ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಸಂವಿಧಾನ ಶಿಲ್ಪಿ, ಮಹಾಮಾನವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನದ ಆಚರಣೆಯನ್ನು ಬಾಬಾ ಸಾಹೇಬರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಬಡ ವಿದ್ಯಾರ್ಥಿಗಳಿಗೆ ಲೇಖನಾ ಸಾಮಾಗ್ರಿಗಳನ್ನು ವಿತರಿಸುವುದರ ಮೂಲಕ ವಿಶೇಷವಾದ ರೀತಿಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ ಮಹಾಮಾನವತವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಶಾಲೆಗೆ ಸೇರಿದ ದಿನಾಂಕ ಅರ್ಥಾತ್ ವಿದ್ಯೆ ಕಲಿಯಲು ಪ್ರಾರಂಭಿಸಿದ ಪ್ರಥಮ ದಿನವನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಎಂದು ಘೋಷಿಸಬೇಕಾಗಿದೆ ಎಂದರು. ಮಹಾರಾಷ್ಟ್ರದಲ್ಲಿರುವ ಸರ್ಕಾರವು ಈಗಾಗಲೇ ನವೆಂಬರ್ 7 ರಂದು ವಿದ್ಯಾರ್ಥಿಗಳ ದಿನಾಚರಣೆ ಯನ್ನಾಗಿ ಆಚರಿಸಲು ಈಗಾಗಲೇ ಆದೇಶಿಸಿದೆ. ಅಂಬೇಡ್ಕರ್ ರವರು 7.11.1900 ರಲ್ಲಿ ಪ್ರತಾಪ್ ಸಿಂಹ ಹೈಸ್ಕೂಲ್, ರಾಜವಾಡ, ಸತಾರ ಜಿಲ್ಲೆಯಲ್ಲಿ ಶಾಲೆಗೆ ಸೇರಿದ್ದರು. ನಂತರದ ದಿನಗಳಲ್ಲಿ ವಿದ್ಯೆಯಲ್ಲಿ ಮಹಾ ಸಾಧಕರಾಗಿ, ವಿಶ್ವ ಅರ್ಥಶಾಸ್ತ್ರಜ್ಞರಾಗಿ, ಸಮಾಜ ವಿಜ್ಞಾನಿಯಾಗಿ, ಉತ್ತಮ ಇತಿಹಾಸತಜ್ಞರಾಗಿ, ಕಾನೂನು ತಜ್ಞರಾಗಿ, ನಮ್ಮ ಭಾರತದ ಸಂವಿಧಾನ ಶಿಲ್ಪಿಯಾಗಿ ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ, ಸಾಮಾಜಿಕ ನ್ಯಾಯದ ಪ್ರತೀಕವಾಗಿ ಸಮಾನತೆಯ ಪ್ರಜಾತಂತ್ರ ವ್ಯವಸ್ಥೆಗೆ ಕಾರಣರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಕಲಿತು ಅವರಂತೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಯುಗಪುರುಷ ಆಗಲಿ ಎಂದು ಇಂತಹ ವಿಶಿಷ್ಟ ಆಚರಣೆಯನ್ನು ಎಲ್ಲಾ ಸಂಘಟನೆಗಳ ಬುದ್ಧಿಜೀವಿಗಳು ಸ್ವಾಗತ ಮಾಡಿದ್ದಾರೆ ಎಂದರು
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈ.ಎಸ್. ಈ ಕುರಿತು ಮಾತನಾಡಿ ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲಿ ನವೆಂಬರ್ 7 ರಂದು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಣೆ ನಡೆಯಲು ಒಂದು ವಿಶೇಷ ಆದೇಶ ಹೊರಡಿಸಿಬೇಕಾಗಿದೆ ಎಂದರಲ್ಲದೇ ಭಾರತದ 145 ಕೋಟಿ ಜನರು ಇಂದು ಸಹಬಾಳ್ವೆ ಮತ್ತು ಸಮಾನತೆಯಿಂದ ಜೀವನ ನಡೆಸುತ್ತಿದ್ದಾರೆಂದರೆ ಅದಕ್ಕೆ ಮೂಲ ಕಾರಣ ಬಾಬಾ ಸಾಹೇಬರು ನಮ್ಮ ಭಾರತಕ್ಕೆ ನೀಡಿದ ಪವಿತ್ರ ಗ್ರಂಥವೆಂದೇ ಭಾವಿಸುತ್ತಿರುವ ನಮ್ಮ ಸಂವಿಧಾನವೆಂಬ ಮಹಾಗ್ರಂಥ ಎಂದರು.