ಆಲಮೇಲ ತಾಲೂಕು ಸಮ್ಮೇಳನದ ಲಾಂಛನ ಬಿಡುಗಡೆ

| Published : Dec 04 2024, 12:34 AM IST

ಸಾರಾಂಶ

ಸಿಂದಗಿ: ಆಲಮೇಲ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಆಲಮೇಲ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಡಿ.14 ರಂದು ಜರುಗಲಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಿಂದಗಿಯಲ್ಲಿ ಶಾಸಕ ಅಶೋಕ ಮನಗೂಳಿ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿದರು.

ಸಿಂದಗಿ: ಆಲಮೇಲ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವು ಆಲಮೇಲ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಡಿ.14 ರಂದು ಜರುಗಲಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಿಂದಗಿಯಲ್ಲಿ ಶಾಸಕ ಅಶೋಕ ಮನಗೂಳಿ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಜರುಗಲು ಎಲ್ಲ ಸೌಕರ್ಯಗಳನ್ನು ಮಾಡಲು ನಾನು ಸಿದ್ದನಿದ್ದೇನೆ. ಸಂಘಟಕರು ಎಲ್ಲರನ್ನು ತೊಡಗಿಸಿಕೊಂಡು ಕಾರ್ಯಚಟುವಟಿಕೆ ಮಾಡಬೇಕು ಎಂದು ಸಲಹೆ ನೀಡಿದರು.ಈ ವೇಳೆ ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ತಹಸೀಲ್ದಾರ್‌ ಪ್ರದೀಪಕುಮಾರ ಹಿರೇಮಠ, ಆಲಮೇಲ ತಾಲೂಕಧ್ಯಕ್ಷ ಶಿವಶರಣ ಗುಂದಗಿ, ಸಿಂದಗಿ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಗಿರೀಶ ಗತಾಟೆ, ರಮೇಶ ಭಂಟನೂರ, ಡಾ.ರವಿ ಗೋಲಾ, ಅಪ್ಪುಗೌಡ ಪಾಟೀಲ, ರವಿರಾಜ ದೇವರಮನಿ, ಸಿದ್ದಲಿಂಗ ಕಿಣಗಿ ಇತರರು ಇದ್ದರು.