2 ಚಿನ್ನದ ಪದಕಗಳನ್ನು ಪಡೆದ ದಿನಗೂಲಿ ಕಾರ್ಮಿಕನ ಮಗ

| Published : Jan 21 2025, 12:34 AM IST

ಸಾರಾಂಶ

ಮೈಸೂರು ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ತಾಲೂಕಿನ ತಮ್ಮಹಡಳ್ಳಿ ಗ್ರಾಮದ ಎಸ್. ಗುರುರಾಜು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆಯುತ್ತಿರುವುದು.

ಚಾಮರಾಜನಗರ: ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವದಲ್ಲಿ ತಾಲೂಕಿನ ತಮ್ಮಹಡಳ್ಳಿ ಗ್ರಾಮದ ಎಸ್. ಗುರುರಾಜು ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ ಮತ್ತು ಕುಲಸಚಿವರು (ಮೌಲ್ಯಮಾಪನ) ಪ್ರೊ.ಎನ್. ನಾಗರಾಜು ಅವರು ಚಿನ್ನದ ಪದಕ ಪ್ರದಾನ ಮಾಡಿದ್ದಾರೆ. ಎಸ್. ಗುರುರಾಜು ಎಂಎ ಕನ್ನಡದಲ್ಲಿ ಪ್ರೊ.ಎ.ಆರ್. ಕೃಷ್ಣಶಾಸ್ತ್ರಿ ಚಿನ್ನದ ಪದಕ ಹಾಗೂ ಡಾ.ಪು.ತಿ. ನರಸಿಂಹಾಚಾ‌ರ್ ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದರು.

ತಮ್ಮಡಹಳ್ಳಿ ಗ್ರಾಮದ ಸೋಬಾನೆ ಕಲಾವಿದೆ ಸುಶೀಲಾ ಮತ್ತು ಕೂಲಿ ಕಾರ್ಮಿಕ ಸ್ವಾಮಿ ಅವರ ಪುತ್ರ ಗುರುರಾಜು, ನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ (ಈಗಿನ ಚಾಮರಾಜನಗರ ವಿವಿ)ದಲ್ಲಿ ಕನ್ನಡ ಎಂ.ಎ.ವ್ಯಾಸಂಗ ಮಾಡಿದ್ದು, ಜಾನಪದ ಕಲಾವಿದರಾಗಿ ಜಿಲ್ಲೆ, ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಜಂಬೆ, ದಮ್ಮಡಿ, ಕಂಜರ, ತಮಟೆ, ನಗಾರಿ, ಜೊತೆಗೆ ಇನ್ನೂ ಮುಂತಾದ ವಾದ್ಯಗಳನ್ನು ನುಡಿಸಲಿದ್ದು, ಈಗ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮದ ಗುರುರಾಜು ಅವರು ಮೈಸೂರು ವಿವಿ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿಯ ಬಳಿಕ ಮುಂದೆ ಪಿ.ಎಚ್‌ಡಿ ಮಾಡಬೇಕು ಎಂದು ಆಸೆ ಇದೆ. ಮತ್ತೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ ಎಂದು ಗುರುರಾಜು ತಿಳಿಸಿದ್ದಾರೆ.