ಸಾರಾಂಶ
ವಿದ್ಯಾರ್ಥಿಗಳು ಆದಷ್ಟು ಪಠ್ಯ ಜ್ಞಾನದ ಜೊತೆಯಲ್ಲಿ ಲೋಕ ಜ್ಞಾನ ಹಾಗೂ ಪ್ರಾಯೋಗಿಕವಾಗಿ ತಮ್ಮ ಕೌಶಲ್ಯಗಳನ್ನ ಬೆಳೆಸಿಕೊಳ್ಳಬೇಕೆಂದು ಬೆಳ್ಳಾವಿ ಶ್ರೀ ಕರೇಶ್ವರ ಮಠಾಧ್ಯಕ್ಷರಾದ ಶ್ರೀಕರದವೀರ ಬಸವ ಸ್ವಾಮೀಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ವಿದ್ಯಾರ್ಥಿಗಳು ಆದಷ್ಟು ಪಠ್ಯ ಜ್ಞಾನದ ಜೊತೆಯಲ್ಲಿ ಲೋಕ ಜ್ಞಾನ ಹಾಗೂ ಪ್ರಾಯೋಗಿಕವಾಗಿ ತಮ್ಮ ಕೌಶಲ್ಯಗಳನ್ನ ಬೆಳೆಸಿಕೊಳ್ಳಬೇಕೆಂದು ಬೆಳ್ಳಾವಿ ಶ್ರೀ ಕರೇಶ್ವರ ಮಠಾಧ್ಯಕ್ಷರಾದ ಶ್ರೀಕರದವೀರ ಬಸವ ಸ್ವಾಮೀಜಿ ತಿಳಿಸಿದರು. ತಾಲೂಕಿನ ಸಿಂಗಾನಳ್ಳಿ ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ಆಂಗ್ಲ ಶಾಲೆಯಲ್ಲಿ ಏರ್ಪಡಿಸಿದ್ದ ಸಿರಿ ಸಂಭ್ರಮ 2025ರ ಕಾರ್ಯಕ್ರಮದ ಮಾತನಾಡಿದ ಅವರು ಶಿಕ್ಷಣದಲ್ಲಿ ಪೋಷಕರ ಪಾತ್ರ ಮಹತ್ವ ಪೂರ್ಣವಾದುದು. ಮಕ್ಕಳಿಗೆ ಶಾಲೆಯಲ್ಲಿ ಕಲಿಯುವ ವಿದ್ಯಾಭ್ಯಾಸದಷ್ಟೇ ಮೌಲ್ಯಗಳು ಸಹ ಮಹತ್ವವಾದುದು. ಮೌಲ್ಯ ಶಿಕ್ಷಣವು ಬದುಕುವುದನ್ನು ಕಲಿಸುತ್ತದೆ. ಬದುಕಿನ ಏರಿಳಿತವನ್ನು ಉತ್ತಮವಾಗಿ ಎದುರಿಸುವ ಕೌಶಲಗಳನ್ನು ಕಲಿಸುವುದಲ್ಲದೇ ಮನಸ್ಸಿನ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಬುದ್ಧಿ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದರು.ವೆಂಕಟೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷೆ ಆರ್. ಕವಿತಾಶ್ರೀ ಮಾತನಾಡಿ ಮಕ್ಕಳು ನಿರಂತರ ಅಧ್ಯಯನ ಶೀಲರಾಗುವಂತೆ ಮಾಡಬೇಕಾದ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರದ್ದಾಗಿರುತ್ತದೆ ಎಂದು ತಿಳಿಸಿದರು.ನೃತ್ಯ ತರಬೇತುದಾರ ರುದ್ರ ಮಾಸ್ಟರ್ ಮಾತನಾಡಿ, ಮಕ್ಕಳ ಜೀವನದ ಪರಿಪೂರ್ಣ ಬೆಳವಣಿಗೆಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ತಿಳಿಸಿದರು. ಕಾರ್ಯಕ್ರಮದಲ್ಲಿ ವೆಂಕಟೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಆರ್.ವರುಣಕುಮಾರ್, ನಿರ್ದೇಶಕರ ಬಿ.ಟಿ. ಅನಿಲಕುಮಾರ, ಪ್ರಾಂಶುಪಾಲರಾಗಿ ಎಸ್ ರಾಜಶೇಖರ್ ಗ್ರಾ.ಪಂ ಸದಸ್ಯರಾದ ಜಯಮ್ಮ, ಭಾಗ್ಯಮ್ಮ ರಾಜಣ್ಣ, ಲತಾ, ಶಾರದಮ್ಮ ಟಿ. ಹಾಗೂ ಪೋಷಕರು, ಶಿಕ್ಷಕರು ಸಿಬ್ಬಂದಿಗಳು ಇದ್ದರು.