ಅಂದಿನ ದಿನಗಳಲ್ಲಿ ಶೋಷಣೆಗೊಳಪಟ್ಟು, ಹಲವಾರು ಅವಮಾನಗಳನ್ನು ಎದುರಿಸಿ, ಅಪಮಾನಗಳನ್ನು ಹೊತ್ತು, ನಿಷ್ಠೆ ಶ್ರದ್ಧೆ ಮತ್ತು ಛಲದಿಂದ ಅತ್ಯಂತ ಕಠಿಣಕರವಾದ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ, ಉನ್ನತ ಪದವಿಗಳನ್ನು ಪಡೆದು, ಹಲವಾರು ಆಲೋಚನೆಗಳಿಂದಲೇ ರಚಿತವಾಗಿರುವುದು ಇದೀಗ ನಮ್ಮ ಹೆಮ್ಮೆ, ನಮ್ಮ ಸಂವಿಧಾನವನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ಇಡೀ ವಿಶ್ವವೇ ಅದನ್ನು ಮಾದರಿಯನ್ನಾಗಿ ಸ್ವೀಕಾರ ಮಾಡಿದೆ ಎಂದರೆ ಅವರು ಅಂದಿನ ಕಾಲಘಟ್ಟದಲ್ಲಿ ವಿದ್ಯಾಭ್ಯಾಸ ಮಾಡಿದ್ದೇ ಮೂಲ ಕಾರಣ ಎಂದರು.
ಆದುದರಿಂದ ನಮ್ಮ ಸರ್ಕಾರಗಳು ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾದ ನವೆಂಬರ್ 7 ನ್ನು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಎಂದು ಘೋಷಿಸಿದ್ದಲ್ಲಿ ನಮ್ಮ ದೇಶದಲ್ಲಿ ಅನಕ್ಷರತೆಯ ಕೂಗು ಎಂದಿಗೂ ಕೇಳಿಬರುವುದಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವಿದ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷರಾದ ಕಿರಣ್ ವೈ.ಎಸ್, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್ ಎಸ್, ಯುವ ಘಟಕದ ಜಿಲ್ಲಾಧ್ಯಕ್ಷ ಹಾಗೂ ಅಟ್ರಾಸಿಟಿ ಕಮಿಟಿಯ ಸದಸ್ಯರಾದ ಗೋವಿಂದ ರಾಜ್.ಕೆ., ಜಿಲ್ಲಾ ಗೌರವ ಅಧ್ಯಕ್ಷರಾದ ಗೂಳೂರು ರಾಜಣ್ಣ, ದಲಿತ ಸಂರಕ್ಷ ಸಮಿತಿಯ ತುಮಕೂರು ಜಿಲ್ಲಾ ಅಧ್ಯಕ್ಷರಾದ ಸಂತೆಪೇಟೆ ಸುರೇಶ್ ಟಿ.ಸಿ., ಮಹಾನಗರ ಪಾಲಿಕೆ ಮಾಜಿ ಉಪಾಧ್ಯಕ್ಷರಾದ ಹನುಮಂತರಾಯಪ್ಪ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಇಂದ್ರಕುಮಾರ್ ಡಿ.ಕೆ., ಅಂಬೇಡ್ಕರ್ ದಂಡು ಜಿಲ್ಲಾ ಅಧ್ಯಕ್ಷರಾದ ದಂಡು ಕುಮಾರ್. ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ತುಮಕೂರು ನಗರ ಅಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್. ಪದಾಧಿಕಾರಿಗಳಾದ ತ್ಯಾಗರಾಜ್ ಕೆ. ಸಂತು. ಪುರದ ಕಟ್ಟೆ ಮಂಜು. ಮನು. ಗಂಗಾಧರ್ ಜಿ. ಆರ್. ರಂಗಸ್ವಾಮಿಯ ಕೆ.ಎಸ್. ಶಿವಣ್ಣ. ಇನ್ನು ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))