ಟಿಪ್ಪರ್ ಲಾರಿ, ಬೈಕ್ ಡಿಕ್ಕಿ: ಈರ್ವರು ಸಾವು

| Published : Oct 18 2024, 12:11 AM IST

ಸಾರಾಂಶ

ಟಿಪ್ಪರ್ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಹಾಲೇಶಪುರದ ಸಮೀಪ ಗುರುವಾರ ಸಂಭವಿಸಿದೆ.

ದಾವಣಗೆರೆ: ಟಿಪ್ಪರ್ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ಹಾಲೇಶಪುರದ ಸಮೀಪ ಗುರುವಾರ ಸಂಭವಿಸಿದೆ.

ಹಾಲೇಶಪುರ ಗ್ರಾಮದ ಕೆ.ವಿ. ರಮೇಶ (23), ಹರಪನಹಳ್ಳಿ ಕುಲಹಳ್ಳಿ ಭೋವಿ ರಮೇಶ (29) ಮೃತ ಯುವಕರು. ಹಾಲೇಶಪುರ ತಿರುವಿನ ಬಳಿ ಗುಡ್ಡದ ಕೋಮಾರನಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಅತಿ ವೇಗವಾಗಿ ಬಂದು ಚಾಲಕನ ನಿಯಂತ್ರಣ ತಪ್ಪಿ, ಬೈಕ್‌ಗೆ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ಬೈಕ್ ಸವಾರರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - (ಸಾಂದರ್ಭಿಕ ಚಿತ್ರ)