2021ರ ಮೇ 10ರಂದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಗಿ ಮೇಲ್ದರ್ಜೆಗೊಳಿಸಿದ 57 ತಿಂಗಳ ಬಳಿಕ ಇದೀಗ ಡಿ.21 ರಂದು ಒಟ್ಟು 18 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ.
ಮೂಲ್ಕಿ: ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ 2021ರ ಮೇ 10ರಂದು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಗಿ ಮೇಲ್ದರ್ಜೆಗೊಳಿಸಿದ 57 ತಿಂಗಳ ಬಳಿಕ ಇದೀಗ ಡಿ.21 ರಂದು ಒಟ್ಟು 18 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ.ರಾಜ್ಯ ಸರ್ಕಾರ 2021 ರಲ್ಲಿ ರಚಿಸಿದ 58 ಪಟ್ಟಣ ಪಂಚಾಯಿತಿಗಳಲ್ಲಿ ಒಂದಾಗಿರುವ ಮೂಲ್ಕಿ ತಾಲೂಕಿನ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಹಾಗೂ ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯಿತಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ.
ಡಿ.2 ರಂದು ಜಿಲ್ಲಾಧಿಕಾರಿ ಅಧಿ ಸೂಚನೆ ಹೊರಡಿಸಲಿದ್ದು ಡಿ.9ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. 10ರಂದು ನಾಮಪತ್ರ ಪರಿಶೀಲನೆ, 12ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ, ಡಿ.21ರಂದು ಮತದಾನ, ಡಿ. 24ರಂದು ಮತ ಎಣಿಕೆ ನಡೆಯಲಿದೆ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ 2021 ಮಾಚ್ 26ರಂದು ಅಧಿಸೂಚನೆಗೊಂಡಿತು. ಪ.ಪಂ. ತಾಳಿಪಾಡಿ, ಎಳತ್ತೂರು, ಮೆನ್ನಬೆಟ್ಟು, ಕೊಂಡೆಮೂಲ, ನಡುಗೋಡು ಮತ್ತು ಕಿಲೆಂಜೂರು ಗ್ರಾಮಗಳನ್ನೊಳಗೊಂಡಿದೆ. ಕಿನ್ನಿಗೋಳಿ ಮೆನ್ನಬೆಟ್ಟು, ಕಟೀಲು, ತಾಳಿಪಾಡಿ, ಎಳತ್ತೂರು, ಕೊಂಡೆಮೂಲ, ನಡುಗೋಡು, ಕಿಲೆಂಜೂರು ವ್ಯಾಪ್ತಿಯನ್ನು ಇದು ಹೊಂದಿದೆ.18 ವಾರ್ಡ್‌ಗಳ ವಿಂಗಡಣೆ:
2011 ರ ಜನಗಣತಿಯ ಪ್ರಕಾರ ಪಟ್ಟಣ ಪಂಚಾಯಿತಿ 16996 ಜನಸಂಖ್ಯೆ ಹೊಂದಿದ್ದು, 8006 ಮನೆಗಳಿದ್ದು ವಾರ್ಡ್ ವಿಗಂಡಣೆ ಮಾಡಲಾಗಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ 5, ಕಟೀಲು ಗ್ರಾಮ ಪಂಚಾಯಿತಿ 5, ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ 8 ವಾರ್ಡ್ ಮಾಡಲಾಗಿದೆ.ವಾರ್ಡ್ ವಿವರ: ವಾರ್ಡ್ 1 ಕೊಂಡೆಮೂಲ - ಹಿಂದುಳಿದ ವರ್ಗ-ಎ (ಮಹಿಳೆ),ವಾರ್ಡ್ 2;ಕೊಂಡೆಮೂಲ ಸಾಮಾನ್ಯ,ವಾರ್ಡ್;3 ;ನಡುಗೋಡು-ಸಾಮಾನ್ಯ, ವಾರ್ಡ್ 4;ನಡುಗೋಡು-ಹಿಂದುಳಿದ ವರ್ಗ-ಎ,ವಾರ್ಡ್;5 ;ಕಿಲೆಂಜೂರು -ಸಾಮಾನ್ಯ (ಮಹಿಳೆ), ವಾರ್ಡ್ 6 ಮೆನ್ನಬೆಟ್ಟು ವಾರ್ಡ್ -ಹಿಂದುಳಿದ ವರ್ಗ-ಬಿ, 7 ಮೆನ್ನಬೆಟ್ಟು ವಾರ್ಡ್ - 7;ಹಿಂದುಳಿದ ವರ್ಗ-ಎ (ಮಹಿಳೆ); 8 ಮೆನ್ನಬೆಟ್ಟು ವಾರ್ಡ್ - 8 ಸಾಮಾನ್ಯ, 9 ಮೆನ್ನಬೆಟ್ಟು ವಾರ್ಡ್-9 ಪರಿಶಿಷ್ಟ ಜಾತಿ (ಮಹಿಳೆ), 10ಮೆನ್ನಬೆಟ್ಟು ವಾರ್ಡ್ - 10 ಪರಿಶಿಷ್ಟ ಜಾತಿ,11 ತಾಳಿಪಾಡಿ - 11ಸಾಮಾನ್ಯ,12 ತಾಳಿಪಾಡಿ - 12 ಹಿಂದುಳಿದ ವರ್ಗ-ಎ,13 ತಾಳಿಪಾಡಿ - 13,ಸಾಮಾನ್ಯ (ಮಹಿಳೆ) 14 ತಾಳಿಪಾಡಿ - 14 ಸಾಮಾನ್ಯ, 15 ತಾಳಿಪಾಡಿ - 15,ಪರಿಶಿಷ್ಟ ಪಂಗಡ,16 ತಾಳಿಪಾಡಿ - 16 ಹಿಂದುಳಿದ ವರ್ಗ-ಎ,17 ತಾಳಿಪಾಡಿ - 17ಸಾಮಾನ್ಯ (ಮಹಿಳೆ) 18ಎಳತ್ತೂರು - 18 ಸಾಮಾನ್ಯ (ಮಹಿಳೆ) ಗೆ ಮೀಸಲಾಗಿದೆ.