ವಾಲ್ಮೀಕಿ ಕೃತಿ ಆದರ್ಶ ಅಳವಡಿಸಿಕೊಳ್ಳಿ

| Published : Oct 18 2024, 12:11 AM IST

ಸಾರಾಂಶ

ಚಾಮರಾಜನಗರ ಸಾರಿಗೆ ಡಿಪೋನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.

ಸಾರಿಗೆ ಡಿಪೋನಲ್ಲಿ ವಾಲ್ಮೀಕಿ ಜಯಂತಿ ಆಚರಣೆಚಾಮರಾಜನಗರ: ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶವಾಗಿ ಬದುಕುವ ರೀತಿಯನ್ನು ಎಳೆಎಳೆಯಾಗಿ ವಿವರಿಸಿರುವ ಮಹಾನ್ ಆದಿಕವಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣ, ಸಂವಿಧಾನ ಆಶಯಗಳನ್ನು ಅಂದಿನ ರಾಮಾಯಣ ಗ್ರಂಥದಲ್ಲೂ ಕಾಣಬಹುದು. ಅಂತಹ ರಾಮಾಯಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ ಕುಮಾರ್ ಹೇಳಿದರು.

ನಗರದ ಸಾರಿಗೆ ಡಿಪೋನಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿಯ ಹುಟ್ಟಿದ ದಿನವನ್ನು ರಾಜ್ಯಾದ್ಯಂತ ಆಚರಿಸುತ್ತಿರುವುದು, ಕವಿಗೆ ಸಂದ ಗೌರವವೆನ್ನಬಹುದು. 24,000 ಸಂಸ್ಕೃತ ಶ್ಲೋಕಗಳಿರುವ ಒಂದು ಬೃಹತ್ ಗ್ರಂಥವನ್ನು ಯಾವುದೇ ಹಿಂದಿನ ಮಾದರಿಯ ಆಸರೆಯಿಲ್ಲದೆ ತಾನೇ ಸೃಷ್ಟಿಸಿದ ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು. ಶಕ್ತಿಯೋಜನೆ ಕಟ್ಟಕಡೆಯ ಮಹಿಳೆಯರಿಗೂ ತಲುಪಿದ್ದು, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಘಟಕ ವ್ಯವಸ್ಥಾಪಕರಾದ ಕುಮಾರ್ ನಾಯಕ್, ಸಾರಿಗೆ ನೌಕರರ ಸಂಘದ ಅಧ್ಯಕ್ಷ ಕೆಲ್ಲಂಬಳ್ಳಿ ನಾಗರಾಜು, ಮಹದೇವು, ಹೊಂಗನೂರು ಸಿದ್ದಲಿಂಗಸ್ವಾಮಿ, ಜಗದೀಶ್, ಕಿರಣ್, ಎಂ‌.ಸಿ.ಸಿದ್ದರಾಜು, ನಟರಾಜು, ಜಗದೀಶ್, ಕುಮಾರಸ್ವಾಮಿ, ಸೋಮಣ್ಣ, ರಂಗಸ್ವಾಮಿ, ಅರಸ್, ಇಲಾಖೆಯ ಅಧಿಕಾರಿಗಳು, ನೌಕರರು, ಸಿಬ್ಬಂದಿ ಹಾಜರಿದ್ದರು.