ಸಾರಾಂಶ
ಪಟ್ಟಣದ ವಿದ್ಯಾನಗರ ಬಡಾವಣೆಯ ನಿವಾಸಿ ಐಶ್ವರ್ಯ ಗುಡದಿನ್ನಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅವರು, 2023ರ ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಪಟ್ಟಣದ ಹಿರಿಯ ವಕೀಲ ಶಾಂತೇಶ ಮ ಗುಡದಿನ್ನಿ ಅವರ ಹಿರಿಯ ಪುತ್ರಿಯಾಗಿರುವ ಐಶ್ವರ್ಯ, ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ವಿದ್ಯಾನಗರ ಬಡಾವಣೆಯ ನಿವಾಸಿ ಐಶ್ವರ್ಯ ಗುಡದಿನ್ನಿ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅವರು, 2023ರ ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಪಟ್ಟಣದ ಹಿರಿಯ ವಕೀಲ ಶಾಂತೇಶ ಮ ಗುಡದಿನ್ನಿ ಅವರ ಹಿರಿಯ ಪುತ್ರಿಯಾಗಿರುವ ಐಶ್ವರ್ಯ, ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಐಶ್ವರ್ಯ 1 ರಿಂದ 7ನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಪಟ್ಟಣದ ಜ್ಞಾನ ಗಂಗೋತ್ರಿ ಪ್ರಾಥಮಿಕ ಶಾಲೆಯಲ್ಲಿ, ವಿಬಿಸಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬಾಗಲಕೋಟ ಶ್ರೀ ಬಸವೇಶ್ವರ ಸೈನ್ಸ್ ಪಿಯು ಕಾಲೇಜಿನಲ್ಲಿ ಮುಗಿಸಿದರು. ಬಳಿಕ ಬೆಳಗಾವಿಯ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು 2019ರಲ್ಲಿ ತೇರ್ಗಡೆಯಾಗಿದ್ದರು. ನಂತರ 2019 ರಿಂದ 2020ರವರೆಗೆ ಬೆಂಗಳೂರಿನ ಸಿಎಂಆರ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಎಂ ಉನ್ನತ ಕಾನೂನು ಪದವಿ ಶಿಕ್ಷಣ ಪಡೆದು ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ್ದರು. ಇದೀಗ ಪರೀಕ್ಷೆ ಬರೆಯುವ ಮೂಲಕ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.ನಮ್ಮ ತಂದೆ ಪ್ರೇರಣೆ:
ನಮ್ಮ ತಂದೆ ಹಿರಿಯ ವಕೀಲರಾಗಿ ಪ್ರಥಮ ಹಂತದಿಂದ ಇಲ್ಲಿಯವರೆಗೂ ನನ್ನ ಕಲಿಕಾ ಜೀವನಕ್ಕೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಲು ಮುಖ್ಯ ಕಾರಣರಾಗಿದ್ದಾರೆ. ನಮ್ಮ ತಾಯಿ ಆಶೀರ್ವಾದ ಸಹಕಾರ ಪ್ರೇರಣೆಯಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಜನರ ಸೇವೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದ್ದು, ಬಡವರು, ನ್ಯಾಯ ಕೇಳಿ ಬಂದವರಿಗೆ ನ್ಯಾಯ ಸಿಗಬೇಕು. ಇದಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಐಶ್ವರ್ಯ ಸಂತಸ ಹಂಚಿಕೊಂಡರು. ಐಶ್ವರ್ಯ ಚಿಕ್ಕಂದಿನಿಂದಲೂ ಚೆನ್ನಾಗಿ ಓದುತ್ತಿದ್ದಳು. ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂಬುದು ಅವಳ ಆಸೆಯಾಗಿತ್ತು. ಶ್ರದ್ಧೆ, ಪರಿಶ್ರಮ ಅವಳನ್ನು ಗುರಿ ಮುಟ್ಟಿಸಿದೆ. ತಂದೆಯಾಗಿ ಹೆಮ್ಮೆ ಎನಿಸುತ್ತದೆ, ಇಡೀ ಮುದ್ದೇಬಿಹಾಳ ತಾಲೂಕಿಗೆ ಗೌರವ ತಂದಿದ್ದಾಳೆ ಹಿರಿಯ ವಕೀಲ ಶಾಂತೇಶ ಗುಡದಿನ್ನಿ ಹೇಳಿದರು.