಿ ಮಾತನಾಡಿ ಮತದಾರರ ಪಟ್ಟಿಯಲ್ಲಿ ಅರ್ಹ ನಾಗರಿಕರು ಕೈ ಬಿಟ್ಟು ಹೋಗಬಾರದು. ಅನರ್ಹರು ಸೇರ್ಪಡೆ ಯಾಗ ದಂತೆ ಚುನಾವಣಾ ಆಯೋಗ ನೀಡಿದ ಮಾನದಂಡಗಳಂತೆ ಅಧಿಕಾರಿಗಳು ಕ್ರಮ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಜೂ. 30 ರಿಂದ ಜುಲೈ 29 ರವರೆಗೆ ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಲಿದ್ದು ಜೊತೆಯಲ್ಲಿ ಬೂತ್ ಮಟ್ಟದ ಅಧಿಕಾರಿ ಗಳು ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮಾಹಿತಿ ಪಡೆದು ಮ್ಯಾಪಿಂಗ್ ಜೋಡಣೆಗೆ ಕ್ರಮ ವಹಿಸಬೇಕು. ಈಗಾಗಲೇ ಪ್ರಗತಿಯಲ್ಲಿ ಕುಂಠಿತವಾಗಿರುವ ತಾಲೂಕಿನ ಕಡೂರು, ಬೀರೂರು ಮತಗಟ್ಟೆಗಳ ವ್ಯಾಪ್ತಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ 2-3 ದಿನಗಳೊಳಗೆ ಗುರಿ ತಲುಪಬೇಕು. ಇದಕ್ಕೆ ತಹಸೀಲ್ದಾರ್ ಹೆಚ್ಚಿನ ನಿಗಾ ವಹಿಸು ವಂತೆ ನಿರ್ದೇಶಿಸಿದರು.ಕಡೂರು ತಾಲೂಕು ಕಚೇರಿಯಲ್ಲಿನ ಅಬಿಲೇಖಾಲಯದ ಕೊಠಡಿಗೆ ತೆರಳಿ ಡಿಜಿಟಲೀಕರಣ ಕಾರ್ಯ ಪ್ರಗತಿಯ ಪರಿಶೀಲಿಸಿದರು. ಈ ನಡುವೆ ಕಡೂರು, ಸಖರಾಯಪಟ್ಟಣ, ಬೀರೂರು ಹೋಬಳಿಯಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಮತಗಟ್ಟೆ ಗಳಿಗೂ ಖುದ್ದು ಭೇಟಿ ನೀಡಿದ ಜಿಲ್ಲಾಧಿಕಾರಿ ಮ್ಯಾಪಿಂಗ್ ಪರಿಶೀಲಿಸಿ ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್, ತಹಸೀಲ್ದಾರ್ ಸಿ.ಎಸ್.ಪೂರ್ಣೀಮಾ, ಬಿಸಿಎಂ ಅಧಿಕಾರಿ ದೇವರಾಜ್, ಕಡೂರು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಬಿಎಲ್‌ಒ ಅಧಿಕಾರಿಗಳು ಇದ್ದರು. 5ಕೆಕೆಡಿಯು2. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಎಸ್‌ಐಆರ್ ಪ್ರಗತಿಯಲ್ಲಿ ಕುಂಠಿತವಾದ ಮತಗಟ್ಟೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಭೇಟಿ ನೀಡಿ ಮ್ಯಾಪಿಂಗ್ ಪರಿಶೀಲಿಸಿದರು. ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ ಹಾಗೂ ಬಿಎಲ್‌ಒ ಅಧಿಕಾರಿಗಳು ಇದ್ದರು..